ಬಪ್ಪರೆ………….. ರೇಂಜರ್ ಸಾಹೇಬ..?
ನದಿ ಹಳ್ಳ ಇಲ್ಲದಿದ್ದ ಜಾಗದಲ್ಲಿ ಸೇತುವೆ ಕಟ್ಟುತ್ತೇನೆಂದು ಹೇಳುವನೆ ನಿಜವಾದ ರಾಜಕಾರಣಿ ಅಂತಾ ಸಂಸತ್ ಸದಸ್ಯ ರಾಗಿದ್ದಾಗ ಅಮಿತಾಬ್ ಬಚ್ಚನ್ ಹೇಳಿದ ಮಾತು ಇಂದು ನೆನಪಾಗುತ್ತದೆ.
ಈ ಮಾಹಿತಿ ಹಕ್ಕು ಯಾಕಾದರೂ ಬಂತೋ ಅಂತಾ ಕೆಲವು ಅಧಿಕಾರಿಗಳು ತಲೆ ಚೆಚ್ಚಿ ಕೊಳ್ಳುತ್ತಿದ್ದಾರೆ ,. ಕೆಲವು ಅಧಿಕಾರಿಗಳು ಮಾಹಿತಿ ಕೆಳಿದವನೆ ತಲೆ ಚಚ್ಚಿ ಕೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ,
ಖಾನಾಪುರ ತಾಲೂಕಿನ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೊಟ್ಟ ಮಾಹಿತಿಯ ದಾಖಲೆ ನೋಡಿದರೆ ಆ ಅಧಿಕಾರಿಯ ಹುಂಬತನ ಮೆಚ್ಚಲೇ ಬೇಕು.
ಕಳೆದ ವರ್ಷದ ಅತಿವೃಷ್ಟಿ ಮಳೆಯಿಂದ ಮಲಪ್ರಭಾ ನದಿಯ ನೀರಿನ ಮಹಾಪೂರ ಬಂದು ನಮ್ಮ ಕಚೇರಿಗೆ ನುಗ್ಗಿ ಕಚೇರಿಯು ಸಂಪೂರ್ಣ ಜಲಾವೃತ ಗೊಂಡು, ಕಚೇರಿಯಲ್ಲಿ ದ್ದಂತಹ ಗಣಕ ಯಂತ್ರ, ಪ್ರಿಂಟರ್, ಹಾಗೂ ಬಯೋ ಮೆಟ್ರಿಕ್ ಮಷಿನ ಗಳು, ಹಾಳಾಗಿದ್ದು ಫೈಲ್ ಗಳು,ಅರಣ್ಯೀಕರಣ ದಾಖಲಾತಿ ಪಾತ್ರಗಳು ಎಂಬಿ ಪುಸ್ತಕಗಳು ಕಚೇರಿಯ ಇನ್ನಿತರ ಪತ್ರಗಳು ನೀರಿನಲ್ಲಿ ತೇಲಿಕೊಂಡು ಹೋಗಿದ್ದು ,ಯಾವುದೇ ತರಹದ ಹಳೇ ದಾಖಲಾತಿ ತಮ್ಮ ಬಳಿ ಲಭ್ಯವಿಲ್ಲವೆಂದು ಲಿಖಿತವಾಗಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಆದಮೇಲೆ ನಮ್ಮ ವರದಿಗಾರ ತನಿಖೆಗಿಳಿದಾದ ನಂತರ ಈ ಅಧಿಕಾರಿ ಇಲಾಖೆಗೆ ಖರ್ಚಾಕಿದ್ದು ತನ್ನ ಮಾವ ಕೊಟ್ಟ ದುಡ್ಡಿನಿಂದ ಅಂತಾ ಜನ ಪ್ರಶ್ನಿಸುತ್ತಿದ್ದಾರೆ, ಈತನ ಇಲಾಖೆ ಸಮೀಪ ತೆರಳಿ ವಿಚಾರಣೆ ಮಾಡಿದಾಗ ಖಾನಾಪುರ ತಾಲೂಕಿನ ಗಿಡಗಳು ಹರಿದು ಹೋಗಿದಾವು, ನಮ್ಮ ರೇಂಜರ್ ಸಾಹೇಬ್ರು ಹರಿದು ಹೋಗಾವರಿದ್ರು ನಾವೇ ಅವರನ್ನ ಉಳಿಸಿದ್ದೇವೆ, ಅಂತಾ ಜನ ಮುಸಿ ಮುಸಿ ನಗುತ್ತಿದ್ದಾರೆ
ಬಾಪು ಗೌಡ ಪಾಟೀಲ