ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆ. ………..?
ಮೊನ್ನೆ ಸ್ನೇಹಿತನೊಬ್ಬ ಫೋನ್ ಮಾಡಿದ್ದ ಬಾಪೂಗೌಡ್ ಖಾಸಗಿ ಶಾಲೆ ಅವರು ಸಣ್ಣ ಮಕ್ಕಳ ಅಡ್ಮಿಷನ್ ಗೆ ಲಕ್ಷಾಂತರ ರೂಪಾಯಿ ಡೊನೇಷನ್ ತೊಗೊಳ್ತಾ ಇದ್ದಾರೆ ,”ಅವರ ಬಗ್ಗೆ ಮಾಹಿತಿ ಕಲೆ” ಹಾಕಿ ಅಂತಾ ಹೇಳಿ ಫೋನ್ ಕಟ್ ಮಾಡಿದ,. ಮದುವೆಯಾಗಿ ಹನಿಮೂನ್ ಮುಗಿಸಿ ಬರುವ ಜೋಡಿಗಳು ತಮ್ಮನು ತಾವೇ ಪ್ರಶ್ನಿಸಿ ಕೊಳ್ಳುವುದು ಏನೆಂದರೆ ಹುಟ್ಟುವ ಮಗುವನ್ನು ಯಾವ ಹೋಂ ಪ್ಲೇ ಗೆ , ಸೇರಿಸಬೇಕು , ಎಲ ಕೆಜಿ ,ಯು ಕೆಜಿ, ಪ್ರಾಥಮಿಕ ಶಾಲೆ ಯಾವುದನ್ನ ಆಯ್ಕೆ ಮಾಡಿ ಕೊಳ್ಳಬೇಕು ಎಂದು ಚರ್ಚಿಸುತ್ತಾರೆ ,ಈ ದೇಶದ ಶ್ರೀಮಂತರು ಡೆಹರಾಡೂನ್ ಡೂನ್ ಸ್ಕೂಲ್ಗೆ ಸೇರಿಸಬಹುದು.
ಅವರ ಹತ್ತಿರ ಹರಿದಾಡುವ ಹರಾಮಿ ದುಡ್ಡಿನಿಂದ ದೇಶದ ಯಾವುದೇ ಶಾಲೆಗಳಿಗೆ ಸೇರಿಸಬಹುದು, ಆದರೆ ಈ ದೇಶದ ಮಧ್ಯಮ ವರ್ಗದ ಜನ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪಡಬಾರದ ಕಷ್ಟ ಪಡುತ್ತಿದ್ದಾರೆ
ಮೊನ್ನೆ ಬೆಂಗಳೂರಿಗೆ ಹೋದಾಗ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ ಅವರ ಮಗನ
ಎಲ್ಕೆಜಿ ಪಿ ಕೇಳಿ ದಂಗಾಗಿ ಹೋದೆ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯ ಶಾಲೆಯದು ಎಲ್ಕೆಜಿ ಅಡ್ಮಿಶನ್ಗೆ 700000 ಕೊಟ್ಟಿದೀನಿ ಅಂತ ಹೇಳಿದ, ನನಗೆ ಕನ್ಫ್ಯೂಸ್ ಆಗಿ ಎಷ್ಟು ಅಂತ ಕೇಳಿದೆ ಮತ್ತೆ ಅದೇ ದಾಟಿಯಲ್ಲಿ 7ಲಕ್ಷ ಅಂತ ಹೇಳಿದ.
ಅನಂತರ ದುಡ್ಡು ತುಂಬಿದ ರಸೀದಿ ತೋರಿಸಿದ ,ರಸಿ ದಿಯಲ್ಲಿ ಅಡ್ಮಿಶನ್ ಅಂತ ಎಲ್ಲೂ ನಮೂದಿಸಿಲ್ಲ ” ಟ್ರಸ್ಟ್ ಗಳಿಗೆ ದೇಣಿಗೆ” ಕಟ್ಟಡದ ದೇಣಿಗೆ ಹಾಗೂ ತಮ್ಮ ವಿಶ್ವಾಸಿಕ ಬ್ಯಾಂಕ್ ನಂಬರ್ ಗಳಿಗೆ ದುಡ್ಡು ಜಮೆ ಮಾಡಿಕೊಂಡಿದ್ದರು
ವಿಕ್ಷೆಕರೆ ಇತ್ತೀಚಿನ ಹತ್ತಾರು ವರ್ಷಗಳಲ್ಲಿ ಈ ದಂಧೆ ಜೋರಾಗಿ ನಡೆದಿದೆ, ರಾಜ್ಯದ ಪ್ರತಿಷ್ಠಿತ ರಾಜಕಾರಣಿಗಳು ಮಠಾಧೀಶರು ಕ್ರಿಶ್ಚನ್ ಮತ್ತು ಮೈನಾರಿಟಿ ಸಂಸ್ಥೆಗಳು. ಈ ದಂಧೆಯ ರುವಾರಿಗಳು ಈ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಅಡ್ಮಿಶನ್ಗೆ ರಾತ್ರಿಯೇ ನಂಬರ್ ಹಚ್ಚಿ ಅಡ್ಮಿಶನ್ ಫಾರಂ ಪಡೆಯಬೇಕು
ಅರ್ಜಿ ಫಾರ್ಮ ಪಡೆದಮೇಲೆ ಮಕ್ಕಳ ಇಂಟರ್ವ್ಯೂ ಮಾಡಬೇಕು ನಂತರ ಚೌಕಾಶಿ ಶುರುವಾಗುತ್ತದೆ ನಂತರ
ಅಸಲಿ ಆಟ ಶುರು ಮಾಡುವ ಸಂಸ್ಥೆಗಳು ಎಲ್ ಕೆ ಜಿ ಮಕ್ಕಳಿಗೆ ಲಕ್ಷಾಂತರ ಹಣ ನೀಡಬೇಕೆಂದು ಬೇಡಿಕೆ ಇಡುತ್ತಾರೆ
ಕೊಡುವ ಸಾಮರ್ಥ್ಯವಿದ್ದ ಅವರಿಗೆ ಕಟ್ಟಡ ಕಟ್ಟುವ ದೇಣಿಗೆ ಹೆಸರಿಗೆ ಹಾಗೂ ನಾಲ್ಕಾರು ಬೇನಾಮಿ ಅಕೌಂಟ್ಗೆ ದುಡ್ಡು ತುಂಬಲು ಮೌಖಿಕವಾಗಿ ತಿಳಿಸುತ್ತಾರೆ
ಅಲ್ಲಿ-ಇಲ್ಲಿ ಸಾಲ ಮಾಡಿ ದುಡ್ಡು ಹೊಂದಿಸಿ ದೊಡ್ನೆ ಎರಡನೇ ಆಟ ಶುರು ಮಾಡುತ್ತಾರೆ
ಸಂಸ್ಥೆಯ ಮಕ್ಕಳನ್ನು ತರಲು ವಾಹನಕ್ಕೆ ತಿಂಗಳು ಬಾಡಿಗೆ ಫಿಕ್ಸ್ ಮಾಡುತ್ತಾರ, ಅದಕ್ಕೆ ಹು ಎಂದು ದುಡ್ಡು ತುಂಬಿಸಿಕೊಂಡು ಶಾಲೆಗಳು ಪ್ರಾರಂಭವಾಗುತ್ತದೆ,
ಪ್ರಾರಂಭವಾದ ಮರುದಿನವೇ” ಪೆನ್ಸಿಲು ಪಾರ್ಟಿ ಪುಸ್ತಕ ಸಾಕ್ಸ್ ಬೂಟು ಕುಡಿಯುವ ನೀರಿನ ಬಾಟಲಿ ಟಿಫಿನ್ ಬಾಕ್ಸ್ ಎಲ್ಲರ ಹೆಸರಲ್ಲಿ
ಮತ್ತಷ್ಟು ದುಡ್ಡು ಕಕ್ಕಿಸುತ್ತಾರೆ” ಇಷ್ಟೆಲ್ಲ ಮಾಡುವುದರ ಒಳಗಾಗಿ ಗಾಗಿ ಮಗುವನ್ನು ಹೆತ್ತ ತಂದೆ ತಾಯಿಗೆ ಸಾಕು ಬೇಕಾಗಿರುತ್ತದೆ.
ವೀಕ್ಷಕರು ಕೇಳಬಹುದು ಇಷ್ಟೆಲ್ಲಾ ಆದರೂ ಈ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದಿಲ್ಲವಾ ಎಂದು
ಪ್ಲೇಹೋಂ ನಿಂದ ಹಿಡಿದು ಎಲ್ಕೆಜಿ-ಯುಕೆಜಿ ಏಳನೆಯ ತರಗತಿಯವರೆಗೂ ಈ ಶಾಲೆಗಳು ಸರಕಾರದ ಬಿಡಿಗಾಸನ್ನು ಪಡೆಯೋದಿಲ್ಲ ಸರಕಾರ ದುಡ್ಡು ಸಂಸ್ಥೆಗಳು ಪಡೆಯದಿದ್ದರೆ ಸರ್ಕಾರದ ನಿಯಂತ್ರಣ ಸಂಸ್ಥೆಗಳ ಮೇಲೆ ಇರುವುದಿಲ್ಲ
ಇಲ್ಲಿ ಬಿ ಇ ಒ ಆಗಲಿ, ಡಿ ಡಿ ಪಿ ಆಯ ಆಗಲಿ, ಈ ಸಂಸ್ಥೆಗಳನ್ನು ತಿರುಗಿಯೂ ನೋಡುವುದಿಲ್ಲ ಇಷ್ಟೆಲ್ಲಾ ಆದರೂ ಇಲ್ಲಿ ಶಾಲೆ ಕಲಿಸುವವರು ನುರಿತ ಶಿಕ್ಷಕರ ಅಂತ ನೋಡಿದರೆ ಇವರ್ಯಾರು ಪರಿಣಿತ ಶಿಕ್ಷಕರಲ್ಲ ಎಲ್ಲಾ ಡಿಗ್ರಿ ಫೇಲಾದ ಗಿರಾಕಿಗಳು
ನಾವು ನೀವು ಕೂಡಿ ಭವ್ಯ ಭಾರತ ಕಟ್ಟೋಣ ವೀಕ್ಷಕರೆ
ಬಾಪುಗೌಡ ಪಾಟೀಲ್