ಕೃಷಿ ಮಂತ್ರಿಗಳೇ ರಿಯಲ್ ಹೀರೋ ಆಗ್ರಿ
ಕೃಷಿ ಮಂತ್ರಿ ಬಿ .ಸಿ . ಪಾಟೀಲ್ರೇ ಪೊಲೀಸ್ ಇಲಾಖೆ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದ್ರಿ , ಅಲ್ಲೂ ಬಹಳ ದಿನ ತಡೀಲಿಲ್ಲ ಗಾಂಧಿನಗರದ ಮಂದಿ ನಿಮಗೆ ಚಲೋಟೋಪಗಿ ಹಾಕಿ ಕಳಿಸಿದರು. ಅದು ಬ್ಯಾಡ ಅಂತ ಹಿರೇಕೆರೂರು ಕ್ಷೇತ್ರಕ್ಕೆ ಬಂದ ರಾಜಕೀಯಕ್ಕೆ ಇಳ ದ್ರಿ, ಅಲ್ಲೂ ಜನ ಒಮ್ಮೆ ಎಬ್ಬಿಸಿದ್ದರು, ಒಮ್ಮೆ ಕೆಡವಿದರು ರೈಟ್ ಟೈಮ್ ನಾಗ
ಬಿಜೆಪಿ ಸೇರಿ ಲಾಟರಿ ಹೊಡೆದ ಕೃಷಿ ಮಂತ್ರಿ ಆಗಿದ್ದೀರಿ
ರೈತರ ಗೋಳು ಕೇಳಬೇಕೆಂದರೆ ಈ ಟೈಮ್ ನಾಗ ನೀವು ಕೆಲಸ ಸುರು ಮಾಡ್ರಿ ,ನಿಮ್ ಇಲಾಖೆಯಿಂದ ಕೆಲವು ಮಂದಿ ಆಫೀಸರ್ ನ ಕರ್ಕೊರಿ , {ವಿಶ್ವಾಸಿಕಇದ್ದೋರು}ಆಫೀಸರ್ ಗಳಿಗೆ ನೀವೆಲ್ಲಿ ಹೊರಟಿದ್ದೀರಿ ಅಂತ ಹೇಳಬೇಡ್ರಿ ,ನಿಮ್ಮ ಪಿ ಎ ಗಳಿಗೂಹೇಳಬೇಡ್ರಿ,
ಉತ್ತರ ಕರ್ನಾಟಕದ ಕಡೆ ಬರ್ರಿ ಗೊಬ್ಬರದ ಬೀಜದ ಅಂಗಡಿ ಗೊಳ ಲಿಸ್ಟ್ ತೋಗೊರಿ, ಜೋಳ, ಸೂರ್ಯಕಾಂತಿ,ಸೋಯಾಬಿನ, ಶೇಂಗಾ, ಬೀಜದ ಪಾಕಿಟ್ ಗೋಳ ತೊಗೋರಿ
ಅದಕ್ಕೊಂದು ಫೋರ್ ನಾಟ್ ಸೆವೆನ್ ಗೂಡ್ಸ್ ಗಾಡಿ ನು ತೊಗರಿ ಆ ಪಾಕಿಟ್ ಗೋಳ
ಜರ್ಮಿನೇಶನ್ ಎಷ್ಟು ಪರ್ಸೆಂಟ್ ಅಂತ ನಿಂತ ಟೆಸ್ಟ್ ಮಾಡಸಿರಿ
ಅದರ ಗುಡಿ ಈ ಗೊಬ್ಬರ ಅಂಗಡಿಯಾಗಿನ್ನ ಸ್ಪೀಕ್, ಜೈಕಿಸಾನ್ ,ಮಂಗಳ ಗೊಬ್ಬರ ,ತಗೊಂಡು ಅದರಾಗ ಎನ್ ಪೀ ಕೆ ಪೋಷಕಾಂಶಗಳು ಏನ ಅದಾವ ಅನ್ನೋದನ್ನ ಟೆಸ್ಟ್ ಮಾಡಿಸಿರಿ .
ಅವಾಗ ಬೀಜ ಯಾಕೆ ನಡುವಲ್ಲು, ಬೆಳೆ ಯಾಕೆಬೆಳೆವಲ್ಲು, ಅಂತ ತಮಗೆ ಸಮಕ್ಷಮ ಗೊತ್ತಾಗ ತೈತ.
“ಅವಾಗ ತಾವು ರಿಯಲ್ ಹೀರೋ ಆಗ್ತೀರಿ ಎಲ್ಲ ರೈತರು ತಮಗೊಂದು ಸೆಲ್ಯೂಟ್ ಹೊಡಿತಾರೆ”
ಬಾಪು ಗೌಡ ಪಾಟೀಲ್