ಯಾಕೋ ಇಂದು “ಯಜಮಾನ” ಚಿತ್ರ ನೆನಪಾಯಿತು….!
ನಾನು ಮಧ್ಯಾನ ಮಲಗಿ ಕೊಳ್ಳುವ ರೂಢಿ ಆಗಿದೆ, ಅದು ಒಂದು ತಾಸು ಮಾತ್ರ, ಆವೇಳೆಯಲ್ಲಿ ನನ್ನ ಮೊಬೈಲ್ ನಾಟ್ ರಿಚೆಬಲ್ ಆಗಿರುತ್ತದೆ.
ಒಂದು ತಾಸು ನಿದ್ರೆ ಎಚ್ಚರ ಆದೊಡನೆ ಹತ್ತಾರು ಮಿಸ್ ಕಾಲ ಗಳು ಇದ್ದವು, ನಾಟ್ ರಿಚೇಬಲ್ ತಗೆದೊಡನೆ ಸ್ನೇಹಿತ ನೊಬ್ಬನ ಫೋನ್ ರಿಂಗ್ ಆಯಿತು, ದೋಸ್ತ್ ವಾಟ್ಸ್ ಅಪ್ ಫೇಸ್ ಬುಕ್ ನೋಡಿದಿ ಎನಾ ಅಂದಾ, ನೋಡಲು ಶುರು ಮಾಡಿದೆ.
20ವರ್ಷಗಳ ಹಿಂದೆ ನನ್ನ ಸ್ನೇಹಿತರು ಒತ್ತಾಯ ಪೂರ್ವಕವಾಗಿ ಸಿನೆಮಾ ನೋಡಲು ಕರೆದು ಕೊಂಡು ಹೋಗಿದ್ದರು. ಆದಿನ ಮಾನದಲ್ಲಿ ಆಸಿನೆಮಾ ಕನ್ನಡ ಚಿತ್ರ ರಂಗದಲ್ಲಿ ದಾಖಲೆ ನಿರ್ಮಿಸಿತ್ತು.
ಅದು ಒಂದು ಕೌಟಂಬಿಕ ಚಿತ್ರ ವಾಗಿತ್ತು, ನಾಲ್ಕು ಜನ ಅಣ್ಣಾ ತಮ್ಮಂದಿರರು ,ಅದೊಂದು ಬಡ ಕುಟುಂಬ, ಹಿರಿಯಣ್ಣ ವಿಷ್ಣು ವರ್ಧನ್ ದ್ವಿಪಾತ್ರದಲ್ಲಿ , ಅಭಿನಯಿಸಿದ್ದರು. ಶಶಿ ಕುಮಾರ್, ಅಭಿಜಿತ್ ತಮ್ಮಂದಿರ ಪಾತ್ರದಲ್ಲಿ ಅಭಿನಯಿಸಿದ್ದರು, ಹಿರಿಯಣ್ಣ ವಿಷ್ಣುವರ್ಧನ್ ಕುಟುಂಬದ ಉನ್ನತಿಗಾಗಿ ಶ್ರಮಿಸಿ ಕುಟುಂಬ ಮೇಲ್ದರ್ಜೆಗೆ ಬರುವಂತೆ ಶ್ರಮಿಸಿದ್ದರು,ನಂತರ ಆ ಕುಟುಂಬ ಒಡೆಯಲು ಹುನ್ನಾರಗಳು ನಡೆಯುತ್ತವೆ, ಹಿರಿಯಣ್ಣ ವಿಷ್ಣುವರ್ಧನ್ ತಮ್ಮಂದಿರ ಮದುವೆ ಆಗದೆ ತನಗೆ ಒದಗಿ ಬಂದ ಕಂಕಣ ಭಾಗ್ಯ ನಿರಾಕರಿಸುತ್ತಾನೆ, ನಂತರ ಆಮನೆ ಒಡೆಯಲು ,ಕಂಕಣ ಭಾಗ್ಯ ತಂದವರೆ ಹಿರಿಯಣ್ಣ ವಿಷ್ಣುವರ್ಧನ್ ಮನೆ ಬಿಟ್ಟು ಹೋದರೆ ತನ್ನ ಮಗಳನ್ನು ಕೊಡುವುದಾಗಿ ಆಶ್ರೀಮಂತ್ ಹೇಳುತ್ತಾನೆ.
ಹಿರಿಯಣ್ಣ ವಿಷ್ಣು ವರ್ಧನ್ ಮನೆ ಬಿಟ್ಟು ಹೋಗುತ್ತಾನೆ ,ಈ ಸುದ್ದಿ ತಿಳಿದ ತಮ್ಮ ತನಗೆ ಹೆಣ್ಣು ಕೊಡಲು ಬಂದ್ ಅಶ್ರೀಮಂತ್ ನೀಗೆ ನಮ್ಮ ಅಣ್ಣ ಬಂದರೆ ಮಾತ್ರ ನಿನ್ನ ಮಗಳಿಗೆ ತಾಳಿ ಕಟ್ಟುತ್ತೇನೆ ಎಂದು ಹೇಳುತ್ತಾನೆ.
ತಮ್ಮ ಅಣ್ಣನನ್ನು ಕರೆದ ಕೊಂಡು ಬಂದ ತಾಳಿ ಕಟ್ಟುತ್ತಾನೆ ಅಣ್ಣ , ತಮ್ಮಂದಿರ ಪುನರ್ಮಿಲನ ವಾಗು ತ್ತಾರೆ..