Home / new delhi / ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..!

ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..!

Spread the love

ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..!

ನವದೆಹಲಿ, ಜೂ.21- ಕಿಲ್ಲರ್ ಕೊರೊನಾ ವೈರಸ್ ಹಾವಳಿ ತೀವ್ರವಾಗುತ್ತಿರುವ ಸಂದರ್ಭದಲ್ಲೇ ರೋಗಿಗಳಿಗೆ ವರದಾನವಾಗಬಲ್ಲ ಮಾತ್ರೆಯನ್ನು ಭಾರತದ ಗ್ಲೆನ್‍ಮಾರ್ಕ್ ಔಷಧಿ ತಯಾರಿಕೆ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಫ್ಯಾಬಿಫ್ಲೂ ಬ್ರಾಂಡ್ ನೇಮ್‍ನಲ್ಲಿ ನಿನ್ನೆ ಸಂಜೆಯಷ್ಟೇ ಬಿಡುಗಡೆ ಮಾಡಿರುವ ಈ ಮಾತ್ರೆ ಹೆಸರು ಫವಿಪಿರವಿರ್. ಲಘು ಮತ್ತು ಸಾಧಾರಣ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ ಕೊರೊನಾ ರೋಗಿಗಳಿಗೆ ಈ ಮಾತ್ರೆ ಅತ್ಯಂತ ಪರಿಣಾಮಕಾರಿ ಎಂದು ಸಂಸ್ಥೆ ಬಣ್ಣಿಸಿದೆ.

ಈ ಮಾತ್ರೆ ಬೆಲೆ 103ರೂ.ಗಳು. ಲಘು ಮತ್ತು ಸಾಧಾರಣ ಸೋಂಕು ಇರುವ ರೋಗಿಗಳಿಗೆ ಇದು ಮ್ಯಾಜಿಕ್ ಬುಲೆಟ್ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ, ತೀವ್ರ ಮತ್ತು ಗಂಭೀರ ಸ್ವರೂಪ ಸೋಂಕಿತರಲ್ಲಿ ವೈರಾಣು ಹೊರೆಯನ್ನು ಕಡಿಮೆ ಮಾಡುವಲ್ಲಿ ಈ ಮಾತ್ರೆ ಸಹಕಾರಿ ಎಂದು ಸಂಸ್ಥೆಯ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಮಾತ್ರೆ ರೂಪದ ಔಷಧಿ ಬಿಡುಗಡೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಮ್ಮತಿ ನೀಡಿದ್ದು, ಇಂದಿನಿಂದ ಈ ಮಾತ್ರೆಗಳು ದೇಶಾದ್ಯಂತ ಲಭಿಸುತ್ತದೆ.ಈ ಮಾತ್ರೆಗಳು ಮಂದ ಸ್ವರೂಪದ ರೋಗಿಗಳಿಗೆ ಪರಿಣಾಮಕಾರಿಯಾಗಲಿದೆ ಎಂಬುದು ಈಗಾಗಲೇ ದೃಢಪಟ್ಟಿದ್ದು, ಈ ಮಾತ್ರೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮೇಲ್ದರ್ಜೆಗೇರಿಸಲು ಸಂಶೋಧನೆ ಮುಂದುವರೆದಿದ್ದು, ಮುಂದಿನ ವಾರ ಪೂರಕ ಫಲಿತಾಂಶ ಲಭಿಸುವ ನಿರೀಕ್ಷೆ ಇದೆ.


Spread the love

About Admin Bapu

Check Also

ಬೆಳಗಾವಿ ಬಿಜಾಪುರ ಬಾಗಲಕೋಟಜಿಲ್ಲೆಗಳ 100 ಕೋಟಿ ಟೆಂಡರ್ ಆಹ್ವಾನ…

Spread the loveಬೆಳಗಾವಿ ,ಬಿಜಾಪುರ ,ಬಾಗಲಕೋಟ ,ಜಿಲ್ಲೆಗಳ ನೂರು ಕೋಟಿ ಟೆಂಡರ್ ಆಹ್ವಾನ… ಟೆಂಡರ್ ಮೊತ್ತ :   100ಕೋಟಿ   …

Leave a Reply

Your email address will not be published. Required fields are marked *