ಕಳೆದ ಎರಡು ವಾರಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 60 ಪೈಸೆ, ಪೆಟ್ರೋಲ್ ದರದಲ್ಲಿ 35 ಪೈಸೆ ಏರಿಕೆಯಾಗಿದೆ.
ಒಟ್ಟಾರೆ ಎರಡು ವಾರಗಳ ಅವಧಿಯಲ್ಲಿ ಡೀಸೆಲ್ ದರದಲ್ಲಿ 8 ರೂ. 88ಪೈಸೆ ಏರಿಕೆಯಾಗಿದ್ದರೆ, ಪೆಟ್ರೋಲ್ ದರದಲ್ಲಿ 7ರೂ. 97 ಪೈಸೆ ಏರಿಕೆಯಾಗಿದೆ.
ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 81 ರೂ. 81 ಪೈಸೆ ಆಗಿದ್ದು, ಡೀಸೆಲ್ ಬೆಲೆ 74 ರೂ. 43 ಪೈಸೆ ಆಗಿದೆ. ನಿರಂತರ ಇಂಧನ ಬೆಲೆ ಏರಿಕೆಯಿಂದ ವಾಹನ ಸವಾರರು ತತ್ತರಿಸಿದ್ದಾರೆ.
ಡೀಸೆಲ್ ಬೆಲೆ ಏರಿಕೆ ಸರಕು ಸರಬರಾಜು ವಾಹನಗಳ ಮೇಲೆ ಪರಿಣಾಮ ಬೀರಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೊರೊನಾ ಸಂಕಷ್ಟದಿಂದ ನಲುಗಿರುವ ಜನರಿಗೆ ನಿರಂತರ ಇಂಧನ ಬೆಲೆ ಏರಿಕೆಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.