ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ…?
ದೇಶದ , ರಾಜ್ಯದ, ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಹೀರಾಶುಗರ್ ಜಗಳ ಇಂದೂ ಬೀದಿಗೆ ಬಂದಿದೆ ಅಪ್ಪಣ್ಣ ಗೌಡ್ರು, ಬಸಗೌಡ್ರು, ಡೀ. ಟಿ. ಪಾಟೀಲರು, ರಮೇಶ ಕತ್ತಿ ಯವರು, ಚೆರಮನರಾಗಿ ಸಕ್ಕರೆ ಕಾರ್ಖಾನೆ ಯನ್ನು ಮೂಗಿಲೆತ್ತರಕ್ಕೆ ಬೆಳೆಸಿದ್ದರು.
ಕಬ್ಬು ಬೆಳೆದ ರೈತರಿಗೆ ಹೆಚ್ಚಿನಬಿಲ್ಲು, ಉಚಿತವಾಗಿ ರೈತರಿಗೆ ಸಕ್ಕರೆ, ಬೀಜ, ಗೊಬ್ಬರ, ವಿತರಿಸುತ್ತಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಇಂದು ಕಬ್ಬು ಕಳಿಸಿದ ರೈತರ ಬಿಲ್ ಕೊಡಲು ತಿಣಕಾಡುತ್ತಿದೆ
ಕತ್ತಿ ಸಾಹುಕಾರರನ್ನೂ ರಾಜಕಾರಣದಲ್ಲಿ ಬೆಳೆಸಿದ ಈ ಸಹಕಾರಿ ಸಕ್ಕರೆ ಕಾರ್ಖಾನೆ ಬಗ್ಗೆ ಸಾಹುಕಾರರು ನಿರ್ಲಕ್ಷ ವಹಿಸುತ್ತಿರುವುದೇಕೆ..?ಎಂದು ಅವರ ಅಭಿಮಾನಿಗಳು ಪ್ರಶ್ನಿಸಿಸಿಕೊಳ್ಳುತ್ತಿದ್ದಾರೆ..,
ಈ ವಿಷಯವನ್ನು ರಮೇಶ್ ಕತ್ತಿಯವರಿಗೆ ತಿಳಿಸಬೇಕೆಂದು ಅವರ್ ಅಭಿಮಾನಿಗಳು ಬೆಲ್ಲದ ಬಾಗೆವಾಡಿಯಯ ನಿವಾಸಕ್ಕೆ ಹೋಗಿ ಹೇಳಬೇಕೆಂದರು ಅವರಿಗೆ ಧೈರ್ಯ ಸಾಲುತ್ತಿಲ್ಲ.ಯಾಕೆಂದರೆ ರಮೇಶ್ ಕತ್ತಿ ಯ ವರ ಬಾಯಿಂದ ಬರುವ ಸಂಸ್ಕೃತ ಶ್ಲೋಕ ಗಳಿಗೆ ಅವರ್ ಅಭಿಮಾನಿಗಳು ಹೆದರುತ್ತಿದ್ದಾರೆ.ಈ ವಿಷಯ ದಲ್ಲಿ ಪತ್ರಿಕೆ ಪೋಸ್ಟ್ ಮನ್ ಕೆಲಸ ಮಾಡುತ್ತದೆ,ಪತ್ರವನ್ನು ರಮೇಶ ಕತ್ತಿಯವರಿಗೆ ಮುಟ್ಟಿಸುವ ಕೆಲಸ ಮಾಡುತ್ತದೆ.
ಸಾಮಾನ್ಯ ನೌಕರನಾ ಗಿ ಹೀರಾ ಶುಗರ್ ಫ್ಯಾಕ್ಟರಿಗೆ ಒಕ್ಕರಿಸಿದ್ ಬೆಣಿವಾಡದ ಅಶೋಕ್ ಪಾಟೀಲ ಹೇಗೆ {M.D.}ಆದ, ಹೇಗೆ ಡಾಕ್ಟರೇಟ್ ಪಡೆದ , ಹಾಗೂ ತನ್ನ ಹೊಲದ ಕಂಪೌಂಡಕ್ಕೆ ಶ್ರೀಮಂತರು ಮನೆ ಕಟ್ಟಲು ಬಳಸುವ (ಚಾರಿ ಕಲ್ಲು) ಹೇಗೆ ಹಾಕಿಸುತ್ತಿದ್ದನೆಂದು,ಹಾಗೂ ಜೇ.ಸಿ.ಬೀ. ಟ್ರ್ಯಾಕ್ಟರ್, ಹೋಲ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ, ಹೇಗೆ ಖರ್ಚು ಮಾಡುತ್ತಿದ್ದಾನೆಂದು ರಮೇಶ್ ಕತ್ತಿ ಯವರಿಗೆ ಗೊತ್ತಿಲ್ಲವೆ ಎಂದು ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ,,?
ಐದಾರು ಎಕ್ಕರೆ ಜಮೀನಿನ ಈ ಅಶೋಕ್ ಪಾಟೀಲ ಇಂದು ಆತಗಳಿಸಿದ ಆಸ್ತಿಯ ಲೆಕ್ಕ ಪತ್ರವನ್ನುಬೆಣಿವಾಡದ ಅವರ ವಿರೋಧಿಗಳೇ ಹೇಳುತ್ತಾರೆ.ಪ್ರಗತಿಪರ ರೈತನೆಂದು ಆಯಾ ವಿಶ್ವ ವಿದ್ಯಾಲಯಗಳಕಡೆಇಂದ,ಹೇಗೆ ಪ್ರಶಸ್ತಿ ಪಡೆಯುತ್ತಾನೆನ್ನುವುದನ್ನು ಕಥೆ ಕಟ್ಟಿ ಗ್ರಾಮಸ್ಥರು ಹೇಳುತ್ತಾರೆ.
ಅವನು ಮಾಡಿದ ಆಸ್ತಿ ಕರ್ನಾಟಕದಲ್ಲಿ ಯಾರ ಕಣ್ಣಿಗೂ ಬೀಳದಂತೆ ಕೊಲ್ಹಾಪುರ ದಲ್ಲಿ ಮಾಡಿದ ಆಸ್ತಿಯಲಿಸ್ಟು ಕೊಡುತ್ತಾರೆ.
ಬೆಣಿವಾಡದ ಗ್ರಾಮದಲ್ಲಿ ಇಪ್ಪತ್ತು.ಮೂವತ್ತು, ಎಕ್ಕರೆ ನೀರಾವರಿ ಜಮೀನು ಇದ್ದರೂ, ಮುOಗಾರಿಗೆ ಗೊಬ್ಬರ ಉದ್ರಿ ತರುವ ಇಲ್ಲಿಯ ರೈತರು ಕತ್ತಿ ಸಾಹುಕಾರರ ನಜರಿಗೆ ಈತನ ವಿಷಯ ಬರದಿದ್ದಕ್ಕೆ ನನ್ನ ಮುಖಾಂತರ ವಿಷಯ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಹಾಗೆ ಕೆಲವೊಂದು ಈತನ ಕೆಲವೇ, ಕೆಲವು, ಆಸ್ತಿಯ ಫೋಟೋ ಗಳನ್ನು ಕಳಿಸಿದ್ದಾರೆ,ಈತನ ಜೊತೆ ಜೈಸಿಂಗ್ ನ ಬಗ್ಗೆಕೂಡ ಪತ್ರದಲ್ಲಿ ಬರೆಯಿರಿ ಅಂತಾ ಸೂಚಿಸಿರುತ್ತಾರೆ.
ಹಲವು ಬಾರಿ ಅವೀರೋಧ ವಾಗಿರುವ ಹೀರಾ ಶುಗರ್ ಕಮಿಟಿ ರಮೇಶಕತ್ತಿ ಯವರ ಮಾರ್ಗದರ್ಶನ ದಲ್ಲಿಯೆ ನಡೆಯುತ್ತದೆ .ಪೆಟ್ರೊಲ್, ಚಿಮಣಿ ಎಣ್ಣೆ , ವ್ಯಾಪಾರಿ, ಅಪ್ಪಾ ಸಾಹೇಬ್ ಶಿರಕೊಳಿ ಅವರನ್ನು ಈಗ ಅಧ್ಯಕ್ಷ ಮಾಡಲಾಗಿದೆ. ಈ ಅಶೋಕ್ ಪಾಟೀಲ ತಾಳಕ್ಕೆ ತಕ್ಕಂಥೆ ಕುಣಿಯದ ಶಿರಕೊಳಿಯನ್ನು ರೈತರ ಮುಂದೆ ಅಶೋಕ್ ಪಾಟೀಲ ಹಿಯಾಳಿಸಿದಕ್ಕೆ ಶಿರಕೊಳಿ ರಾಜಿನಾಮೆ ನೀಡಿದ್ದಾರೆ.
ಎರಡು ಮೂರು ಬಾರಿ ರಾಜಿನಾಮೆ ಹಿಂಪಡೆಯಲು ಒತ್ತಡ ಹಾಕಿದರು ಶಿರಕೊಳಿ ರಾಜಿನಾಮೆ ಹಿಂಪಡೆದಿಲ್ಲಾ
ತಾಲೂಕಿನ ಸಾಹುಕಾರರ ಅಭಿಮಾನಿಗಳು ವಿಶ್ವನಾಥ್ ಶುಗರ್ಕ್ಕೆ ಲಕ್ಷ ಕೊಟ್ಟಷ್ಟು ಹೀರಾ ಶುಗರ್ ಫ್ಯಾಕ್ಟರಿಗು ಲಕ್ಷ ಕೊಡಬೇಕೆಂದು ಅಪೇಕ್ಷಿಸುತ್ತಾರೆ.
ಒಂದು ವೇಳೆ ಸಾಹುಕಾರರು ನಿರ್ಲಕ್ಷಿಸಿದರೆ ಬೆಣಿವಾಡದಲ್ಲಿ ಈ ಅಶೋಕ್ ಪಾಟೀಲ ಮಿನಿ ಶುಗರ್ ಫ್ಯಾಕ್ಟರಿ ಕಟ್ಟುವ ತಯಾರಿಯಲ್ಲಿದಾನೆಂದು ತಿಳಿಸಿರಿ ಎಂದು ಹೇಳಿದ್ದಾರೆ.ಸಹಕಾರಿ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಕೊಂಡಿರುವ ರಮೇಶ್ ಕತ್ತಿ ಯವರು ಈ ಎರಡು ಕೆಟ್ಟ ಹುಳಗಳನ್ನು ದೂರವಿಟ್ಟು ಈ ಮೊದಲಿದ್ದ ‘ಹೀರಾ ಶುಗರ್ ” ದಂತೆ ಫ್ಯಾಕ್ಟರಿ ವಿಜೃಂಭಿಸ ಬೇಕೆಂದು ಆಶಿಸುತ್ತಾರೆ.
ಇಂತಿ ಕತ್ತಿ ಸಾಹುಕಾರರ ಅಭಿಮಾನಿಗಳು ಉತ್ತರ ಕರ್ನಾಟಕ
ನಿಮ್ಮ ಪೋಸ್ಟ್ ಮನ್
ಬಾಪು ಗೌಡ ಪಾಟೀಲ