ನೋಟ್ ಬ್ಯಾನ್ ಆಘಾತ.. A.C.F.ದುಡ್ಡುಒಂದು ಕೋಟಿ ಮರಳಿ ಕೊಡಲಾರದ ಪುಢಾರಿಯ ಸಹಕಾರಿ ಸಂಸ್ಥೆ..?
ಈ ವರದಿ ಹಲವಾರು ದಿನಗಳಿಂದ ಬೈಲ್ ಹೊಂಗಲ ತಾಲೂಕಿನ ಜನರ ಹತ್ತಿರ , ಹಾಗೂ ಪುಢಾರಿಗಳ ,ಕಡೆ ಹರಿದಾಡುತ್ತಿದೆ.ಹಣ ಕೊಟ್ಟವನ್ ಕಡೆಯೂ ದಾಖಲೆಗಳಿಲ್ಲ, ಹಣಇಸಿದೂ ಕೊಂಡ ವನ ಕಡೆಯೂ ದಾಖಲೆಗಳುಇಲ್ಲಾ,ಇದೆಲ್ಲ ನಡೆದದ್ದು ಮೋದಿಯವರ ನೋಟ್ ಬ್ಯಾನ್ ಆದ ನಂತರದ ಘಟನೆ ಇದು,2016ರ ನವೆಂಬರ್ ನಲ್ಲಿ ಮೋದಿ ಜಿ ಧಿಡೀರನೆ ನೋಟ್ ಬ್ಯಾನ್ ಮಾಡಿದಾಗ ಹಳೆಯ, ನೋಟು ಸುಡುಬೇಕು ಇಲ್ಲ ಅದಲು ಬದಲು ಮಾಡಿಕೊಳ್ಳ ಬೇಕಿತ್ತು,ಹರಾಮಿ ದುಡ್ಡು ತಿಂದಿದ್ದ ಕೆಲವರು ಯಾವುದೋ ಮಾರ್ಗದಲ್ಲಿ ಬದಲು ಮಾಡಿ ಕೊಂಡದ್ದುವುಂಟು,
ಬೆಳಗಾವಿ ತಾಲೂಕಿನ ಬಡಕುಟುಂಬದ ಅರಣ್ಯ ಇಲಾಖೆಯ ನೌಕರನೊಬ್ಬನ ಕಥೆಯಿದು,ಅರಣ್ಯ ಇಲಾಖೆ ಸೇರುವಾಗ ಹರಿದು ಪ್ಯಾಂಟಿನಲ್ಲಿ ನೌಕರಿಸೇರಿದ ಈತ ಅರಣ್ಯ ಇಲಾಖೆಗೆ ಹರಿದು ಬರುತ್ತಿದ್ದ ಹಣದ ಹಿಂದೆ ಬೆನ್ನು ಹತ್ತಿ ಕಾಗದದಲ್ಲಿ ಗಿಡನೆಟ್ಟು ಹತ್ತಾರು ಕೋಟಿಗಳಿಸಿದ್ದ,
ಸದ್ಯಹನುಮಾನ ನಗರದಲ್ಲಿ ಭವ್ಯ, ಬಂಗಲೆ, ಕುಲವಳ್ಳಿ ಯಲ್ಲಿ{ 35 ಏಕರೆ} ಮಾವಿನ ತೋಟ, ಬೆಳಗಾವಿ, ಬೆಂಗಳೂರಿನಲ್ಲಿ ಸೈಟುಗಳು, ಸದ್ಯ ತನ್ನ ಮಗನನ್ನು ವಿದೇಶದಲ್ಲಿ ಕಲಿಸುತ್ತಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೋಟ್ ಬ್ಯಾನ್ ಆದಾಗ,ಹೌ ಹಾರಿ ಬೈಲ್ ಹೊಂಗಲದ ಪುಢಾರಿ ರಾಜಕಾರಣಿಯ ಸಹಕಾರಿ ಸಂಸ್ಥೆಯಲ್ಲಿ” ಈ A.C.F. ಒಂದು ಕೋಟಿ ರೂಪಾಯಿ ಹೊಸ ನೋಟು ಪಡೆಯಲು ಕೊಟ್ಟಿದ್ದ.
ಆಪುಢಾರಿ ಯು ಹೊಸ ನೋಟು ಕೊಡುವ ಭರವಸೆ ನೀಡಿದ್ದ,ಹೊಸ ನೋಟು ಚಲಾವಣೆಯಾದಾಗ್ ಈ A.C.F. ಹಣ ಕೇಳಲು ಹೋಗಿದ್ದಾನೆ, ಆಗ ಆ ಪುಢಾರಿಕೇಳಿದ್ದು ಒಂದೇ ಮಾತು, ನಿನ್ನಪಗಾರೆಷ್ಟು , ಈ ದುಡ್ಡು ಎಲ್ಲಿಂದ ತಂದೆ ಅಂತಾ..?
ಹೌಹಾರಿದ ಈ A.C.F.ಬೈಲ್ ಹೋಂಗಲ್ ದ ಪುಢಾರಿಗಳ ಮೋರೆ ಹೋಗಿದ್ದಾನೆ, ಆಪುಢಾರಿಗಳು ಕೂಡ ಈಗ ಕೈ ಚೆಲ್ಲುತ್ತಿದ್ದಾರೆ, ಇನ್ನೂ ಹಲವಾರು ಜನ ಅಧಿಕಾರಿಗಳು ಆಸಂಸ್ಥೆಯಲ್ಲಿ ಹಣ ಇಟ್ಟಿದ್ದಾರೆ, ಎಲ್ಲವೂ “ಅಂದರಕಿ ಬಾತ್.” ಈ ವಿಷಯ ವಾಗಿ ಇಬ್ಬರಿಗೂ ಪತ್ರಿಕೆ ಫೋನು ಹಚ್ಚಿದಾಗ ಒಬ್ಬರು ನನಗೆ ಈ ವಿಷಯ ಗೊತ್ತಿಲ್ಲವೆಂದರು, ಅತಂತ್ರ ದಲ್ಲಿರುವ A.C.F.ಫೋನೆ ಎತ್ತಲಿಲ್ಲ.
“ಕೊಟ್ಟವ ಕೋಡಂಗಿ ಇಸ್ಕೊಂಡವ ಈರಭದ್ರ”
ನಿಮ್ಮ
ಬಾಪುಗೌಡ ಪಾಟೀಲ್
ಸದ್ಯ
ಮಾನ