ತಿರುಪತಿ ತಿಮ್ಮಪ್ಪನಿಗೆ ಚಾಲೆಂಜ್ ಹಾಕಿ ಸೋತೆ….
ನನ್ನ ಮದುವೆ ಆದ ಹೊಸತು ನಾನು ಅರ್ಧ ನಾಸ್ತಿಕ, ಅರ್ಧ ಆಸ್ತಿಕ, ನನ್ನ ಹೆಂಡತಿ ವಿಪರೀತ ದೈವ ಭಕ್ತೆ ಭಾರತ ದಲ್ಲಿರುವ ಅಷ್ಟು ದೇವಾನುದೇವತೆ ಗಳ ನ್ನು ಪೂಜಿಸುವಾಕೆಒಂದು ದಿನ ನನ್ನ ಹೆಂಡತಿ ನಾನು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದೇನೆ ,ಹೋಗಿ ಬರೋಣ ಅಂತ ದುಂಬಾಲುಬಿದ್ದಳು.ನಾನು ತಿಮಪ್ಪ ಸಾಲಾ ಮಾಡಿ ಅಲ್ಲಿ ಗುಡ್ಡದ ಮ್ಯಾಗ ಹೋಗಿ ಕುಂತಾನು ನಿನ್ನ ಹರಿಕೆ ಯಾವಗ ತಿರಸತಾನು ಅಂತಾ ಹಂಗಿಸಿದೆ..
ಥಟ್ಟನೆ ನನ್ನ ಹೆಂಡತಿ ನಿಮ್ಮ ಮನಿಸಿನ್ಯಾಗಿನ ಬೇಡಿಕೆ ಏನರೆ ಇದ್ರ ಈಡೇರಿಸಲಿಲ್ಲ ಅಂದರ ನಾ ದೇವರ ಪೂಜೆ ಬಿಡ್ತೆನ್ ನಿವ ಹೇಳಿದಾಂಗೆ ಕೇಳ್ತೀನಿ ಅಂತ ನನಗೆ ಚಾಲೆಂಜ್ ಹಾಕಿದ್ದಳು.ದೇಶದ ಶ್ರೀಮಂತ ದೇವರ ಪೈಕಿ ತಿರುಪತಿ ತಿಮ್ಮಪ್ಪನು ಒಬ್ಬನು ದಿನವು ಲಕ್ಷಾಂತರ ಜನರ ಬೇಡಿಕೆ ಈಡೇರಿಸುತ್ತಾನೆಂದು ಅವನ್ ಭಕ್ತರು ಹೇಳುತ್ತಾರೆ.
ತಿಮ್ಮಪ್ಪನಿಗೆ ಹರಿಕೆ ಹೊತ್ತವರ ಆಸೆ ಇಡೇರಿಸುತ್ತಾನೆಂದು ಬಹಳಷ್ಟು ಜನ ಹೇಳಿದ್ದರಿಂದ ಧ್ವಂದದಲ್ಲಿ ಹೆಂಡತಿ ಜೊತೆ ತಿರುಪತಿ ಗೆ ಹೋದೆ,ದರ್ಶನ್ ಕ್ಯೂ ನೋಡಿ ಹೆಂಡತಿಯನ್ನೂಛೇಡಿಸುತ್ತ ಸಾಗಿದೆ,ನಿಮ್ಮ ಮನಿಸಿ ನ್ಯಾಗ ಇದ್ದಿದನ್ನು ತಿಮಪ್ಪನ ಹತ್ತಿರ ಕೇಳಿರಿ ಎಂದು ಹೇಳಿದಳು ,ತಿಮ್ಮಪ್ಪನ ಹತ್ತಿರ ಸರದಿ ಬಂದಾಗ ಒಂದೇ ಸೇಕೆಂಡಿ ನಲ್ಲಿ ತಿಮ್ಮಪ್ಪನಿಗೆ ನನ್ನ ಬೇಡಿಕೆ ಇಟ್ಟೆ., ಹಿಂದಿನ ಜನ ನೂಕಿದ್ದರಿಂದ ಮುಂದಿನ ಗೇಟಿಗೆ ಬಂದು ಬಿದ್ದಿದ್ದೆ ,
ಹೊರ ಬಂದ ನಂತರ ಮತ್ತೆ ನನ್ನ ಹೆಂಡತಿಯನ್ನೂ ಛೇಡಿಸಿದೆ,. ನಾ ಬೇಡಿಕೆ ಇಟ್ಟದನ್ನು ನೆನಪಿಸಿದೆ , ಆಯ್ತರಿ ತಿಮ್ಮಪ್ಪ ನಿಮ್ಮ ಬೇಡಿಕೆ ಈಡೇರಿಸಲಿಲ್ಲ ಅಂದರ ನೀವು ಹೇಳಿದಂಗ ಕೇಳುತ್ತೇನೆ ,ಅಂತಾ ನನ್ನ ಹೆಂಡತಿ ಅಂದಳು
ಅದೇನೋ ತಿಮ್ಮಪ್ಪನ ಆಶೀರ್ವಾದ ವೋ , ಆ ಸ್ಥಳದ ಮಹಿಮೆಯೋ , ಹದಿನೈದು ದಿನದಲ್ಲಿ ನಾ ಕೇಳಿದ್ದನ್ನು ತಿಮ್ಮಪ್ಪ ಕರುಣಿಸಿದ, ಖುಷಿ ಯಾಗಿದ್ದ ಹೆಂಡತಿ ಮತ್ತೊಂದು ನಿಮಗೆ ನನ್ನ ವಿನಂತಿ ಎಂದಳು ಹೇಳು ಅಂದೆ ನೀವು ಪ್ರತಿ ವರ್ಷವೂ ತಿಮ್ಮಪ್ಪನಿಗೆ ಹೋಗಿ ಬರಿಅಂದಳು.ನಾನು ಪ್ರತಿ ವರ್ಷವೂ ನನ್ನ ಆತ್ಮೀಯರ ಜೊತೆ ತಿರುಪತಿಗೆ ಹೋಗಿ ಬರುತ್ತೇನೆ ಪ್ರತಿ ವರ್ಷವೂ ತಿಮ್ಮಪ್ಪ ನಾನು ಕೆಳಿದನ್ನು ಕರುಣಿಸುತ್ತಬಂದಿದ್ದಾನೆ.
ಇನ್ನೊದು ದೊಡ್ಡ ಬೇಡಿಕೆ ಇದೆ ಅದು ವಿಧಾನ ಸಭಾ ಚುನಾವಣೆ ಬಂದಾಗ ತಿಮ್ಮಪ್ಪನ ಮುಂದೆ ಬೇಡಿಕೆ ಇಡುತ್ತೇನೆ..