Home / ಜಿಲ್ಲೆ / ಬೆಳಗಾವಿ /   ಆ ಬ್ಯಾಂಕಿಗಿ ಶಿಡ್ಲ , ಗಿಡ್ಲ ,ಬಡದಿರಬೇಕ್  ಬಿಡೋ ಸಾಬಾ………

  ಆ ಬ್ಯಾಂಕಿಗಿ ಶಿಡ್ಲ , ಗಿಡ್ಲ ,ಬಡದಿರಬೇಕ್  ಬಿಡೋ ಸಾಬಾ………

Spread the love

ಔರ್ ಎ ಗರ್ದಿಗಮ್ಮತ ದೇಖೋ

  1.                                      

ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ,

*ಏಲ್ಲಿ ಹೊಗಿದ್ಯೋ ಸಾಬಾ

* ಸಾಹೇಬ್ರ ಇನ್ನೂ ಮ ಟಾ ಈ ಸುದ್ದಿ ಯಾರು ಮಾಡಿಲ್ಲ, ಮುಂದು ಮಾಡುದಿಲ್ಲ, ಅಂತಾ ಸುದ್ದಿ ತರಾಕ ಹೋಗಿನ್ರಿ ಸಾಹೇಬ್ರ

* ಸಾಬಾ  ಅಂತಾ ಸುದ್ದಿ ಅಂದ್ರ ದೊಡ್ಡ ಮಂದಿ , ಅಥವಾ ರಾಜಕಾರಣಿಗೋಳ, ಇಲ್ಲಂದ್ರ ಹೊಡಿಬಡಿ ,ಅನ್ನೋ ಮಂದಿದ ಇರ್ಬೇಕು ಬಿಡೋಸಾಬಾ

*ಸಾಹೇಬ್ರ ಅಂಥ ಸುದ್ದಿಗೊಳನ ನಿವೊಬ್ರ ಹಾಕಿದಿರಿ ಆ  ತಾಕತ್ತ ನಿಮಗ್ ಐತಿ ಅಂತಾ ಸುದ್ದಿ ತಂದೆನ್ರಿ ಸಾಹೇಬ್ರ

*ಲಗೂಟ ಹೇಳೋ ಸಾಬಾ

*ಸಾಹೇಬ್ರ ಇದ  ಹೊಸಾ ಬಿಲ್ಡಿಂಗ್ ಕೆಡವಿದ್ದ ಸುದ್ದಿರಿ ಸಾಹೇಬ್ರ

*ಸಾಬಾ ಹೊಸ ಬಿಲ್ಡಿಂಗ್ ಕೆಡ್ ವುದುಅಂದರ ಸರಕಾರಿ ಅಧಿಕಾರಿ ಗೋಳ ಕೆಲಸ
ಬಿಡೋ ಸಾಬಾ,ಕಾಗದಾಗ ಕೇಡವತಾರು, ಕಾಗದಾಗ ಕಟ್ಟತಾರು, ಇದೇನ್ ಹೊಸಾ ಸುದ್ದಿ ಅಲ್ಲ ಬಿಡೋ ಸಾಬಾ

*ಸಾಹೇಬ್ರ ಇದ ಸರ್ಕಾರದಲ್ಲ ಜನರ ದುಡ್ಡುಬ್ಯಾಂಕಿನಾಗ ಇದ್ದ ದುಡ್ಡಿನ ಕಥಿ

*ಬಿಡೋ ಸಾಬಾ ಹೊಳ್ಳೊಳ್ಳಿ ಆನಂದ್ ಅಪ್ಪುಗೋಳ್ ಬ್ಯಾಂಕಿನ ಕಥಿ ಹೇಳಾ0ವ ನೀನಾ..

*ಸಾಹೇಬ್ರ ಆನಂದ ಅಪ್ಪುಗೋಳದ ಅಲ್ಲಾರಿ, ಮತ್ತೊಂದ್ ಬ್ಯಾಂಕಿನ ಕಥಿರಿ

*ಆದ ಅಲ್ಲಂದ್ರ ಕಿರಣ್ ಠಾಕೂರನ ಲೋಕಮಾನ್ಯ ಬ್ಯಾಂಕಿನ ಕಥಿ ಇರ್ಬೇಕು ಬಿಡೋಸಾಬಾ

*ಅದೂ ಅಲ್ಲರಿ ಸಾಹೇಬ್ರ ಈ ಬ್ಯಾಂಕಿ ನಾಗ ಉಪ ಮುಖ್ಯಮಂತ್ರಿ ಅದಾರ ,ಲೋಕ ಸಭಾ ಸದಸ್ಯರು ಅದಾರ , ಮಾಜಿ   ಲೋಕ ಸಭಾ ಸದಸ್ಯರು ಅದಾರ, M.L.A.. ಗೋಳ ಅದಾರ್ ಮಾಜಿ M.L.A.. ಗೋಳ ಅದಾರ್, ಆಬ್ಯಾಂಕಿನ ಕಥಿರಿ ಸಾಹೇಬ್ರ

*ಅಂದ್ರ ಸಾಬಾ ಬಿಲ್ಡಿಂಗ್ ಕೆಡವಿ ಹೊಸಾ ಬಿಲ್ಡಿಂಗ್ ಕಟ್ಟಿದ ಸುದ್ದಿ ಅಂದಿ ಏನ್ ಕಥಿನೋ ಸಾಬಾ

*ಸಾಹೇಬ್ರ ನಾಲ್ವತ್ತು ಐವತ್ತ ವರ್ಷದ ಗಚ್ಚಿನ್ಯಾಗ ಕಟ್ಟಿದ ಬಿಲ್ಡಿಂಗ್ ಕೆಡವಿ ಹೊಸಾ ಬಿಲ್ಡಿಂಗ ಕಟ್ಟಿದರಾರಿ ಸಾಹೇಬ್ರ

*ಸಾಬಾ  ಆ ಬ್ಯಾಂಕಿಗಿ ಶಿಡ್ಲಿ , ಗಿಡ್ಲ ,ಬಡದಿರಬೇಕ್  ಬಿಡೋ ಸಾಬಾ

*ಆ ಬ್ಯಾಂಕಿ ನಾಗ ಇರಾವರ್ ಇಂದ, ಊರ ಮಂದಿ ಮ್ಯಾಗ ಸಿಡಿಲಬೀಳ ಬೇಕಂದ್ರ ಅಲ್ಲಿ ಸಿಡ್ಲ ಬೀಳತ್ತಿತ್ತರಿ ಹಿಂತಾ ಮನಷ್ಯಾನ ಮ್ಯಾಗ ಶಿಡ್ಲಿ ಬೇಳಬೇಕಂದ್ರೆ ಅಂತಾ ಮನಷ್ಯಾನಾ ಮ್ಯಾಗ ಶಿಡ್ಲಿ ಬೀಳ ತೈತ್ರೀ ಸಾಹೇಬ್ರ,

*ಅಂದ್ರ ಶಿಡ್ಲಿ ಅವರ ಮಾತ ಕೆಳತಿತ್ತ ಅಂಧಾಂಗ ಆತ ಬಿಡೋಸಾಬಾ.

*ಹೌದರಿ ಸಾಹೇಬ್ರ

*ನೀ ಯಾಕ ತ್ರಾಸ ಮಾಡ್ ಕೊಳ್ಳಾತಿಯೋ  ಸಾಬಾ

*ಅವ ಜನರ ದುಡ್ಡುರಿ ಸಾಹೇಬ್ರ   ಆ ಬ್ಯಾಂಕಿನ ಯೂನಿಯನ್ ದಾವರ ಕರದಾರರಿ ಆಸುದ್ದಿ ತೊಗೊಂಡ ಮುಂದಿನ ವಾರ ಬರತೆನ್ರಿ ಸಾಹೇಬ್ರ…..

 

 


Spread the love

About Admin Bapu

Check Also

ಟೈಮ್ ಬಂದ ಹಾಂಗ ಹೋಗಬೇಕು….

Spread the loveಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು …

Leave a Reply

Your email address will not be published. Required fields are marked *