ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ …..
ನನ್ನ ಅಪ್ಪನ ಅಕ್ಕ ವಸುಂಧರಾಳನ್ನು ಹತ್ತರಗಿಯ ಸಾಹುಕಾರ ಬಸಪ್ಪ ಕುಡಚಿಯವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅವರ ಮಗ ಈರಣ್ಣ ಕುಡಚಿಗೆ ನನ್ನ ಅಕ್ಕ ಕವಿತಾಳನ್ನು ಧಾರೆಯೆರೆದು ಕೊಡಲಾಗಿದೆ,
ಈರಣ್ಣ ಕುಡಚಿ ಮಾಜಿ ತಾಲೂಕಾ ಪಂಚಾಯತಿ ಸದಸ್ಯರು , ಹಾಗೂ ಪ್ರಗತಿ ಪರ ರೈತರು,
ಅವರ ಕೊನೆಯ ಮಗಳು ಪದವೀಧರೆ, ರುತಿಕಾಳನ್ನು ತೇರದಾಳ ಶಾಸಕರಾದ ಸಿದ್ದು ಸವದಿ ಯವರ ಹಿರಿಯ ಪುತ್ರ ಪದವೀಧರ ವಿಶ್ವನಾಥ ನಿಗೆ ಸಂಪ್ರದಾಯಿಕ ವಾಗಿ ಮೂರು ತಿಂಗಳ ಹಿಂದೆ ಎಂಗೇಜ್ಮೆಂಟ್ ಮಾಡಲಾಗಿತ್ತು, ಆ ಕಾರ್ಯಕ್ರಮ ದಲ್ಲಿ ನನ್ನ ಸಂಬಂಧಿ ಗಳೆಲ್ಲ ಮದುವೆಗೆ ಒಂದು ದಿನ ಮುಂಚೆವರನ ಊರಾದ ಬನಹಟ್ಟಿಯಲ್ಲಿ ಕೂಡೋಣವೆಂದು ಠರಾಯಿಸಲಾಗಿತ್ತು.
ನನ್ನ ಸಂಬಂಧಿಕರಲ್ಲಿ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ವರು, ವಕೀಲರು, ರಾಜಕಾರಣಿಗಳು, ಉದ್ಯಿಗಪತಿ ಗಳು, ಸಾಫ್ಟ್ ವೇರ್ ಎಂಜಿನಿಯರ್ ಗಳು, ಪ್ರಗತಿ ಪರ ರೈತರು, ದಿನಾಂಕ 14/2/2021 ರಂದು ಬನಹಟ್ಟಿ ಯಲ್ಲಿ ಕುಡಿದ್ದೇವು,
ನನ್ನ ಒಟ್ಟಾರೆ ಎಲ್ಲ ಸಂಬಂಧಿಕರು ಆ ಸಮಾರಂಭದಲ್ಲಿ ಹಾಜರಿದ್ದರು, ಎಲ್ಲರದ್ದೂ ಒಂದೇ ನನ್ನ ಮೇಲೆ ಹರಕೆ ನಿನ್ನ” ಗರ್ದಿ ಗಮ್ಮತ್ತ” ಚೆನ್ನಾಗಿ ಬರುತ್ತಿದೆ, ನಿನ್ನ ಹಿಂದೆ ನಾವಿದ್ದೇವೆ ಎಂಬ ಆತ್ಮೀಯ ನುಡಿ.
ಮರುದಿನ ಸಿದ್ದು ಸವದಿ ಯವರ ಇಬ್ಬರು ಮಕ್ಕಳ ಮದುವೆ ವಿಜೃಂಭಣೆ ಯಿಂದ ಜರುಗಿತು. ಉತ್ತರ ಕರ್ನಾಟಕದ ರಾಜಕಾರಣಿ ಗಳ ದಂಡೆ ಮದುವೆಯಲ್ಲಿತ್ತು. ಒಂದು ಕ್ಷಣ ಇದು ಮದುವೆಯೋ, ಜಾತ್ರೆ ಯೋ , ತಿಳಿಯದಾಗಿತ್ತು.
ನಿಮ್ಮ
ಬಾಪು ಗೌಡ ಪಾಟೀಲ