ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ...
ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ,
*ಏನೋ ಸಾಬಾ ಎಲ್ಲಿ ಹಾಳಾಗಿ ಹೋಗಿದ್ಯೋ..?
* ಎಲ್ಲಿ ಇಲ್ಲರಿ ಸಾಹೇಬರ
* ದುಬೈಗೆ ಹೋಗಿದ್ದಂತ…
*ಎಲ್ಲಿ ದುಬೈಯೋ ಗಿಬೈಯೋ..
*ಮತ್ತೇನ ಕಂಡೆ ಇಲ್ಲಲ್ಲಾ….
*ಬೆಂಗಳೂರಿಗೆ ಹೋಗಿನರಿ ಸಾಹೇಬರ..
*ಬೆಂಗಳೂರಾಗ ಅಧಿವೇಶನ ನಡದೈತಿ ಅಲ್ಲೆನ ಕೆಲಸೋ ಸಾಬಾ..
*ಅಲ್ಲಿ ಅಲ್ಲರಿ ಬೇರೆ ಕಡೆ ಅದಿನರಿ
*ಎನ್ ಶಾಸಕರ ಭವನದಾಗ ಇದ್ದಿ ಏನೋ ಸಾಬಾ..
*ಅಲ್ಲೂಅಲ್ಲರಿ..
*ಮತ್ತ ಮೆಜೆಸ್ಟಿಕ ಕಡೆ ಇದ್ದೇನೋ ಸಾಬಾ…
* ಅಲ್ಲೂಅಲ್ಲರಿ
* ಮತ್ತ ಎಲ್ಲಿ ಇದ್ಯೋ ಸಾಬಾ..
*ಸಾಹೇಬರ ತರ್ಕ ಮಾಡರಲಾ..
*ಗೊತ್ತಾ ಆಗವಾತ ಬಿಡೋ ಸಾಬಾ
*ಸದಾಶಿವ ನಗರ ದಾ ಗ ಅದೇನಾರಿ ಸಾಹೇಬರ
*ಗೊತ್ತಾತಾ ಬಿಡೋ ಸಾಬಾ ಸದಾಶಿವ ನಗರ ಖರ್ಗೆ ಸಾಹೇಬರ ಮನಿ ಕಡೆ ಇದ್ದಿರಬೇಕು…
*ಇಲ್ಲರಿ ಸಾಹೇಬರ..
*ಇಲ್ಲಂದ್ರ ಪರಮೇಶ್ವರ ಸಾಹೇಬರ ಮನಿಕಡೆ ಇರಬೇಕು….
*ಸಮೀಪ ಬಂದೇರಿ ತರ್ಕ ಮಾಡಿರಿ ಸಾಹೇಬರ..
* ಹಂಗಂದ್ರ ಡಿ ಕೆ ಸಾಹೇಬರ ಮನ್ಯಾಗ ಇರಬೇಕ ಬಿಡೋ ಸಾಬಾ..
* ಅಲ್ಲೂ ಅಲ್ಲರಿ
*ಹಂಗಂದ್ರ ರಮೇಶ್ ಸಾಹುಕಾರ ಮನ್ಯಾಗ ಇರಬೇಕ ಬಿಡೋ ಸಾಬಾ
*ಇಲ್ಲರಿ ಸಾಹೇಬರ
*ಮತ್ತೆಲ್ಲಿದೋ ಸಾಬಾ
*ಡಿಕೆ ಸಾಹೇಬರ ಮತ್ತ ರಮೇಶ್ ಸಾಹುಕಾರ ನಡುವ ಒಂದ ಮನಿ ಐತರೀ ಅಲ್ಲಿ ಇದ್ದಿನರಿಸಾಹೇಬರ
ನಿಮ್ಮ
ಬಾಪು ಗೌಡ ಪಾಟೀಲ್