ಮೂರು ಪಕ್ಷದವರ ಕಡೆಯಿಂದ ಚಂಚಗಾರ ತೊಗೊಂಡ ಸಾಬ…
ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ,
*ಎಲ್ಲಿ ಅದಿಯೋ ಸಾಬ
* ಸಾಹೇಬರ ದೇವೇಗೌಡರ ಮನ್ಯಾಗ ಅದೇನರಿ
*ಎನ್ ಹುಟ್ಟು ಹಬ್ಬದ ಶುಭಾಶಯ ಹೆಳಾಕ್ ಹೋಗಿದಿಯೇನೋ.
*ಇಲ್ಲರಿ ಸಾಹೇಬರ ಇಪ್ಪತ್ತೈದು ವರ್ಷದ ಹಿಂದ ಪ್ರಧಾನ ಮಂತ್ರಿ ಆಗಿದರ ನೆನಪಿಗೆ ಮಾಲಿ ಹಾಕಾಕ ಹೋಗಿನರಿ.
*ಎನ್ ಅನ್ನಾತಿರೋ ದೇವೇಗೌಡ್ರು ಸಾಬ..
*ನೋಡಪ 2023ರಾಗ ನಮ್ಮ ಪಾರ್ಟಿ ಬೆಂಬಲ ಇಲ್ಲದ ಯಾವ ಸರ್ಕಾರೂ ಆಗ ಬಾರದ, ಬಿಜೆಪಿ ಮತ್ತ ಕಾಂಗ್ರೆಸನ ಎಲ್ಲೆಲ್ಲಿ ಸಿಟ್ ಕೆಡವ ಬೇಕು , ನಮ್ಮ ಸಿಟ್ ಎಷ್ಟ ಗೆಲ್ಲಬೇಕು ,ಮುಂದಿನ ಮುಖ್ಯಮಂತ್ರಿ ಕುಮಾರ್ ಆಗಬೇಕು ಹಂಗ ಸರ್ವೆ ಮಾಡಿಕೊಂಡ ಬಾ ಅಂದಾರ್ ರಿ ಸಾಹೇಬರ..
*ಮನ್ನೆರೆ ಡಿಕೆ ಶಿವಕುಮಾರ್ ಸಾಹೇಬ್ರಿಗೆ ಬೆಟ್ಟಿ ಆಗಿ ನಿಮ್ಮನ್ನ ಮುಖ್ಯ ಮಂತ್ರಿ ಮಾಡಾಕ ಉತ್ತರ ಕರ್ನಾಟಕ ಸರ್ವೆ ಮಾಡಿ ಕೊಡತನೆ ಅಂತ ಮಾತ ಕೊಟ್ಟ ಬಂದಿ, ಈಗ ನೋಡಿದ್ರ ಇಲ್ಲಿ ದೇವ್ ಗೌಡ್ರಗೆ ಮಾತ ಕೊಡತಿ ನಿಂದ ಲೆಕ್ಕ ತಿಳಿವಾತಪಾ..
*ಸಾಹೇಬರ ನಿಮಗ ಹೇಳಿಲ್ಲ ರಿ ವಿಜಯೇಂದ್ರ ಮನ್ನಿ ಕರಸಿದ್ದರರಿ ನಾ ಮುಖ್ಯಮಂತ್ರಿ ಆಗಾಕ ಏನೇನ್ ಸ್ಟ್ಯಾಟರ್ಜಿ ಮಾಡಬೇಕ ಹೆಳ, ಬೇಕಾದಷ್ಟು ಕರ್ಚ ಆಗಲಿ ಮುಂದಿನ ಸಲಾ ನಾ ಸಿ ಎಂ ಆಗಬೇಕ ಅಂತ ವಾರ್ನಿಂಗ್ ಮಾಡಿ ಅಡ್ವಾನ್ಸ್ ಕೊಟ್ಟಿದಾನ ರಿ..
*ಅಲ್ಲೋ ಸಾಬ ಅಲ್ಲಿ ದೇವೇಗೌಡ್ರು ಚಂಚ ಗಾರ ಹಿಡದ್ದಿ, ಒಂದ್ ಕಡೆ ಡಿಕೆ ಶಿವಕುಮಾರ ಮಾತ ಕೊಟ್ಟಿದಿ, ಈಗ ನೋಡಿದ್ರ ವಿಜಯೇಂದ್ರ ಕಡೆಯಿಂದ advance ತೊಗೊಂಡಿ ಅಂತಿ, ನಿ ಎನ್ ಸಾವಕಾರ ಗೋಳ ಗರಡ್ಯಾಗ ಪಳಗಿ ದಾಂಗ ಆತ ಬಿಡೋ ಸಾಬ..
*ಹೌದರಿ ಸಾಹೇಬರ
*ನಮ್ಮ ರಾಜ್ಯದಾಗ್ ದೇವೇಗೌಡರ ಮೆಜಾರಿಟಿ ಬರುದಿಲ್ಲರಿ, ಬಂದ್ರ ಬಿಜೆಪಿ ಬರಬೇಕ, ಇಲ್ಲ ಕಾಂಗ್ರೆಸ್ ಬರಬೇಕ, HUNG ASSEMBLY ಆದ್ರ ದೇವೇಗೌಡರ ಕಿಂಗ್ ಮೇಕರ್ ಆಗತಾರ, ಆವಾಗ ಸಾವಕಾರ ಗೋಳ ಮನ್ಯಾಗ ಒಂದ್ ಮಂತ್ರಿ ಫಿಕ್ಸ್ ರಿ.. ಅದಕ್ಕ ಸಾವಕಾರ ಗೋಳ ಮೂರು ಮಂದಿಗೆ ಭೆಟ್ಟಿ ಆಗಿ ಬಾ ಅಂದಿರ್ ರಿ.. ಮೂರು ಮಂದಿ ಕಡೆಯಿಂದ ಚಂಚ ಗಾರ ತೋಗೊಂಡೆನರಿ ಸಾಹೇಬರ…
*ನಿಂದು ಭಾರಿ ಆತ ಬಿಡೋ ಸಾಬ
ನಿಮ್ಮ
ಬಾಪು ಗೌಡ ಪಾಟೀಲ್