Home / ರಾಜಕೀಯ / ಯಡಿಯೂರಪ್ಪನವರು ನನಗೆ ಫೋನ ಮಾಡಿದ್ದರು

ಯಡಿಯೂರಪ್ಪನವರು ನನಗೆ ಫೋನ ಮಾಡಿದ್ದರು

Spread the love

ಯಡಿಯೂರಪ್ಪನವರು ನನಗೆ ಫೋನ್ ಮಾಡಿದ್ದರು

      ನಾನು ರಾತ್ರಿ 10ಗಂಟೆಗೆ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತೇನೆ, ಬೆಳಿಗ್ಗೆ 6 ಗಂಟೆಗೆ ನನ್ನ ಮೊಬೈಲ್ ಆನ್ ಆಗಿರುತ್ತದೆ ನಿನ್ನೆ ಬೆಳಿಗ್ಗೆ 6 ಗಂಟೆ 15ನಿಮಿಷಕ್ಕೆ ಫೋನ್ ರಿಂಗಾಗ ತೊಡಗಿತು, ನಾನು ಹಲೊ ಅಂದೊಡನೆ ಆಕಡೆ ಇಂದ ಬಾಪುಗೌಡ ಪಾಟೀಲ ಅವರ್ ಫೋನಾ ಅಂತಾ ಬೆಂಗಳೂರು ಭಾಷೆಯಲ್ಲಿ ಕೇಳಿದರು, ಹೌದು ಎಂದೆ ಆಕಡೆ ಅವರು ನಾನು ಕರ್ನಾಟಕದ ಮುಖ್ಯ ಮಂತ್ರಿ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ ಅಂದರು ನಿಮ್ಮ ಜೊತೆ ಮುಖ್ಯಮಂತ್ರಿ ಯಡಿಯರಪ್ಪನವರು ಮಾತನಾಡುತ್ತಾರೆಂದುರು.

     ಆಕಡೆ ಇಂದ ನಾನು ಯಡಿಯೂರಪ್ಪ ಮಾತನಾಡು ವುದು ಬಾಪು ಗೌಡರೇ ಅಂದರು ನಿಮ್ಮ ಜೊತೆ ಅರ್ಜೆಂಟ್ ಮಾತ ನಾಡ ಬೇಕಿದೆ ಬಾಪುಗೌಡರೇ ಕೂಡಲೇ ಬೆಂಗಳೂರಿಗೆ ಹೊರಟು ಬನ್ನಿ ಇಲ್ಲೇ ಕುಳಿತು ಮಾತ ಮಾಡೋಣ ಅಂದರು.

ನನಗೆ ದಿಕ್ಕು ತೋಚದೆ ಆಯಿತು ಅಂದೆ, ಅಷ್ಟರಲ್ಲಿಯೇ ನನ್ನ ಬೆಳಗಾವಿಯ ಆಪ್ತ ಪೊಲೀಸ್ ಅಧಿಕಾರಿಯ ಫೋನು ರಿಂಗ್ ಆಗ ತೊಡಗಿತು ಫೋನು ಎತ್ತಿದೆ ಬಾಪು ಗೌಡ್ರೆ ಮುಖ್ಯ ಮಂತ್ರಿಗಳು ನಿಮ್ಮನ್ನು ಕರೆದು ಕೊಂಡು ಬರಲು ಹೇಳಿದ್ದಾರೆ 9 ಗಂಟೆಗೆ ನೀವು ತಯಾರಾಗಿರಿ 9-30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣ ನಾವು ತಲುಪಬೇಕು ನಿಮ್ಮನ್ನು ಕರೆದು ಕೊಂಡು ಹೋಗುವ ಮತ್ತು ಮರಳಿ ಕರೆ ತರುವ ಜವಾಬ್ದಾರಿ ನನ್ನ ಮೇಲಿದೆ ,ನಾನು 9ಗಂಟೆಗೆ ಬಂದು ನಿಮ್ಮನ್ನು pick up ಮಾಡಿ ಕೊಳ್ಳುತ್ತೇನೆ ನಿಮ್ಮ ಜೊತೆ ಚಾರ್ಟೆಡ್ ಫ್ಲೈಟ್ ನಲ್ಲಿ ಪ್ರಯಾಣಿಸುವ ಭಾಗ್ಯವೂ ನನಗೆ ಬಂದಿದೆ ಅಂದರು.

      

  ಸರಿಯಾಗಿ 9 ಗಂಟೆಗೆ ಅಧಿಕಾರಿ ಬಂದು ಸಾಂಬ್ರಾ ವಿಮಾನ ನಿಲ್ದಾಣ ತಲುಪಿದೆವು ಜೀವನದಲ್ಲಿ ಪ್ರಥಮ ಬಾರಿ ಚಾರ್ಟೆಡ್ ವಿಮಾನ ದಲ್ಲಿ ಕುಳಿತ ಅನುಭವ ಹೇಳಲು ಅಸಾಧ್ಯ ವಾದದು, H.A.L. ವಿಮಾನ ನಿಲ್ದಾಣದಲ್ಲಿ Land ಆಯಿತು. ಸರ್ಕಾರಿ ಇನ್ನೋವಾ ಕಾರು ಹಾಗೂ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಎಸ್ ಕಾರ್ಟ್ ವಾಹನ ನಮ್ಮನ್ನು ಕರೆದು ಕೊಂಡು ಹೋಗಲು  ಸಿದ್ದವಾಗಿ ನಿಂತಿತ್ತು.

    ಹಾ ಅನ್ನುವುದರಲ್ಲಿಯೆ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿ ಯವರ ನಿವಾಸದ ಮುಂದೆ ನನ್ನವಾಹನ ನಿಂತಿತು. ಯಡಿಯೂಪ್ಪನವರು ನಾಲ್ಕಾರು ಜನ ಶಾಸಕರ ಜೊತೆ ಚರ್ಚೆ ಮಾಡುತ್ತಾ ವರಾಂಡದಲ್ಲಿ ಕುಳಿತಿದ್ದರು,.

    ಬೆಳಗಾವಿಯ ಪೋಲಿಸ ಅಧಿಕಾರಿ ಇವರು ಬಾಪು ಗೌಡಾ ಪಾಟೀಲ ಅಂತಾ ಪರಿಚಯಿಸಿದರು ಮುಖ್ಯ ಮಂತ್ರಿ ಯಡಿಯೂರಪ್ಪ ನವರು  ಆತ್ಮೀಯ ವಾಗಿ ಬರ ಮಾಡಿ ಕೊಂಡು  ನನ್ನ ಹೆಗಲ ಮೇಲೆ ಕೈ ಹಾಕಿ ನನ್ನನು ತಮ್ಮAnti chamber ಗೆ ಕರೆದೊಯ್ದರು.

      ಚಹಾ ಕುಡಿತಿರೋ, ಕಾಫಿ ಕುಡಿತೀರೊ, ಶುಗರ್ಲೆಸೋ ಅಂತ ಕೇಳಿದರು.ಇನ್ನು ನನಗೆ ಶುಗರ ಆಗಿಲ್ಲ ಯಾವುದಾದರೂ ನಡಿಯತ್ತೆ ಅಂದೆ.  ಕಾಫಿ ಕುಡಿಯುತ್ತಲೇ ಯಡಿಯೂರಪ್ಪ ನವರೂ ಮಾತಿ ಗಿಳಿದರು, ಬಾಪು ಗೌಡ್ರೆ ನಿಮ್ಮ ಗರ್ದಿ ಗಮ್ಮತ್ ವಾಹಿನಿಯ ವೀಕ್ಷಕರು ರಾಜ್ಯಾದ್ಯಂತ ಲಕ್ಷಾಂತರ ಜನ ಇದ್ದಾರೆ, ಕಳೆದ ಒಂದು ವರ್ಷದಿಂದ ನೀವು ನನ್ನ ಹಾಗೂ ನನ್ನ ಮಗ ವಿಜಯೇಂದ್ರ ನ ವಿರುದ್ಧ ವಾಹಿನಿಯಲ್ಲಿ ಕಠೋರ ವಾಗಿ ಮಾತ ನಾಡು ತ್ತಿದ್ದಿರಿ ನಾನು ಅಧಿಕಾರ ವಹಿಸಿ ಕೊಂಡಾ ಗಿನಿಂದ. ಪ್ರವಾಹ, ಕರೋನ ದಂತ, ಕೆಟ್ಟ ದಿನಗಳು ನನಗೆ ಬಂದಿದ್ದು ತಮಗೆ ಗೊತ್ತಿದೆ ಒಂದು ಕಡೆ ಕೇಂದ್ರ ಸರ್ಕಾರದ ಅಸಹ ಕಾರವು ಇದ್ದಿದ್ದು ನಿಮಗೆ ಗೊತ್ತಿದೆ ಪಾಟಿಲರೆ ಈ ರಾಜ್ಯದ ಮುಖ್ಯಮತ್ರಿ ಆದವರು ಮುಳ್ಳಿನ ಮೇಲೆ ನಡೆಯ ಬೇಕಾಗುತ್ತದೆ ಅಂದರು ಅಷ್ಟರಲ್ಲಿಯೇ ವಿಜಯೇಂದ್ರ ನ ಆಗಮನ ವಾಯಿತು.ವಿಜಯೇಂದ್ರ ನಿಗೆ ನನ್ನನ್ನು ಪರಿಚಯಿಸಿದರು ವಿಜಯೇಂದ್ರ ನನ್ನನ್ನು ಕೆಂಗಣ್ಣಿನಿಂದಾ ನೋಡುತ್ತಾ ಕುಳಿತ್ತಿದ್ದರು,. ಮತ್ತೆ ಯಡಿಯೂರಪ್ಪ ಮಾತು ಮುಂದುವರಿಸಿದರು

   

     ಬಾಪು ಗೌಡ್ರೆ ನಿಮ್ಮ ಮೂವತ್ತು ವರ್ಷದ ಹೋರಾಟದ ಪ್ರತಿ ಹೆಜ್ಜೆಯೂ ನನ್ನ ಇಂಟ ಪೊಲೀಸ ಅಧಿಕಾರಿಗಳು ತಂದ ಮಾಹಿತಿ ಇಲ್ಲಿದೆ ಎಂದು ಫೈಲ್ ಇಟ್ಟರು,. ನೀವು ಅನೇಕ ಜನ ಶಾಸಕರನ್ನು ಆರಿಸಿ ಕಳುಹಿಸಿದ ಇತಿಹಾಸವು ಇದರಲ್ಲಿದೆ,

    ಕೆಡವಿದ ಇತಿಹಾಸವು ಇದೆ,ನೀವು ಮಾಡಿದ ಸಾಲದ ವಿವರವೂ ಇದರಲ್ಲಿದೆ, ಇಷ್ಟಾಗಿಯೂ ನೀವು ನಿಮ್ಮ ಹೋರಾಟ , ಮುಂದು ವರೆಸುತ್ತಿದ್ದಿರಿ ನಿಮ್ಮ ಜಿಲ್ಲೆಯ ಯಾವ ನಾಯಕರು ನಿಮ್ಮನ್ನು ಎತ್ತಿ ಹಿಡಿಯುವ ದಿಲ್ಲಾ, ನಿಮ್ಮ ಸಾಲ ವನ್ನೂ ತಿರಿಸುವದಿಲ್ಲ, ಈಗ ನಾನು ಆ ಎಲ್ಲ ಜವಾಬ್ದಾರಿಯನ್ನು ಹೋರುತ್ತೇನೆ ನೀವು ಬಯಸಿದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ B ಫಾರ್ಮ್ ಕೊಡುತ್ತೇನೆ. ಚುನಾವಣಾ ವೆಚ್ಚವನ್ನು ಹಿಡಿಯುತ್ತೇನೆ.ನೀವು ಮಾಡಿದ ಸಾಲವನ್ನು ಹರಿಯುತ್ತೇನೆ ಆದರೆ ನಂದು ಒಂದು ಕಂಡೀಷನ್ ಅಂದರು.

 

       ಏನು ಎಂದೇ..?ನಾನು ಬರುವ ಚುನಾವಣೆಯಲ್ಲಿ ನನ್ನ ಮಗ ವಿಜಯೇಂದ್ರ ನನ್ನು ಮುಖ್ಯ ಮಂತ್ರಿ ಮಾಡುವ ಗುರಿ ಇಟ್ಟು ಕೊಂಡಿದ್ದೇನೆ.

     ನೀವು ನಿಮ್ಮ ವಾಹಿನಿ ಮುಖಾಂತರ ನನ್ನನ್ನು ಹಾಗೂ ನನ್ನ ಮಗನನ್ನು ಒಳ್ಳೆಯ ರೀತಿಯಿಂದ ಬಿಂಬಿಸಿದರೆ ಕರ್ನಾಟಕ ದಲ್ಲಿ ಬಿಜೆಪಿ ಸರ್ಕಾರ ಬರುತ್ತೆ. ನೀವು ಕೂಡ ಗ್ರಾಮೀಣ ಕ್ಷೇತ್ರದಲ್ಲಿ ಆರಿಸಿ ಬರುತ್ತಿರಿ,ನಿಮ್ಮನ್ನು ಕೂಡ ಮಂತ್ರಿ ಮಾಡುತ್ತೇನೆ ಅಂದರು.“ನನ್ನ ಹೆಂಡತಿ ಆರಗಂಟೆ ಆಯಿತು ವಾಕಿಂಗ್ ಹೋಗಾಕ ಎಳರಿ ಅಂತಾ ಮುಸುಕು ಜಗ್ಗಿದಳು…”

 

     ನಿಮ್ಮ

ಬಾಪು ಗೌಡ ಪಾಟೀಲ

 

 


Spread the love

About Admin Bapu

Check Also

ಟೈಮ್ ಬಂದ ಹಾಂಗ ಹೋಗಬೇಕು….

Spread the loveಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು …

Leave a Reply

Your email address will not be published. Required fields are marked *