ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, ಗೋವಾ ನೋಡ್ರೀ…
ಗೋವಾ ರೆಸಾರ್ಟ್ ದೊಳಗ ಸಾಬಾ….
*ಎಲ್ಲಿ ಅದಿಯೋ ಸಾಬ
*ಸಾಹೇಬರ ಗೋವಾದಾಗ ಅದೆನರಿ.
*ಏನ್ ಚೈನಿ ಮಾಡಾಕ ಹೋಗಿದಿ ಏನೋ…?
*ಇಲ್ಲರಿ
*ಯಾವದರೆ ರಾಜ ಕಾರಣಿ ಮಕ್ಕಳ ಮದವಿಗೆ ರೆಸಾರ್ಟ್ ಬುಕ್ ಮಾಡಾಕ ಹೋಗಿದಿಯೇನೋ…?
*ಮದಿವಿ ಅಲ್ಲರಿ, ಮುನ್ಶಿ ಪಾಲ್ಟಿ
ಇಲೆಕ್ಷನ್ ಆರಿಸಿ ಬಂದ ಕ್ಯಾಂಡಿಡೇಟ್ ಗೊಳನ್ನ್ ಇಡುದಕ್ಕ ರೆಸಾರ್ಟ್ ಬುಕ್ ಮಾಡಾಕ ಬಂದೆನ್ ರಿ..
*ಅಲ್ಲೋ ಸಾಬ ಯಾವ ಮುನ್ಶಿ ಪಾಲ್ಟಿದೋ
*ಬೆಳಗಾವಿದರಿ..
*ಅಲ್ಲೋ ಸಾಬಾ ಬೆಳಗಾವಿ ಮುನ್ಶಿ ಪಾಲ್ಟಿ ಬಿಜೆಪಿ ಮೆಜಾರಿಟಿ ಬಂದೇತಿ ಅಭಯ್ ಪಾಟೀಲ ರ ಹೇಳಿದ್ದ ಮೇಯರ್ ಉಪ ಮೇಯರ್ ಆಗತೈತಿ. ಅವರ ಯಾಕ ರೆಸಾರ್ಟ್ ಮಾಡತಾರೊ ಸಾಬ..
*ಅವರದ ಅಲ್ಲರಿ.
*ಕಾಂಗ್ರೆಸ್ ನವರ 2 ಅಂಕಿ ದಾಟಿಲ್ಲ, ಅವರು ರೆಸಾರ್ಟ್ ಮಾಡೋದಿಲ್ಲ ,ಮತ್ಯಾರದೋ ಸಾಬಾ..
*ಸಾಹೇಬ್ರ ಇಲೇಕ್ಷನ್ ಆದ ಮರ ದಿವಾಸ ಬಂದೇನ ರಿ.
ಪಕ್ಷೇತರ ಮೆಜಾರಿಟಿ ಆತ ಅಂದ್ರ ಅವರನ ಕರಕೊಂಡ ಇಲ್ಲೇ ಇಟ್ಟ ನಮ್ಮ ಹಿಡಿತಾ ಸಾಧಾಸಬೇಕ ಅಂತ ಬಂದಿನಿರಿ.
*ಅಲ್ಲೋ ಸಾಬ ಪಕ್ಷೇತರ ಇಬ್ಬರ ಮೂರು ಮಂದಿ ಅಷ್ಟ ಬಂದಾರ್ ಹೆಂಗ ಹಿಡತಾ ಸಾದಸ್ ತಿಯೋ ಸಾಬಾ
*ಸಾಹೇಬ್ರ ವಾರ ಗಂಟಲೆ ಕಂಡಾಪಟ್ಟೆ ರೊಕ್ಕಾ ವಯ್ಯತರಿ. ಬಿಜೆಪಿ ಭಿನ್ನ ಮತೆರ, ಕಾಂಗ್ರೆಸ್ ಭಿನ್ನ ಮತೆರ, ಪಕ್ಷೇತರರಾ ಎಲ್ಲಾರೂ ಆರಿಸಿ ಬಂದರ 40 ಸಿಟ್ ಬರತಾವ ಅಂತ ಲೆಕ್ಕ ಇತ್ತರಿ. ಆದ್ರ ನಮ್ಮ ಲೆಕ್ಕಎಲ್ಲಾ ಉಲ್ಟಾ ಪಲ್ಟಿ ಆತರಿ,
ಅಲ್ಲೋ ಸಾಬ ರೊಕ್ಕಾ ಒದಾವರ ಎಲ್ಲಿ ಅದಾರೋ..
*ಸಾಹೇಬರ ಊರ ಬಿಟ್ಟಾರರಿ..
ನಿಮ್ಮ
ಬಾಪು ಗೌಡ ಪಾಟೀಲ