ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,
ಮಹಾಂತೇಶ್,ಚನ್ನರಾಜ, ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು…
*ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬ್
*ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ
*ಯಾರ ಹೊಲಾ ಸರ್ವೇ ಮಾಡಾಕ ಹೋಗಿ ಹೋಗಿದ್ಯೋ ಸಾಬ
*ಸಾಹೇಬರ M.L.C. ಎಲೆಕ್ಷನ್ ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ
*ಏನೇನ್ ಸರ್ವೇ ಮಾಡಿಕೊಂಡ ಬಂದಿಯೋ ಸಾಬ
*ಮನ್ನಿ ಅರುಣ ಕುಮಾರಜಿ ಬಂದಾಗ 13 ಮಂದಿ M.LA. ಗೊಳ ಅದೇರಿ, 3 ಮಂದಿ M.P. ಅದೆರಿ, 2ರ M.L.C. ಅದೇರಿ, ಮ್ಯಾಲಾಗಿ ಕಾಂಗ್ರೇಸ್ ಸರಕಾರ ಇದ್ದಾಗ ಮಹಾಂತೇಶ್. ಕವಟಗಿಮಠ, ಆರಿಸಿ ಬಂದಾರ ಮತ್ತ ರಮೇಶ್ ಜಾರಕಿಹೊಳಿ , ಬಾಲಚಂದ್ರ ಜಾರಕಿಹೊಳಿ,ಫಸ್ಟ್ ರೌಂಡ್ ನ್ಯಾಗ ಮಹಾಂತೇಶ್ ಅವರನ್ನ ಆರಿಸಿ ತರತೆವ್ ಅಂತ ಹೇಳಾತಾರರಿ. ಮಹಾಂತೇಶ್ ಅವರ ಫಸ್ಟ್
ರೌಂಡ್ ನ್ಯಾಗ ಕ್ಲಿಯರ್….
ಕಾಂಗ್ರೆಸ್ಸ್ ದ ಎನ್ ರಿಪೋರ್ಟ್ ಸಾಬ
ಸಾಹೇಬರ ಐದ ಮಂದಿ M.L.A. ಗೋಳ ಅದಾರ, ಕಾಂಗ್ರೆಸ್ಸಿನ ಎಲ್ಲಾ ಲೀಡರ್ ಗೋಳ ಚನ್ನರಾಜನ್ನ ಆರಿಸಿ ವಿಧಾನ ಪರಿಷತ್ ಕಳಸಬೇಕಂತ ಹೇಳಿ, ಡಿ ಕೆ ಶಿವಕುಮಾರ್ ಮುಂದ ಆಣಿ ಮಾಡಿ ಬಂದಾರ,
ಮ್ಯಾಲಾಗಿ, ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಅವರ ಒಂದನೇ ರೌಂಡ್ ನ್ಯಾಗ ಆರಿಸಿ ಬರುಹಂಗ ಪ್ಲಾನ್ ಮಾಡಿದಾರ ಹಿಂದಿನ ಇಲೆಕ್ಷನ ದಾಗ ಆದಾತಪ್ಪಗೊಳನ್ನ ಆಗದಾಂಗ ನೋಡಿ ಕೊಳ್ಳಾತಾರ,
ಚನ್ನರಾಜೂ ಫಸ್ಟ್ ರೌಂಡ್ ನ್ಯಾಗ ಕ್ಲಿಯರ್…..
ಲಖನ ಜಾರಕಿಹೋಳಿ ಹವಾ ಏನೋ ಸಾಬ
ನೋಡ್ರೀ ಸಾಹೇಬರ 97ರಿಂದ ಪ್ರತಿ ಗ್ರಾಮ ಪಂಚಾಯತ್ಯಾಗ ಅವರದ ಸಂಘಟನಾ ಐತಿ , ಯಾವದ ಇಲೇಕ್ಷನ್ ಮಾಡ್ ಬೇಕಾದರ ಗೋಕಾಕ ದಾಗ ಕುಂತ ಮಾಡತ್ತಿದ್ದರ, ಈ ಸಲಾ ಜಿಲ್ಲಾ ತುಂಬಾ ಅಡ್ಸ್ಯಾಡಾ ತಾರ, ಎರಡ್ ಕ್ಷೇತ್ರ ವೋಟ್ ಹಾಕಾಕ ಗಟ್ಟಿ ಅದಾವ, ಅಂಜಿ ವೋಟ್ ಹಾಕೋ ಮಂದಿ ಐತಿ, ಅವರು ಫಸ್ಟ್
ರೌಂಡ್ ನ್ಯಾಗ ಕ್ಲಿಯರ್…
*ಸಾಬ ಎಸ್ಟ್ ಮಂದಿ ಆರಸಬೇಕೊ
*ಇಬ್ಬರ ರಿ ಸಾಹೇಬರ
*ಮತ್ತ ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಹೆಂಗ ಆರಿಸಿ ಬರತಾರೋ ಸಾಬ
*ಸಾಹೇಬರ 14ನೆ ತಾರಿಕ ಸಂಜಿಕ ಹೇಳತೇನರಿ ಸಾಹೇಬರ
ನಿಮ್ಮ
ಬಾಪು ಗೌಡ ಪಾಟೀಲ
******