ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ
ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ..
ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಇವರು ವಿಧಾನ ಪರಿಷತ್ತ ಸ್ಥಾನಕ್ಕೆ ಲಾಭಿ ನಡೆಸಿದ್ದರು ಆದ್ರೆ ರಾಜ್ಯಸಭಾ ಟಿಕೆಟ್ ಒಲೆದಿದೆ
ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ ಆರ ಎಸ್ ಎಸ್ ಮೂಲದ ಈರಣ್ಣ ಮೊದಲಿನಿಂದಲೂ ಸಾಮಾನ್ಯ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ , ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ್ಅಧ್ಯಕ್ಷರಾಗಿ, ಜಿಲ್ಲಿಗೆ ಸೇವೆ ಸಲ್ಲಿಸಿದ್ದರು ಯಡಿಯೂರಪ್ಪ ನವ ರು ಹಿಂದೆ ಮುಖ್ಯ ಮಂತ್ರಿ ಯಾಗಿದ್ದಾಗ ಈ ಕಡಾಡಿ N G F ಅಧ್ಯಕ್ಷ ರಾಗಿಯು ಸೇವೆ ಸಲ್ಲಿಸಿದ್ದರು.
ಹಳ್ಳಿಯಿಂದ ದಿಲ್ಲಿಯ ವರೆಗೆ ಅನ್ನುವ ಸೂತ್ರವನ್ನ ಹಾಗೂ ಬಿಜೆಪಿ ಪಕ್ಷ ಸಾಮಾನ್ಯ್ ಕಾರ್ಯಕರ್ತರನ್ನು ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಒಂದು ಉದಾಹಣೆಯಾಗಿದೆ.
ಬಾಪುಗೌಡ್ ಪಾಟೀಲ