ರಣ ಹದ್ದಗಳು ಹಸಿದಿವೆ ಕೊರೊನಾ ಮಹಾಮಾರಿಯ ಕೆಂಗಣ್ಣಿಗೆ ಗುರಿಯಾಗಿರವ ವಿಶ್ವ ಮತ್ತು ಭಾರತ್ ಈ ಮಹಾ ಮಾರಿಯ ವಿರುದ್ಧ ಹೋರಾಡಲು ವಿಫಲ ವಾಗಿವೆ.
ವಿಶ್ವದ ಬಲಿಷ್ಠ ರಾಷ್ಟ್ರಗಳು ಕೈ ಚೆಲ್ಲಿ ಕುಳಿತಿವೆ ,ಭಾರತ ಕೂಡ ಈ ಮಹಾಮಾರಿ ಹೊಡೆತಕ್ಕೆ ತತ್ತರಿಸಿದೆ
ಕಳೆದ ಮೂರು ತಿಂಗಳಿಂದಲೂ ಈ ಮಹಾ ಮಾರಿಯ ಹೊಡೆತ ತಾಳಲಾರದೆ ಉದ್ಯೋಗ ಗಳು ಬಂದಾಗಿವೆ ,ದುಡಿದು ತಿನ್ನುವ ಕೈ ಗಳು ತುತ್ತು ಅನ್ನಕ್ಕಾಗಿ ಕೈ ಚಾಚುತ್ತಿವೆ ದೇಶದ ಸರ್ಕಾರಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ
ಸರ್ಕಾರದ ಅನೇಕ ಇಲಾಖೆಗಳ ಅಧಿಕಾರಿಗಳ ದಿನದ ಮಾಮೂಲು ನಿಂತು ಹೋಗಿದೆ, ಅಧಿಕಾರಿಗಳ ಹೆಂಡತಿಯರು ಮುಖ ಸಿಂಡರಿಸುತ್ತಿದ್ದಾರೆ,ಕೊರೊನಾ ಹಾವಳಿ ದಿನವು ಹೆಚ್ಚಾಗುತ್ತಿದ್ದರೂ ಅಧಿಕಾರಿವರ್ಗ ಲಾಕ್ ಡೌನ್ ಸಡಿಲಿಸಿದೆ.
ಯಾರ ಸತ್ತರೆ ನಮಾಗೆನಗಬೇಕಿದೆ ? ಎಂಬ ಮನೋ ಭಾವ ದಲ್ಲಿರುವ ಅಧಿಕಾರಿ ಶಾಹಿ ತಮ್ಮ ಗಿಂಬಳದ ಪಾಲಿಗಾಗಿ ಹಪಾಪಿಸುತ್ತಿದೆ
ನಾವು ನೀವು ಜಾಗೃತ ರಾಗಿ ಇರೋಣ