ಅಪ್ಪ {ಕುಂದಾರ ನಾಡ ಪಾಟೀಲರು} ಇಲ್ಲದ ಕೊರಗೊಂದನ್ನು ಬಿಟ್ಟು….
ಇಂದಿಗೆ ಸರಿಯಾಗಿ 24ವರ್ಷಗಳ ಹಿಂದೆ ದಿನಾಂಕ 12-1-1997 ರಂದು ಅಪ್ಪ {ಕುಂದಾರ ನಾಡ ಪಾಟೀಲರು} ನಮ್ಮನ್ನು ಬಿಟ್ಟು ಅಗಲಿದ್ದರು.ಅಪ್ಪನ ಧೀರ್ಘ ಕಾಲದ ಹೋರಾಟ, ದೀರ್ಘ ಕಾಲ ಆವರಿಸಿದ ಹೃದಯ ಬೇನೆ ಅಪ್ಪನನ್ನು ಹೈರಾಣು ಮಾಡಿದ್ದವು.ಕೊನೆಯವರೆಗೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ಅಪ್ಪ ನಡೆದು ಕೊಂಡಿದ್ದರು, 21- 1-1937 ರಲ್ಲಿ ಹುಟ್ಟಿದ್ದ ಅಪ್ಪ ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದ್ದರು.
ದಿ: ನಿಂಗಪ್ಪಣ್ಣ ಕರ್ಲಿಂಗಣ್ಣವರ್ ಶಾಸಕ ರಾಗಿದ್ದಾಗ ಅವರ್ ಮಗಳನ್ನು ಮದುವೆಯಾಗಿದ್ದರು,. ಡಿಗ್ರಿ ಮುಗಿಸಿದ್ದ ಅಪ್ಪ ನೌಕರಿಗಾಗಿ ಮಾವನನ್ನುಅಂಗ ಲಾಚಲಿಲ್ಲ,ನಟನಾಗಬೇಕೆಂಬಗೀಳು ಅಪ್ಪನನ್ನು ಮುಂಬೈ ಗೆ ಕರೆದು ಕೊಂಡು ಹೋಗಿತ್ತು. ಮಾಯಾ ನಗರಿ ಕೈ ಹಿಡಿಯಲಿಲ್ಲ S.A. ಹಾಯ ಸ್ಕೂಲ್ ಅಂಕಲಗಿ ಯಲ್ಲಿ ಮಾಸ್ತರ ಆದರು, ಯಾರೋ ಗೌಡನ ಮಗ ಮಾಸ್ತರರಂದದಕ್ಕೆ ರಾಜಿನಾಮೆ ಕೊಟ್ಟಿದ್ದರು.
70ರ ದಶಕದಲ್ಲಿ ” ಕುಂದರ ನಾಡ “ವಾರ ಪತ್ರಿಕೆ” ಪ್ರಾರಂಭ ಮಾಡಿದ್ದ,ಅಪ್ಪ {ಕುಂದಾರ ನಾಡ ಪಾಟೀಲರು} ನೇರ ಬರವಣಿಗೆಗೆ ಅನೇಕ ರಾಜಕಾರಣಿಗಳು ನಿದ್ದೆಗೆಟ್ಟಿದ್ದರು, ಅನೇಕ ರಾಜಕಾರಣಿ ಗಳನ್ನು ವಿರೋಧ್ ಕಟ್ಟಿ ಕೊಂಡಿದ್ದರು,
ಅಪ್ಪನ ಬರವಣಿಗೆಗೆ P. ಲಂಕೇಶ್, ತೇಜಸ್ವಿ, ಪಾಟೀಲ ಪುಟ್ಟಪ್ಪ, ಚಂದ್ರ ಶೇಖರ್ ಪಾಟೀಲ, ರವಿ ಬೆಳಗೆರೆ , ಬಸವರಾಜ ಕಟ್ಟೀಮನಿ ,ಸರ್ಜು ಕಾಟಕರ, ಮುಂತಾದವರು ಮಾರು ಹೋಗಿದ್ದರು. ” ಕುಂದರ ನಾಡ “ವಾರ ಪತ್ರಿಕೆ” ಪ್ರಸಿದ್ಧಿ ಯೊಂದಿಗೆ ಅಪ್ಪನನ್ನು ಕುಂದಾರ ನಾಡ ಪಾಟೀಲರು ಎಂದೆ ರಾಜ್ಯ ಗುರು ತಿಸಿತ್ತು.
ಅಪ್ಪನ ಸಾಕಷ್ಟು ಗೌಡಕಿ ಜಮೀನು ಅಪ್ಪನನ್ನು ಒಕ್ಕಲ ತನಕ್ಕೆ ಬೆನ್ನು ಹತ್ತಿದ ಅಪ್ಪ ಒಕ್ಕಲು ತನದ ಖರ್ಚು ವೆಚ್ಚ ನೋಡಿ ರೈತ ಹೋರಾಟಕ್ಕೆ ಧುಮುಕಿದರು.H .S.ರುದ್ರಪ್ಪ , ಸುಂದರೇಶ್, ಕಡಿದಾಳು ಶಾಮಣ್ಣ, ಬೆಳಗಾವಿ ತಾಲೂಕಿನ ಗೆಜಪತಿಯ ಸುರೇಶ್ ಬಾಬು ಪಾಟೀಲ್, ನಾವಲ ಗಟ್ಟಿಯ ರುದ್ರಪ್ಪಾ ಮೊಕಾಶಿ, ಮುಂತಾದವರನ್ನು ಕೂಡಿಸಿ ರೈತ ಹೋರಾಟಕ್ಕೆ ಅಣಿಯಾದರು.
ನರಗುಂದ ನವಲಗುಂದ ಬಂಡಾಯ , ಜೈಲ್ ಬರೋ ಕಾರ್ಯಕ್ರಮ, ಜಿಲ್ಲಾಧಿಕಾರಿ ಕಚೇರಿ ಮುಂಚೆ ಉಪವಾಸ ಸತ್ಯಾಗ್ರಹ, ಅಪ್ಪನ ನೇತೃತ್ವ ದಲ್ಲಿಯೇ ನಡೆದಿದ್ದವುರೈತ ಹೋರಾಟದ ಜೊತೆ ಸಾಹಿತ್ಯಿಕ ವಾಗಿಯು ಗುರುತಿಸಿ ಕೊಂಡಿದ್ದರು.
ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಪ್ರಪಂಚ, ಕರ್ಮವೀರ, ಸಂಕ್ರಮಣ, ಲಂಕೇಶ್ ಪತ್ರಿಕೆ, ಹಸಿರು ಕ್ರಾಂತಿ, ಸಮತೋಲ, ಕನ್ನಡಮ್ಮ, ಲೋಕ ದರ್ಶನ, ಪತ್ರಿಕೆ ಗಳಲ್ಲಿ, ಕಥೆ ಕಾದಂಬರಿ, ವಿಚಾರ ಧಾರೆಗಳು ಪ್ರಕಟ ವಾಗುತ್ತಿದ್ದವು
. ರೈತ ಸಂಘದ ಉಚ್ರಾಯ ದಿನಗಳಲ್ಲಿ ಹೃದಯ ಬೇನೆ ತೊಂದರೆಯಿಂದ ವಿಶ್ರಾಂತಿ ಪಡೆದು ಸಾಹಿತಿಕವಾಗಿ, ಹಂತ,ಉಲ್ಲಂಘನೆ, ಮುಂಗಾರಿ, ಒಳಸಂಚು, ಕಾದಂಬರಿ ಕಥೆ, , ಕವನ, ಪ್ರಂಭದ ,ರೇಡಿಯೋ ನಾಟಕನಾಟಕ ಗಳನ್ನು ಬರೆದು ಸಾಹಿತಿಗಳಾಗಿ ಗುರುತಿಸಿ ಕೊಂಡಿದ್ದರು.“ಪ್ರಪಂಚ “ವಾರ ಪತ್ರಿಕೆ ಯಲ್ಲಿ ಅಪ್ಪ ಬರೆಯುತ್ತಿದ್ದ “ಗರ್ದಿ ಗಮ್ಮತ್ತ್” ಕಾಲಂ ಬಹಳ ಜನಪ್ರಿಯ ವಾಗಿತ್ತು.
1995 ರಲ್ಲಿ M .P. ಪ್ರಕಾಶರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿದ್ದರು.1987 ರಲ್ಲಿ ಜಾರ್ಜ್ ಫರ್ನಾಂಡಿಸ್ ರ ಸಲಹೆಯಂತೆ ಮುಂಬೈ ನ K.E.M.ಆಸ್ಪತ್ರೆ ಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ಅಂದಿನ K.E.M. ಡೀನ್ ಪರೂಳಕರ ಪಾಟೀಲರೆ ಹತ್ತು ವರ್ಷ ನಿಶ್ಚಿಂತವಾಗಿರಿ ಅಂದಿದ್ದರು.
ಸರಿಯಾಗಿ ಹತ್ತು ವರ್ಷಕ್ಕೆಅಪ್ಪ {ಕುಂದಾರ ನಾಡ ಪಾಟೀಲರು} ನಮ್ಮನು ಬಿಟ್ಟು ಅಗಲಿದ್ದರು.
ಅವರು ಕಲಿಸಿದ ಶಾಣ್ಯಾ ತನ, ಹುಂಬು ಧೈರ್ಯ, ಅವರ ಹೋರಾಟದ ಮನೋಭಾವ ನನ್ನನ್ನು ದಿನವೂ ಈ ಸಮಾಜಕ್ಕೆ ಏನಾದರೂ ಮಾಡಬೇಕೆನ್ನುವ ಹಠ ದೊಂದಿಗೆ “ಗರ್ದಿ ಗಮ್ಮತ್ “ವಾಹಿನಿ ಪ್ರಾರಂಭ ಮಾಡಿದ್ದೇನೆ
ನಿಮ್ಮ
ಬಾಪು ಗೌಡ ಪಾಟೀಲ್