ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ,
* ಎಲ್ಲಿ ಹೋಗಿದ್ಯೋ ಸಾಬಾ
*ಎಲ್ಲಿ ಇಲ್ಲರಿ ಸಾಹೇ ಬರ
*ಖರೆ ಹೇಳೋ ಸಾಬಾ
*ಸಾಹೇಬ್ರ ಹುಲಿ ಬೆನ್ನ ಹತ್ತಿ ಹೋಗಿನ್ನಿರಿ
*ಹುಲಿ ಬೆನ್ನ?
*ರಾಜಕೀಯ ಹುಲಿಗೋಳ ಬೆನ್ನ ಹತ್ತಿ ಹೋಗಿನ್ನಿರಿ ಸಾಹೇಬರ..
*ಅಲ್ಲೋ ಸಾಬಾ ವಸಂತರಾವ ಕಾಲಲೆನ ಹುಲಿ ಕಾಲ ಮುಗದೈತಲ್ಲೊ ಸಾಬಾ..
*ಸಾಹೇಬ್ರ ಕಾಲಚಕ್ರ ತಿರಗತೈತರಿ
*ಅಂದ್ರ ಇವ ಹೊಸಾ ಹುಲಿಗೋಳ ಇರಬೇಕ ಬಿಡೋಸಾಬಾ
*ಹೌದರಿ ಸಾಹೇಬರ
*ಎಷ್ಟ ಹುಲಿ ಆದಾವೊ ಸಾಬಾ..?
*ಈಗ ಸಧ್ಯೆ ಐದ ಹುಲಿ ಗೋಳ ತಯಾರ ಅದಾವರಿ ಸಾಹೇಬರ
*ಅವ ಎಲ್ಲೆಲ್ಲಿ ಅಡ್ಯಾಡಾ ತಾವೊ ಸಾಬಾ..?
*ಬೆಳಗಾವಿ ಲೋಕ ಸಭಾ ಕ್ಷೇತ ದಾಗ ಎರಡ ಕಡೆ, ಚಿಕ್ಕೋಡಿ ಲೋಕ ಸಭಾ ಕ್ಷೇತ್ರ ದಾಗ ಮೂರ ಕಡೆ ಸಾಹೇಬರ..
*ಸಾಬಾ ಅವೆನ ಪಕ್ಷದ ಝೇಂಡಾ ಹಿಡಕೊಂಡ ಅಡ್ಯಾಡಾತಾವೊ? ಎನ್ ಹಂಗ ಅಡ್ಯಾಡಾತಾವೊಸಾಬಾ..
*ಸಾಹೇಬ್ರ ಈಗ ಸಧ್ಯ ಹಂಗ ಅಡ್ಯಾಡಾತಾವರಿ
*ಮುಂದ ಹೆಂಗೋ ಸಾಬಾ
*ಮುಂದ ಇಲೆಕ್ಷನ ದಾಗ ಹೋಗಿ ಗುಠಾರ ಹಾಕಿದ್ರ ಎಲ್ಲಾ ಖುಲ್ಲಮ್ ಖುಲ್ಲಾರಿ ಸಾಹೇಬ್ರ
*ಅಲ್ಲಿ ಇದ್ದ ಹಾಲಿ ಹುಲಿಗೋಳ ಪರಿಸ್ಥಿತಿ ಹೆಂಗೋ ಸಾಬಾ
*ಸಾಹೇಬರ ಆ ಹುಲಿ ಗೋಳ ಬಾಲಾ ಅಲ್ಲಾಡಿಸಿ ಕೊಂಡ ನಿಂದರ ತಾವರಿ..
ನಮ್ಮನ್ನ ಮುರಿ ಬ್ಯಾಡರಿ, ನೀವೇನು ಮಾಡ ದಿರು ನಮ್ಮ ತಕ ರಾರ್ ಇಲ್ಲರಿ, ಅಂತ ಹೂವಿನ ಹಾಸಗಿ ಹಾಸಿ ಸ್ವಾಗತ ಮಾಡತಾವರಿ ಸಾಹೇಬರ
ನಿಮ್ಮ
ಬಾಪುಗೌಡಾ ಪಾಟೀಲ
ಹುಲಿಗೋಳ ಅಡ್ಯಾಡಾ ತಾವ ಹುಷಾರ್!