ಶಾಸಕಿ ಹೆಬ್ಬಾಳ್ಕರ್ ಶಾಸಕ ಸಂಗಮೇಶರ ಗಟ್ಟಿಗೊಂಡು ಸಂಬಂಧ
Marriages Made in Heaven
ನಾಲ್ಕು ದಿನಗಳಿಂದ ಗೋವಾಪಂಚ ತಾರಾ (ಲೀಲಾ ಪ್ಯಾಲೇಸ್) ಹೊಟೇಲ್ ನಲ್ಲಿ ನಡೆದ ಮೃಣಾಲ ಹಾಗೂ
ಶಾಸಕ ಸಂಗಮೇಶರ ಸಹೋದರನ ಮಗಳು DR ಹಿತಾ ಮದುವೆಗೆ ಇಂದು ತೆರೆ ಬಿದ್ದಿದೆ.
ಕರೋನಾ ಸಂಕಷ್ಟದಲ್ಲಿ ಗ್ರಾಮೀಣ ಕ್ಷೇತ್ರದ ಹಿರಿಯರ ಆಶೀರ್ವಾದ ಪಡೆದ ಮನೆ ಮಗಳು ಲಕ್ಷ್ಮಿ ಹೆಬ್ಬಾಳ್ಕರ ರು ಲಿಂಗಾಯತ ಸಂಪ್ರದಾಯ ದಂತೆ ಕೊಂಕಣ್ ನಾಡಿನಲ್ಲಿ ಆಪ್ತೆ ಷ್ಟ್ರರ ಸಮ್ಮುಖ ದಲ್ಲಿ ಸಂಬಂಧ ಗಟ್ಟಿ ಗೊಳಿಸಿ ಕೊಂಡರು.
ಶಾಸಕಿ ಲಕ್ಷ್ಮಿಹೆಬ್ಬಾಳ್ಕರ , ಸಹೋದರ ಚೆನ್ನರಾಜ ಹಟ್ಟಿಹೊಳಿ, ಬಂದ ಅತಿಥಿ ಗಳ ಉಪಚಾರ ಅಚ್ಚುಕಟ್ಟಾಗಿ ಮಾಡಿದ್ದರು.ನಿನ್ನೆ ರಾತ್ರಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ. ಕೆ .ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,ಈಶ್ವರ್ ಖಂಡ್ರೆ, ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, U. T.ಖಾದರ್, ಶಾಸಕಿ ಅಂಜಲಿ ನಿಂಬಾಳ್ಕರ್, ಅನೇಕ ಗಣ್ಯರು ಉಪಸ್ಥಿತರಿದ್ದು ವಧು ವರರನ್ನು ಹರಿಸಿದರು.
ಈ ವರ್ಷದ ಅದ್ದೂರಿ ಮದುವೆಗೆ ಗ್ರಾಮೀಣ ಕ್ಷೇತ್ರದ ಅಭಿಮಾನಿಗಳೂ ಜಿಲ್ಲೆಯ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳು, ಪಕ್ಷಾತೀತ ವಾಗಿ ಹಾಜರಾಗಿ ವಧು ವರರನ್ನು ಹಾರೈಸಿದರು..
ನಿಮ್ಮ
ಬಾಪು ಗೌಡ ಪಾಟೀಲ್