ಬೆಳಗಾವಿ ,ಬಿಜಾಪುರ ,ಬಾಗಲಕೋಟ ,ಜಿಲ್ಲೆಗಳ ನೂರು ಕೋಟಿ ಟೆಂಡರ್ ಆಹ್ವಾನ…
ಟೆಂಡರ್ ಮೊತ್ತ : 100ಕೋಟಿ
ಟೆಂಡರ್ ವ್ಯಾಪ್ತಿ: ಬೆಳಗಾವಿ, ಬಿಜಾಪುರ ,ಬಾಗಲಕೋಟ, ಜಿಲ್ಲೆಗಳು
ಟೆಂಡರ್ ಅರ್ಹತೆ: ಸಹಿ ಮಾಡಲು ಬಂದರೆ ಸಾಕು, ನೋಟು ಗಳನ್ನು ಮಶೀನ್ ಇಲ್ಲದೆ ಎಣಿಸಲು ಬಂದರೆ ಸಾಕು…,
ಟೆಂಡರ್ ವಯೋಮಿತಿ : 18ವರ್ಷ ಮೇಲ್ಪಟ್ಟವರು….
ಟೆಂಡರ್ ಪಡೆಯು ವಿಧಾನ: ಬಿಜೆಪಿ , ಕಾಂಗ್ರೆಸ್, ,ಜೆಡಿಎಸ್ ಒಬ್ಬೊಬ್ಬ ಶಾಸಕರಿಂದ ಶಿಫಾರಸ್ಸು ಪತ್ರ…
ಟೆಂಡರ್ ನಿಯಮ: R .T. I. ಕಾರ್ಯ ಕರ್ತ ಭೀಮಪ್ಪಗಡಾದ ,ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ,ಗಳಿಂದ ನೂರು ರೂಪಾಯಿ ಬಾಂಡ್ ಮೇಲೆ ಈ ವಿಷಯವನ್ನು ಮಾಹಿತಿ ಹಕ್ಕಿನಡಿಯಲ್ಲಿ ಕೇಳುವದಿಲ್ಲ,ಹಾಗೂ ಪ್ರಸಾರ ಮಾಡುವುದಿಲ್ಲವೆಂದುಮುಚ್ಚಳಿಕೆ ಪತ್ರ,
ಟೆಂಡರ್ ಉದ್ದೇಶ: ಮೇಲ್ಕಂಡ ಮೂರು ಜಿಲ್ಲೆಗಳ ಬಿಡಾಡಿ ನಾಯಿಗಳು, ಬಿಡಾಡಿ ಹಂದಿ ಗಳು, ಮಂಗ ಗಳನ್ನೂ ಹಿಡಿದು ಪಶ್ಚಿಮ ಘಟ್ಟದ ಗುಡ್ಡ ಗಳಲ್ಲಿ ಬಿಡುವುದು,
ಟೆಂಡರ್ ಕೊನೆಯ ದಿನಾಂಕ: 31/06/2021 ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಮಾತ್ರ. {ಒಂದೇ ದಿನ}
ಟೆಂಡರ್ ಸಲ್ಲಿಸುವ ವಿಳಾಸ: ಡಾ; ಹುಚ್ಚೇಶ್ವರ ರಾವ್ (ಮೂರು ಬಾರಿಲೋಕಾಯುಕ್ತ ರಿಂದ ರೆಡ್ ಮಾಡಿಸಿ ಕೊಂಡವ ) ಕ್ಲಬ್ ರೋಡ್ ಬೆಳಗಾವಿ M: :98765432
ವಿ ಸೂ: ಬೆಳಗಾವಿ ಮಹಾನಗರ ಪಾಲಿಕೆ ಬಿಡಾಡಿ ನಾಯಿ ಗಳನ್ನು ಹಿಡಿಯಲು 47ಲಕ್ಷ ಖರ್ಚು ಮಾಡಿ ದ್ದಾಗಿ ಮಾಹಿತಿ ಹಕ್ಕು ಕಾರ್ಯ ಕರ್ತ ಭೀಮಪ್ಪ ಗಡಾದ ಅವರಿಗೆ ಲಿಖಿತವಾಗಿ ತಿಳಿಸಿದ್ದಕ್ಕೆ ನಮ್ಮ ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದರ ಕುರಿತು ವಿಡಂಬನಾತ್ಮಕ ಬರಹ…