ಸಾಬ ಝೀರೋ ಟ್ರಾಫಿಕ್ ನ್ಯಾಗ ರಾಜಭವನಕ ಬಂದಾ ಫೋಟೋ ಹಚಿ ಕೊಟ್ಟಿದಾನು…
ನಮ್ಮ ಸಾಬ ಎಂಟ್ ದಿವಸ ದಿಲ್ಲ್ಯಾಗ ಇದ್ದ ,ಬೆಂಗಳೂರಕಬಂದ,ಅದು ಝೀರೋ ಟ್ರಾಫಿಕ್ ನ್ಯಾಗ ಜೊಲ್ಲೆ ಅವರ ಗಾಡಿ ಹಿಂದ ರಾಜ ಭವನಕ್ಕೆ ಬಂದ, ಇಂದ ಬೆಳಗಾವಿಗೆ ಬಂದಾನು ಬೆಳಿಗ್ಗೆ ಫೋನ್ ಮಾಡಿ ದಿಲ್ಲ್ಯಾ ಗಿನ ಸುದ್ದಿಯೆಲ್ಲ ಎರಡ ದಿಂದಾಗ ಕೊಡ್ತೆನ್ ಅಂದಾನ.
ಬೆಳಿಗೊಂದ ಫೋಟೋ ಹಚ್ಚಿಕೊಟ್ಟ ಇದ ಯಾವ ಡಿಪಾರ್ಟ್ ಮೆಂಟ , ಇದ ಎಲ್ಲಿ ಹಚ್ಚಿದಾರು ನನಗ ಹೇಳಿರಿ ಅಂತ ಚಾಲೆಂಜ್ ಮಾಡಿದಾ,ಸಾಬ ದಿಲ್ಲ್ಯಾ ಗ ಇರತಿ ಬೆಂಗಳುರಿನ್ಯಾಗ ಇರತಿ ,ಉತ್ತರ ಕರ್ನಾಟಕದ ಎಲ್ಲಾ ಜಿಲ್ಲಾ ದಾಗಇರತಿ
ಒಂದ್ ಫೋಟೊ ಹಚಿಗೊಟ್ಟ ಯಾವ ಡಿಪಾರ್ಟ್ಮೇಂಟ್ ಯಾವ ಊರಂತ “ಸಂಗ್ಯಾ ಬಾಳ್ಯಾ” ನಾಟಕದಾಗಿನ ಪರಂ ಹೇಳಿದಾಂಗ ಹೇಳಿದ್ರ ಹೆಂಗ ಹೇಳುದೋ ಅಂತ ಕೆಳಿನಿ
ನೋಡ್ರೀ ಜಗತ್ತಿನ ಸುದ್ದಿ ನಿಮಗ ಗೊತ್ತ ದೇಶದ ಸುದ್ದಿ ನಿಮಗ ಗೊತ್ತ, ರಾಜ್ಯದ ಸುದ್ದಿ ನಿಮಗ ಗೊತ್ತ, ನಿಮ್ಮಆಫೀಸ್ ನ್ಯಾಗ ಕುಂತ ಎಲ್ಲಾ ಆಡಸ್ತೆರಿ ಇದನ್ನ ಕಂಡ ಹಿಡಿರಿ ಅಂದಾ.
ಯಾವ ಉರಾರೆ ಹೇಳೊ ಸಾಬಅನ್ನಿಅದಕ್ಕ ಅವ ಹೇಳಿದ ಊರ ಹೇಳ್ತೇನೆ, ಜಾಗ ಹೇಳ್ತೆನ್ , ಡಿಪಾರ್ಟ್ ಮೇಂಟ ಹೇಳೋದಿಲ್ಲ ಅಂದ.
ಹೇಳ ಅನ್ನಿಇದ ಬೆಳಗಾವಿ ಊರಾಗ ಕೋರ್ಟ್ ಕಂಪೌಂಡ ಅಂತ ಒಂದ್ ಐತಿ ಅಲ್ಲಿ ಬೆಳಗಾವಿ ಜಿಲ್ಲಾ ದಾಗಿನ್ ಆಫೀಸ್ ಗೋಳ ಎಲ್ಲಾ ಅದಾವು ದೊಡ್ಡ ದೊಡ್ಡ ಆಫೀಸರು ಇರತಾರ,ದೊಡ್ಡ ದೊಡ್ಡ ಮನಷ್ಯಾರು ಆಗಿದಾರ,. ಅಷ್ಟ ಅಲ್ಲದ M.L.A. ಆಗುದಕ ತಾಲಿಂ ಮಾಡು Z.P.ಆಫಿಸನು ಐತಿಅಂದ ಹಳಿ Z.P. ಆಫಿಸ್ ಮುಂದ ಈ ಬೋರ್ಡ್ ಐತಿ ಅಂದಾಆಂವಾ ಕಳಿಸಿದ್ದ ಬೋರ್ಡ್ ದಿಟ್ಟಿಸಿ ನೋಡಿ ನಿ ಅಕ್ಷರ ಮಸಕ ಮಸಕ ಕಂಡು.
ಸರಕಾರಿ ಅಧಿಕಾರಿ ಗೋಳ ಯಾರು ಆ ಬೋರ್ಡ್ ನೋಡಿರ್ ಜ್ವರಾನ ಬರಾತಾವು ನಿಮಗ ಓದುಗರ ನಿಮಗ ತಿಳದರ
ಆ ಬೋರ್ಡ್ ಯಾವ ಇಲಾಖೆದಂತ ಹೇಳಿದರ ನಾ ಅವರಿಗೆ ತಿಳಸುತೇನು
ನಿಮ್ಮ
ಬಾಪು ಗೌಡ ಪಾಟೀಲ