ಸಾಬ್ ಮುಂಬೈ ದಾಗ ಅದಾನು ಠಾಕ್ರೆ, ಶಿಂದೆ, ಫಡ್ನವೀಸ್,ಯಾರನ್ನ ದಂಡಿಗ ಹಚ್ಚತಾನ ಯಾಂಬಾಲ.
ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ,
ಸಾಹೇಬ: ಎಲ್ಲದಿಯೋ ಸಾಬ್
ಸಾಬ: ಇಲ್ಲೆ ಅದೇನ ರಿ..
ಸಾಹೇಬ: ಇಲ್ಲೆಅಂದ್ರ ಎಲ್ಲೋ
ಸಾಬ: ಇಲ್ಲೆ ಮುಂಬೈ ದಾಗ ಅದೇನ್ ಬಿಡ್ರಿ
ಸಾಹೇಬ :ಮುಂಬೈಕ ಎನ್ ಮಾಡಾಕ ಹೋಗಿದಿಯೋ
ಸಾಬ:ಎನ್ ಇಲ್ಲರಿ ತಿರಗ್ಯಾಡಾಕ ಬಂದಿನಿರಿ
ಸಾಹೇಬ : ನೀ ಹಂಗ್ ಹೋಗಾವ್ ಅಲ್ಲೋ
ಸಾಬ: ಫೋನ್ ಮಾಡಿರ ಬಿಡ್ರಿ
ಸಾಹೇಬ : ಮಂತ್ಲಿ ಕೊಡಾಕ ಮಟಕಾ ಕಿಂಗ್ ರತನ ಲಾಲ ಕತ್ರಿ ಫೋನ್ ಮಾಡಿದ್ದೆನೊ
ಸಾಬ: ಇಲ್ಲರಿ
ಸಾಹೇಬ : ಶೇರ ಮಾರ್ಕೆಟ್ ದಾಗ ರೊಕ್ಕಾ ಹಕಾಕ ಹೋಗಿದ್ದೇನೊ
ಸಾಬ: ಇಲ್ಲರಿ
ಸಾಹೇಬ : ಕ್ಲಬಿಗೆ ಇಸ್ಪೀಟ್ ಆಡಾಕ ಹೊಗಿದ್ದೇನೋ
ಸಾಬ: ಇಲ್ಲರಿ
ಸಾಹೇಬ : ಮತ್ತೆದಕ ಹೊಗಿದಿಯೋ
ಸಾಬ: ಫಡ್ನವೀಸ್ ಕರದಿದ್ದರರಿ
ಸಾಹೇಬ : ಅಂದ್ರ ಮುಖ್ಯ ಮಂತ್ರಿ ಮಾಡಾಕ ಹೊದಂಗ ಆತ ಬಿಡೋ
ಸಾಬ: ಹೌದರಿ
ಸಾಹೇಬ : ಮತ್ತ ಏಕನಾಥ ಶಿಂದೆನ್ ಪರಿಸ್ಥಿತಿ ಏನೋ..
ಸಾಬ: ಅವರನ್ನ ಕೋರ್ಟ್ ಕಚೇರಿ ಅಡ್ಯಾಡ ಸ ತೆವ್ ಬಿಡ್ರಿ
ಸಾಹೇಬ : ಅವರನ್ನ ಕೋರ್ಟ್ ಕಚೇರಿ ಅಡ್ಯಾಡಸಿರ ಫಡ್ನವೀಸ್ ಹೆಂಗ ಮುಖ್ಯ ಮಂತ್ರಿ ಆಗತಾರೊ
ಸಾಬ: IT & Ed ಎಲ್ಲಾ ನಮ್ಮ ಕೈಯಾಗ ಅದಾವರಿ
ಸಾಹೇಬ :ಠಾಕ್ರೆ ಅವರ್ ಪರಿಸ್ಥಿತಿ ಏನೋ ಸಾಬ್
ಸಾಬ: ಸಾಮನಾ ಪೇಪರ ಧಾಗ “ಕಾಲಂ” ಬರ್ಯಾಕ ಹಚ್ಚತೆನ್ ಬಿಡ್ರಿ
ಸಾಹೇಬ :ಅಂದ್ರ ಮೂರು ಮಂದಿನ್ ದಂಡಿಗಿ ಹಚ್ಚತಿ , ಶಾಣ್ಯಾ ಅದಿ ಬೆಳಗಾವಿಗೆ ಬಂದ್ ಬಿಡೋ ಸಾಬ್