ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,
*ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ
*ಎಲ್ಲಿ ಇಲ್ಲರಿ ಸಾಹೆಬರ
*ಇಲ್ಲೆಕ್ಷನ್ ದಾಗ ಟಿವ್ಯಾಗ ,ಪೇಪರ ದಾಗ, ನಿಂದ ಸುದ್ದಿ ಇತ್ತಲ್ಲೊ ಸಾಬಾ..
*ಹೌದರಿ ಸಾಹೇಬರ
* ಮತ್ತೆನಾತೊ ಸಾಬಾ
* ಸಾಹೇಬರ ಹೈ ಕಮಾಂಡನ ಬಗ್ಗಿಸಿದ್ದರಿ ನಾವ,ಹೇಳಿ ದಾವ ರಿಗೆ” B ಫಾರ್ಮ್” ತಂದಿದ್ದುರಿ ಟ್ರಕ ಗಂಟಲೆ
ರೊಕ್ಕಾ ಕೊಟ್ಟಿದುರಿ, ಆದರು..
*ಆದರು ಅಂದ್ರ ಸಾಬಾ
* ಮೂರು ಮಂದಿಗೆ ಜಗಳಾ ಹಚ್ಚಿದು, ಮೂರು ಮಂದಿನ ಮುಖ್ಯ ಮಂತ್ರಿ ಮಾಡ್ತೆವ ಅಂತ ಆಣಿ ಮಾಡಿದ್ದು ಆದರು,
*ಆದರು, ಆದರು ಅಂದ್ರ ಏನೋ ಸಾಬಾ.
* ಮೂರು ಮಂದಿ ಮುಖ್ಯ ಮಂತ್ರಿ ಅರಿವಿ ಹೊಲಸಿದ್ದರ್, ಅವರಿಗೆ ಜಗಳಾ ಹಚ್ಚಿ ನಾವ ಮುಖ್ಯಮಂತ್ರಿ
ಆಗ ಬೇಕಂತ ಪ್ಲಾನ್ ಮಾಡಿ ರಾಜ್ಯದಾ ಗ 50 ಮಂದಿ M.L.A. ಕ್ಯಾಂಡಿಡೇಟ್ ಗೊಳಿಗೆ ರೊಕ್ಕಾ ಕೊಟ್ಟಿದ್ದು ಆದರು …
* ಸಾಬಾ ಹೊಳ್ಳೊಳ್ಳಿ ಆದರು ಆದರುಆನ್ನಾತಿಯಲ್ಲೊ,
*ಏನ್ ಹೇಳಲಿ ಸಾಹೇಬರ ರಾಜ್ಯದ ಮತದಾರರ ಶಾಣ್ಯರ ನಾ ತಿನಕ್ಯಾಡಿ ಆರಿಸಿಬನ್ನಿ, ನಾ ಕೊಟ್ಟ ಸಿಟಗೊಳೆಲ್ಲ ಬಿದ್ದಬಿಟ್ಟುರಿ,ಮೈ ತುಂಬ ಸಾಲಆತು, ಕಂಟ್ರಾಕ್ಟರ್ ಗೊಳಕಡೆ ಕೆಲಸಾ ಕೊಡ್ತೆನ್ ಅಂತ ಅಡ್ವಾನ್ಸ್ ರೊಕ್ಕಾ ತೋಗೊಂಡಿನ್ನಿ ಅವರ ನನ್ನ ಹುಡ್ ಕ್ಯಾಡಾತಾರು,ಹೈ ಕಮಾಂಡದವರು ನನ್ನ ಹುಡಕ್ಯಾಡಾತಾರು ಅದಕ್ಕ ಯಾರಿಗೂ ಕಾಣದಾಂಗ ಮುಖಾ ಮುಚ್ಚಿಕೊಂಡ ಅಡ್ಯಾಡಾತೆನು
*ಮುಂದ ಹೆಂಗೋ ಸಾಬ
*ಸಾಹೇಬರ ನಮ್ಮ ಪಕ್ಷ ದಾಗ ನಮ್ಮ ಬಂಡವಾಳ ಗೊತ್ತಾತು, ಈ ಪಕ್ಷ ದಾವರ್ ನನ್ನ ಮ್ಯಾಗ enquiry ಸುರು
ಮಾಡಾವರ ಎನ್ ಮಾಡೋದ ತಿಳಿದಂಗ ಆಗೆತಿ
*ಬಿಡೋ ಸಾಬ ಇಲ್ಲೂ ನಿನ್ನ ಕಾಯಾವರ ಅದಾರ ಬಿಡು