ಜೂನಿಯರ್ ಫೂಲನ್ ದೇವಿ
ಉತ್ತರಪ್ರದೇಶದ ಮಾಜಿ ಸಂಸದೆಉತ್ತರಪ್ರದೇಶದ ಜಮೀನ್ದಾರರಿಂದ ಅತ್ಯಾಚಾರಕ್ಕೊಳಗಾಗಿ ಕೈಯಲ್ಲಿ ಬಂದೂಕು ಹಿಡಿದು ದೇಶವನ್ನು ನಡುಗಿಸಿದ ಪೂಲನ್ ದೇವಿ ಉತ್ತರ ಪ್ರದೇಶದ ಜನರಿಗೆ ಮನೆ ಮಾತಾಗಿದ್ದಾಳೆ
ಅದೇ ರೀತಿ ಇಂದು ಇಡೀ ರಾಷ್ಟ್ರವೇ ಬೆಚ್ಚಿಬೀಳಿಸುವಂತೆ ಸುದ್ದಿ ಉತ್ತರಪ್ರದೇಶದಿಂದ ಬಂದಿದೆ. ಅನಾಮಿಕ ಶುಕ್ಲ ಎಂಬ ಕಿಲಾಡಿ ಹೆಣ್ಣುಮಗಳು ಉತ್ತರಪ್ರದೇಶದ ದಂತಹ ದೊಡ್ಡ ರಾಜ್ಯದಲ್ಲಿ, ಶಿಕ್ಷಣ ಇಲಾಖೆಯಲ್ಲಿ, 25 ಸ್ಥಳಗಳಲ್ಲಿ
ಒಂದೇ ಇಲಾಖೆಯಲ್ಲಿ ಇದೇ ಹೆಸರಿನಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು 13 ತಿಂಗಳಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಉತ್ತರಪ್ರದೇಶ ಸರ್ಕಾರಕ್ಕೆ ಟೋಪ್ಪಿಗೆ ಹಾಕಿದ್ದಾಳೆ.
ಒಂದೇ ಇಲಾಖೆಯಲ್ಲಿ ಅನಾಮಿಕ ಶುಕ್ಲ ಹೆಸರಿನಿಂದ ಶಿಕ್ಷಕಿ ಅಂತ 24 ಜನರನ್ನು ಸೃಷ್ಟಿಸಿ ಪಗಾರು ಪಡೆದು ಪಡೆದಿರುವ ಈಕೆಯ ಬುದ್ಧಿವಂತಿಕೆ ಮೆಚ್ಚಲೇಬೇಕು.
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ನಾಡಿನಲ್ಲಿ ಇಂಥ ಕೃತ್ಯವೆಸಗಿದ ಜಾಲವನ್ನೇ ತಡವಾದರೂ ಪತ್ತೆಹಚ್ಚಿದವರಿಗೆ ನಾವು ಅಭಿನಂದನೆ ಸಲ್ಲಿಸಲೇಬೇಕು. ಅನೇಕ ರಾಜ್ಯಗಳಲ್ಲಿ ಇಂಥ ಜಾಲಗಳು ಇರುವ ಸಾಧ್ಯತೆ ಇದ್ದು ,ಸರಕಾರ ಇಂಥ ಜಾಲಗಳ ಬಗ್ಗೆ ಕಣ್ಣಿಡುವುದು ಒಳ್ಳೆಯದು .
ನಿಮ್ಮ ಬಾಪು ಗೌಡ ಪಾಟೀಲ್