ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,
*ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ
*ಎಲ್ಲಿ ಇಲ್ಲರಿ ಸಾಹೆಬರ
*ಮಂತ್ರಿಮಂಡಲ ಆದಾಗಿಂದ ಕಂಡೆ ಇಲ್ಲಲೋ ಸಾಬಾ
*ಚಾಮರಾಜನಗರದಿಂದ ಬೀದರ್ ಮಟಾ ಹೋಗಿನ್ನಿರಿ
*ಅಲ್ಲಿನ ಕೆಲಸಾ ತಗದ್ಯೋ ಸಾಬಾ?
*ಅದನ್ನ ನಿಮಗೇನ ಹೇಳೋದ ಬಿಡ್ರಿ ಸಾಹೇಬ್ರ
*ಆತ ಬಿಡ ಅಂದ್ರ ಸಕರಿ ಫ್ಯಾಕ್ಟರಿ,ಮೈನಿಂಗ್ , ಎಂ ಸ್ಯಾಂಡ್, ಖುಲ್ಲ ಜಾಗ ಹುಡುಕ್ಯಾಡಕ ಹೋಗಿರ್ಬೇಕು ಬಿಡುಸಾಬ
*ಅದಲ್ಲ ಬಿಡ್ರಿ
*ಮತ್ಯಾವ ಕೆಲಸೋ
*ಸಾಹೇಬ್ರ ನಾವು ಹೇಳಿದಂಗ ಕೇಳು ಅಧಿಕಾರಿಗಳನ್ನ ಹುಡುಕ್ಯಾಡಾಕ್ ಬಂದೀನ್ರೀ
*ಹೇಳಿದಂಗ ಕೇಳು ಅಧಿಕಾರಿಗೋಳ ಅಂದ್ರ
*ನಾವ್ ಬಡಿ ಅಂದ್ರ ಬಡಿಬೇಕು, ,ಕೇಸ್ ಹಾಕ ಅಂದ್ರಕೇಸ್ ಹಾಕ್ಬೇಕು, ಜೈಲಿಗೆ ಕಳಸಂದ್ರ ಜೈಲಿಗೆ ಕಳಸಬೇಕು,ಅವರು
ಕಾಯ್ದೆಸಿರಿ ಕೆಲಸ ಮಾಡತ್ತಿದ್ದರು ಬೆಕಾಯ್ದೆಸಿರಿ ಅಂತ ರಿಪೋರ್ಟ್ ಕೊಡಬೇಕು,
ನಾವ್ ಹೇಳಿದಂಗ ಕೇಳು ಆಫೀಸರ್ ಹುಡುಕಾಡಾಕ್ ಹೋಗಿನ್ರೀ ಸಾಹೇಬರೇ
*ಅಲ್ಲೋ ಸಾಬ ನಮ್ಮ ಜಿಲ್ಲಾದಾಗ ಸಿಗವಾಾಲ್ಲರ ಏನ
*ಸಾಹೇಬ್ರ ನಮ್ಮ ಜಿಲ್ಲದಾಗ ಕೆಲವು ಅಧಿಕಾರಿಗೊಳಿಗೆ ನಮ್ಮ ಆಟ ಗೊತ್ತಆಗೆತಿ ವಲ್ಲಿ ಅಂತಾರು
*ಮತ್ತ ಅಲ್ಲಿ ಸಿಗುತಾರ ಏನ?
*ತೊಡೆಮಂದಿ ಬರತೆವ್ಅಂತಾರು, ತೊಡೆಮಂದಿ ವಿಚಾರ ಮಾಡತೆವ ಅಂತಾರು
*ಮತ್ತ ಈಗಾಗಲೆ ಲಿಸ್ಟ್ ಆಗೆತಿ ಅಂತಲ್ಲ,
*ಅದ ಲಿಸ್ಟ್ ಕ್ಯಾನ್ಸಲ್ ಆಗೆತಂತಹುಡ ಕ್ಯಾಡಾತೆವು
*ಅಂತೂ ಜಿಲ್ಲಾ ಮತ್ತ ರಾಜ್ಯ ಆಳಾವರ ಬಿಡೋ ಸಾಬ
ನಿಮ್ಮ
ಬಾಪುಗೌಡ ಪಾಟೀಲ್