ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ, ಚಿಕ್ಕೋಡಿ ನೋಡ್ರಿ,
* ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ
* ಇಲ್ಲೇ ಇದ್ದೀನ್ರಿ ಸಾಹೆಬರ
* ಇಲ್ಲೇ ಅಂದ್ರ ಎಲ್ಲೋ ಸಾಬಾ
*ಚಿಕ್ಕೋಡ್ಯಾಗರಿ ಸಾಹೆಬರ
*ಅಲ್ಲೆನ್ ಮಾಡಿದ್ಯೊ ಸಾಬಾ
* ಸರ್ವೇ ಮಾಡಿನಿರಿ ಸಾಹೇಬ್ರ
*ಯಾವ ಸರ್ವೇನೊ ಸಾಬಾ
* ಎಲೆಕ್ಷನ್ ಸರ್ವೇರಿ ಸಾಹೇಬರ
*ನಿನ್ನ ಸರ್ವೇ ರಿಪೋರ್ಟ್ ಎನ್ ಬಂತೋ ಸಾಬಾ
*ಸಾಹೆಬರ ಚಿಕ್ಕೋಡಿ ಲೋಕಸಭಾ ವ್ಯಾಪ್ತಿ ದಾಗಿನ, ಶೆರೆ ಅಂಗಡ್ಯಾವರಾ, ಶೆರೆ ಕುಡ್ಯಾವರಾ, ಊರಊರಾಗ ಪಟ್ಟಿ ಅಂಗಡ್ಯಾಗ ಶೆರೆ ಮಾರಾವರಾ ಕಾಂಗ್ರೆಸ್ ಮಾಡಿದಾರರಿ ಸಾಹೇಬರ
* ಮತ್ತ ಯಾರಯಾರ ಮಾಡಿ ದಾರೊಸಾಬಾ
*ನರೆಗಾ ಕೆಲ್ಸಾ ಮಾಡೋ ಹೆಣ್ಣ ಮಕ್ಕಳಾ, ಗಂಡ ಮಕ್ಕಳಾ, ಮಾಡಿದಾರರಿ ಸಾಹೇಬರ
*ಅವರು ಮಾಡಿದಾರು?
*ಹುಂರಿ ಸಾಹೇ ಬರ್
*ಅವರನ್ನ ಬಿಟ್ಟ ಮತ್ತ ಯಾರ ಮಾಡಿದಾರೊ ಸಾಬಾ
*ಗ್ಯಾರೆಂಟಿ ರೊಕ್ಕ ತೊಗೊಳೋ ಹೆಂಗಸರಾ,ಬಸ್ಸಿನ್ಯಾಗ ಅಡ್ಡಾಡು ಹೆಣ್ಣು ಮಕ್ಕಳ,
ಅವರ ಮನೆ ಗಂಡಸರ ,ಎಲ್ಲರೂ ಮಾಡಿದಾರು ,8 ವಿಧಾನ ಸಭಾ ಕ್ಷೇ ತ್ರ ದಾಗ ರೊಕ್ಕದ ಹೊಳಿ ಹರದೆತರಿ ಸಾಹೇಬರ
*ಹಂಗದ್ರ ಈಜಿ ಆರಿಸಿ ಬರ್ ತಾರ ಬಿಡೋ ಸಾಬಾ
*ಸಾಹೇಬ್ರ ಅಷ್ಟೇ ಅಲ್ರಿ ಬ್ಯಾರೆ ಪಕ್ಷದ M.L.A.ಗೋಳು ಮಾಡಿದಾರರಿ ಸಾಹೇಬರ
*ಅಂದ್ರ ಲೀಡ್ ಆಗೋದು ಬಿಡೊ ಸಾಬಾ
*ಬ್ಯಾರೆ ಪಕ್ಷದಾಗಿನ ಮಾಜಿ M.P, ಸಕ್ಕಾರಿ ಫ್ಯಾಕ್ಟರಿ ಚೇರ್ಮನ್ ಗೋಳಾ, K.M.F.ಡೈರೆಕ್ಟರ ಗೋಳಾ,
D.C.C. ಬ್ಯಾಂಕ ಡೈರೆಕ್ಟರ ಗೋಳಾ,P.L.D. ಬ್ಯಾಂಕ ಡೈರೆಕ್ಟರ ಗೋಳಾ, ಎಲ್ಲಾರು ಆರಿಸಿ ತರಾಕ ಗುದ್ಯಾಡಿದಾರರಿ
*ಅಂದ್ರ ಲೀಡಭಾಳ ಆಗೋದುಬಿಡೊ ಸಾಬಾ
*ಸರ್ಕಾರದಾಗ ಎಷ್ಟ ಇಲಾಖೇಗೊಳ ಅದಾವ ಎಲ್ಲಾರು, ಅವರ ಸಂಭಂದಿಕರ ಅಧಿಕಾರಿಗೋಳ ಹಗಲಿ, ರಾತ್ರಿ ಅನ್ನದ
ಗುದ್ಯಾಡಿದಾರರಿ ಸಾಹೇಬರ
*ರಾಜ್ಯ ದಾಗ ಲೀಡ್ ಆಗೋದು ಬಿಡೊ ಸಾಬಾ
*ಅಷ್ಟ್ ಅಲ್ಲರಿ, ಲಿಂಗಾಯತ ಸಮಾಜಾ, ಕುರಬರ ಸಮಾಜಾ, ಜೈನ ಸಮಾಜಾ, ಮರಾಠಾಸಮಾಜಾ, ಎಸ್ಸಿ, ಎಸ್ಟಿ, ಮುಸ್ಲಿಂ ಸಮಾಜಾ, 90 ಪರ್ಸೆಂಟ್ ಮಾಡೇ ತರಿ ಸಾಹೇಬರ
*ಛೋಲೋ ಆತೇಳ ಸಾಬ ಎದರಾಳಿ ಡಿಪಾಜಿಟರೆ ಉಳಿತೈತಿ ಇಲ್ಲೊಸಾಬ?