ಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು ಕೊಡಾಕ್ ಕೆಮರಾಗಳನ್ನು ಬಳಸಲಾಗುತ್ತಿತ್ತು. ಯಾವಾಗ ಮೊಬೈಲ್ ಕೆಮರಾಗಳು ಮಾರುಕಟ್ಟೆಯನ್ನು ಪ್ರವೇಶಿಸಿದವೋ ಕೊಡಾಕ್ ಕಂಪನಿ ಮಾರುಕಟ್ಟೆಯಿಂದ ನಿರ್ಗಮಿಸಲೇಬೇಕಾಯಿತು.
–
ಇದೇ ಸಮಯದಲ್ಲಿ ಬಹುತೇಕ ದೊಡ್ಡ ಕಂಪನಿಗಳೂ ಮಾರುಕಟ್ಟೆಯಿಂದ ನಿರ್ಗಮಿಸತೊಡಗಿದವು.
ಎಚ್ ಎಂ ಟಿ (ಕೈಗಡಿಯಾರ)
ಬಜಾಜ್ (ಸ್ಕೂಟರ್)
ಡಯನೋರಾ (ಟಿವಿ)
ಮರ್ಫಿ (ರೇಡಿಯೊ)
ಇವಾವವೂ ಕಳಪೆ ಕಂಪನಿಗಳಲ್ಲ, ದೊಡ್ಡ ಗುಣಮಟ್ಟದ ಕಂಪನಿಗಳೇ. ಮತ್ತೇಕೆ ಮಾರುಕಟ್ಟೆಯಿಂದ ಹಿಂದೆ ಸರಿಯಬೇಕಾಯಿತು ? ಯಾಕೆಂದರೆ ಸಮಯಕ್ಕೆ ಸರಿಯಾಗಿ, ಸಮಯಕ್ಕೆ ತಕ್ಕಂತೆ ಈ ಕಂಪನಿಗಳು ತಮ್ಮನ್ನು ತಾವು ಬದಲಾಯಿಸಿಕೊಳ್ಳಲಿಲ್ಲ.
–
ನಿಮಗೆ ತಿಳಿದಿರಲಿಕ್ಕಿಲ್ಲ ಮುಂದಿನ 10 ವರ್ಷಗಳಲ್ಲಿ ಏನೆಲ್ಲ ಬದಲಾಗಲಿದೆ ಎಂದು. ನಾವು ನಿಧಾನವಾಗಿ “ನಾಲ್ಕನೇ ಕೈಗಾರಿಕಾ ಕ್ರಾಂತಿ” ಯುಗಕ್ಕೆ ಪ್ರವೇಶಿಸುತ್ತಿದ್ದೇವೆ.
–
ಇಂದಿನ ಪ್ರಸಿದ್ಧ ಕಂಪನಿಗಳನ್ನು ಸ್ವಲ್ಪ ಗಮನಿಸಿ.
’ಉಬರ್’ ಒಂದು ಸಾಫ್ಟವೇರ್ ನ ಹೆಸರು. ಇವರಲ್ಲಿ ಸ್ವಂತ ಕಾರುಗಳಿಲ್ಲ. ಈಗ ಜಗತ್ತಿನ ದೊಡ್ಡ ಟ್ಯಾಕ್ಸಿ ಕಂಪನಿಗಳಲ್ಲಿ ಇದೂ ಒಂದು.
–
’ಏರ್ ಬಿ ಎನ್ ಬಿ’ ಸದ್ಯ ಜಗತ್ತಿನ ಒಂದು ದೊಡ್ಡ ಹೊಟೇಲ್ ಕಂಪನಿ. ನಿಮಗೆ ನಗು ಬರಬಹುದು, ಜಗತ್ತಿನಲ್ಲಿ ಇದರ ಒಂದೇ ಒಂದು ಸ್ವಂತ ಹೊಟೇಲ್ ಇಲ್ಲ
ಹೀಗೇ ಸಾಕಷ್ಟು ಕಂಪನಿಗಳ ಉದಾಹರಣೆಗಳನ್ನು ಕೊಡಬಹುದು. ಪೇಟಿಎಮ್, ಓಲಾ ಕ್ಯಾಬ್, ಓಯೋ ರೂಮ್ಸ್, ಮುಂ.ಇನ್ನು ಮೇಲೆ ಹೊಸ ವೈದ್ಯರು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ’ವಾಟ್ಸನ್’ ಎಂಬ ಸಾಫ್ಟವೇರ್ ’ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗಳನ್ನು ನಮ್ಮ ವೈದ್ಯರಿಗಿಂತ 4 ಪಟ್ಟು ಹೆಚ್ಚು ಕರಾರುವಕ್ಕಾಗಿ ಗುರುತಿಸುತ್ತದೆ. ಮನುಷ್ಯನ ಬುದ್ಧಿಮತ್ತೆಯನ್ನು ಮೀರಿಸುವಂತಹ ಕಂಪ್ಯೂಟರ್ ಗಳು 2030ರಲ್ಲಿ ಕಾರ್ಯನಿರ್ವಹಿಸಲಿವೆ.
–
ಇಂದು ಸಂಚರಿಸುತ್ತಿರುವ ಶೇ.90ರಷ್ಟು ಕಾರುಗಳು ಮುಂದಿನ 20 ವರ್ಷಗಳಲ್ಲಿ ರಸ್ತೆಗಳ ಮೇಲೆ ನಿಮಗೆ ಕಾಣಿಸುವುದೇ ಇಲ್ಲ. ರಸ್ತೆಗಳ ಮೇಲೆ ಆಗ ವಿದ್ಯುತ್ ನ ಅಥವಾ ಹೈಬ್ರಿಡ್ ಕಾರುಗಳು ಸಂಚರಿಸುತ್ತವೆ. ರಸ್ತೆಗಳು ನಿಧಾನವಾಗಿ ಖಾಲಿಯಾಗಲಿವೆ. ತೈಲದ ಬಳಕೆ ನಿಧಾನವಾಗಿ ಕಡಿಮೆಯಾಗಿ, ತೈಲ ಉತ್ಪಾದಿಸುವ ಅರಬ್ ರಾಷ್ಟ್ರಗಳು ದಿವಾಳಿಯಾಗಲಿವೆ.
–
ಒಂದು ವೇಳೆ ನಿಮಗೆ ಕಾರು ಬೇಕಾದಲ್ಲಿ ನೀವು ಉಬರ್ ನಂತಹ ಸಾಫ್ಟವೇರ್ ನ್ನು ಕೇಳುವಿರಿ. ಆಗ ನಿಮ್ಮ ಮನೆಯ ಬಾಗಿಲಿಗೇ ಚಾಲಕನಿರದ ಕಾರು ಬಂದು ನಿಲ್ಲುತ್ತದೆ. ನೀವು ಇತರ ಪ್ರಯಾಣಿಕರೊಂದಿಗೆ ಆ ಕಾರಿನಲ್ಲಿ ಪಯಣಿಸಿದರೆ ನಿಮಗೆ ಬೈಕ್ ಗಿಂತ ಕಡಿಮೆ ದರದಲ್ಲಿ ಪ್ರಯಾಣಿಸಬಹುದಾಗಿದೆ.
–
ಚಾಲಕನಿರದ ಕಾರಿನಲ್ಲಿ ಅಪಘಾತಗಳು ಶೇ.99ರಷ್ಟು ಕಡಿಮೆ ಎಂದು ತಿಳಿದುಬಂದಿದೆ. ಹೀಗಾಗಿ ಕಾರು ವಿಮೆಯ ಅಗತ್ಯವಿರುವುದಿಲ್ಲವಾದ್ದರಿಂದ ಕಾರು ವಿಮಾ ಕಂಪನಿಗಳು ಮಾರುಕಟ್ಟೆಯಿಂದ ನಿರ್ಗಮಿಸಬೇಕಾದ ಸ್ಥಿತಿ ಉಂಟಾಗುತ್ತದೆ.
–
ಸ್ವಲ್ಪ ಯೋಚಿಸಿ ಕೇವಲ 10 ವರ್ಷಗಳ ಹಿಂದೆ ’ಎಸ್ ಟಿಡಿ ಬೂತ್’ಗಳಿದ್ದವು. ಯಾವಾಗ ಪ್ರತಿಯೊಬ್ಬರ ಕೈಗೆ ಮೊಬೈಲ್ ಬಂದವೋ ಆಗ ಈ ಬೂತ್ ಗಳು ಕಾಣೆಯಾದವು.
ಇನ್ನು ಹೇಗಾದರೂ ಬದುಕಬೇಕೆಂಬ ’ಎಸ್ ಟಿಡಿ ಬೂತ್’ ನವರು ಮೊಬೈಲ್ ಕರೆನ್ಸಿ ರೀಚಾರ್ಜ್ ಆರಂಭಿಸಿದರು. ಯಾವಾಗ ಜನರು ತಮ್ಮ ಮನೆಯಲ್ಲಿಯೇ ಮೊಬೈಲ್ ಗೆ ಕರೆನ್ಸಿಯನ್ನು ತಾವೇ ಹಾಕಿಕೊಳ್ಳುವ ಅನುಕೂಲತೆಯನ್ನು ಹೊಂದಿದರೋ ಕರೆನ್ಸಿ ಹಾಕುವ ಅಂಗಡಿಗಳು ತಮ್ಮ ವ್ಯಾಪಾರವನ್ನು ಮೊಬೈಲ್ ಮಾರುವ, ಕೊಳ್ಳುವ ಹಾಗೂ ರಿಪೇರಿ ಮಾಡುವ ಅಂಗಡಿಗಳನ್ನಾಗಿಸಿದರು. ಇದೂ ಸಹ ಇನ್ನು ಮುಂದೆ ಬದಲಾಗಲಿದ್ದು, ಜನ ಅಂಗಡಿಗಳಿಗಿಂತ ಈಗ ಹೆಚ್ಚಾಗಿ ’ಅಮೆಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ’ ಮೊಬೈಲ್ ಗಳನ್ನು ಖರೀದಿಸುತ್ತಿದ್ದಾರೆ. ಈ ಅಂಗಡಿಗಳ ಸ್ಥಿತಿಯನ್ನು ಯೋಚಿಸಿ.
–
ಹಣದ ವ್ಯಾಖೆಯೂ ಸಹ ಈಗ ಬದಲಾಗಿದೆ. ಹಣ ಈಗ ಹಣವಾಗಿ ಉಳಿದಿಲ್ಲ ಅದೀಗ ’ಪ್ಲಾಸ್ಟಿಕ್ ಹಣ’ವಾಗಿ ಬದಲಾಗಿದೆ. ಈಗ ಯಾರೂ ಹಣವನ್ನು ಮೊದಲಿನಂತೆ ಪರ್ಸ್ ಗಳಲ್ಲಿ ಇಟ್ಟುಕೊಳ್ಳದೇ ಬ್ಯಾಂಕ್ ಗಳ ಕಾರ್ಡ್ ಗಳನ್ನಿಟ್ಟುಕೊಂಡು ಓಡಾಡುತ್ತಿದ್ದಾರೆ. ಇಲ್ಲಿ ಹಣದ ಬಳಕೆಯೂ ಸಹ ಕಡಿಮೆಯಾಗಿ ಮೊಬೈಲ್ ನ ಆಪ್ ಗಳ ಮುಖಾಂತರ ಹಣ ಚಲಾವಣೆಯಾಗುತ್ತಿದೆ.
–
ಯಾವುದು ಕಾಲಕ್ಕೆ ತಕ್ಕಂತೆ ಬದಲಾಗುವುದಿಲ್ಲವೋ ಜಗತ್ತು ಅದನ್ನು ಹಿಂದಕ್ಕೆ ತಳ್ಳಿಬಿಡುತ್ತದೆ. ಕಾರಣ ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯವೂ ಹೌದು.
ಕಾಲದೊಂದಿಗೆ ಚಲಿಸಿ………….
–
ಅಮರಿಂದರ್ ಸಿಂಗ್ ಮಲ್ಹಿ ವಾಲ್‌ನಿಂದ
ಇಂಗ್ಲಿಷ್‌ನಿಂದ ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ- Siddharam Kudligi