ಅಣ್ಣಾ ಮೃಣಾಲಗೆ ಒಂದು ಹೆಣ್ಣು ನೋಡು, ಹುಡಗಿ M.B.B.S. ಆಗಿರಬೇಕು, ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್
ಒಂದು ಆರು ತಿಂಗಳ ಹಿಂದೆ ಲಕ್ಷ್ಮಿ ಹೆಬಾಳ್ಕರರ ಮನೆಯಲ್ಲಿ ಕುಳಿತಾಗ ಮಗ ಮೃಣಾಲಗೆ ಒಂದು ಹೆಣ್ಣು ನೋಡು ಅಣ್ಣಾ , ಹುಡಗಿM.B.B.S.ಆಗಿರಬೇಕು , ನಾನು ನೂರು ಹಾಸಿಗೆ ಆಸ್ಪತ್ರೆ ಕಟ್ಟಿ ನನ್ನ ಮತ ಕ್ಷೇತ್ರದ ಮತ್ತು ಜಿಲ್ಲೆಯ ಬಡ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಮಾಡೋಣ ಅಣ್ಣಾ ಅಂತಾ ಅಂದಿದ್ದರು.ಅವರು ಮಾತನಾಡುವಾಗ ಬಡ್ ಜನರ ಮತ್ತು ಮತ ಕ್ಷೇತ್ರದ ಜನರ ಕಾಳಜಿಯ ಬಗ್ಗೆ ನನ್ನ ಮನಸ್ಸು ತುಂಬಿ ಬಂದಿತ್ತು.
ಅದಾದ ಸ್ವಲ್ಪೇ ದಿನದಲ್ಲಿ ಭದ್ರಾವತಿಯ ಶಾಸಕ. B.K. ಸಂಗಮೇಶರ ಅಣ್ಣನ ಮಗಳು Dr. ಹೀತಾ ಜೊತೆ ಹೊಂದಾಣಿಕೆ ಆಗಿದೆ ನಾಳೆ ಮನೆ ನೋಡಲು ಬರುತ್ತಿದ್ದಾರೆ ,ನೀನು ಬರಲೇ ಬೇಕು ಅಂತ ಲಕ್ಷ್ಮಿ ಹೆಬ್ಬಾಳಕರರು ನನ್ನನ್ನು ಕರೆದಿದ್ದರು.ಬೀಗರನ್ನು ಬರ ಮಾಡಿಕೊಳ್ಳಲು ಸಂಕಮ ಹೋಟೆಲಿಗೆ ಹೋಗಿದ್ದೆವು.Dr ಹಿತಾರರನ್ನು ಅಂದು ನೋಡಿದ್ದೆ ಮೃಣಾಲಗೆ ಒಳ್ಳೆಯ ಜೋಡಿ ಅಂತಾ ಭಾವಿಸಿದೆ.
ಎರಡೂ ವರೆ ವರ್ಷದ ಹಿಂದೆ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಚುನಾವಣೆ ಪ್ರಚಾರ ತುರಿಸಿನಿಂದ ನಡೆದಿತ್ತು ಲಕ್ಷ್ಮಿ ಅಕ್ಕಾರ ಜೊತೆ ಪಶ್ಚಿಮ ಭಾಗದ ಮರಾಠಿಹಳ್ಳಿಯೊಂದರಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದೆ.ವೇದಿಕೆ ಮೇಲಿನಿಂದ ನಾನು ಮೃಣಾಲನನ್ನು ದಿಟ್ಟಿಸುತ್ತಿದ್ದೆ ಕಾರ್ಯಕರ್ತರ ಜೊತೆ ಕೆಳಗೆ ಕುಳಿತು ಸಾಮಾನ್ಯ ಕಾರ್ಯ ಕರ್ತರ ತೊಂದರೆ ಆಲಿಸುತ್ತಿದ್ದ.,
ಮತ ಕ್ಷೇತ್ರದ ಹಿರಿಯರಿರಲಿ ,ಕಿರಿಯರಿರಲಿ ,ಎಲ್ಲರ ಜೊತೆ ನಯವಿನಯದಿಂದ ವರ್ತಿಸುವ ಮೃಣಾಲ ಮತ ಕ್ಷೇತ್ರದ ನರಣಾಡಿ ಬಲ್ಲ ತಮ್ಮ ಚೆನ್ನರಾಜ, ಸೊಸೆ ಡಾಕ್ಟರ್ ಹಿತಾ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ರ ಕನಸುಗಳು ಬೇಗ ಇಡೆ ರಲೆಂದು ಹಾರೈಸುತ್ತೇನೆ ನನ್ನನ್ನು ಶಿವಮೊಗ್ಗ engagement ಕಾರ್ಯಕ್ರಮಕ್ಕೆ ಬಾ ಅಂತಾ ಆಮಂತ್ರಿಸಿ ದ್ದರು ವಯಕ್ತಿಕ ಅಡಚಣೆಗಳ ಮುಖಾಂತರ ಹೋಗಲಾಗಿಲ್ಲ.
ಇಲ್ಲಿಂದಲೇ ಮೃಣಾಲರನ್ನುDr ಹಿತಾರನ್ನು ಆಶೀರ್ವದಿಸುತ್ತೇನೆ
ನಿಮ್ಮ
ಬಾಪುಗೌಡ ಪಾಟೀಲ್