ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ,
* ಏನೋ ಸಾಬಾ ಅಮಿತಶಾರ ಮನಿ ಮುಂದ ಎನ್ ಮಾಡಾತಿಯೋ..
*ಎನಿಲ್ಲರಿ ಸಾಹೇಬ್ರ ಅಮಿತಶಾರ ಅಪಾಯಿಂಟ್ಮೆಂಟ್ ಐತರಿ..
* ಅಲ್ಲೋ ಸಾಬಾ ನಿನ್ನಗುಡೆ ಇರಾವರ ಅಪ್ರೋನ ಹಾಕೊಂಡಾವರ ಡಾಕ್ಟರ ಏನೋ..
* ಹೌದ್ರಿ ಸಾಹೇಬ್ರ
* ಅಮಿತ ಶಾರಿಗೆ ಹೇಳಿ ಮೆಡಿಕಲ್ ಕಾಲೇಜ ಸ್ಯಾಂಕ್ಷನ್ ಮಾಡ್ಸಾ0ವ ಏನೋ ಸಾಬಾ..
* ಇಲ್ಲರಿ.
* ಮತ್ತ ಈ ಡಾಕ್ಟರನ ಯಾಕ ಕರಕೊಂಡ ನಿಂತಿಯೋ..
* ಸಾಹೇಬ್ರ ಯಾಕ ಕರಕೊಂಡ ನಿಂತೆನ್ ಅಂತ ನೀವ ಹೇಳ್ರಿಲ..
* ಸಾಬಾ ಹ್ವಾದ ಎಂಎಲ್ಎ ಎಲೆಕ್ಷನ್ ದಾಗ ಉತ್ತರ ವಿಧಾನಸಭಾ ಕ್ಷೇತ್ರದಾಗ ಓಣಿ ಓಣಿಗೆ ಫ್ಲೆಕ್ಸ್ ದಾಗ ಈ ಡಾಕ್ಟರ ನ ಫೋಟೋನ ಕಾಣತ್ತಿದ್ದು,ಅ0ವ ಇರಬೇಕು ಬಿಡೋಸಾಬಾ.
*ಹೌದರಿ ಸಾಹೇಬ್ರ ..
*ಸಾಬಾ ಎರಡ್ ವರ್ಷ ಈ ಡಾಕ್ಟರ ಹಗಲ, ರಾತ್ರಿ, ಶಿವರಾತ್ರಿ, ಶಿವ ಜಯಂತಿಗೆ ,ಮನಿ ಮನಿಗೆ ಪೂಜಾ ಸಾಮಾನ ಕೊಟ್ಟ ನನಗ್ ಎಂಎಲ್ಎ ಟಿಕೆಟ್ ಸಿಗತೇತ್ ಅಂತ ಅಡ್ಡಾಡಿ ಲಾಸ್ಟ್ ಮೊಮೆಂಟ್ ದಾಗ ತಿಕೆಟ್ ತಪ್ಪಿಸಿದರ ಅಲ್ಲೋ ಸಾಬಾ..
*ಹೌದರಿ ಸಾಹೇಬ್ರ..
*ಮತ್ತ ಈಗ ನಿ ಎಂ.ಪಿ .ಟಿಕೆಟ್ ನಿಷೆ ಏರಸಿದಿ ಏನೋ ಸಾಬಾ..
*ಹೌದರಿ ಸಾಹೇಬ್ರ..
*ಸಾಬಾ ಕೈಕಾಲ ಮುರದಾವರದರಾದ ಕೈ ಕಾಲ ಜೊಡಸೋದ ಬಿಟ್ಟ ಈ ಹುಚ್ಚ್ ಯಾಕೋ ಸಾಬಾ ಈ ಡಾಕ್ಟರಗ..
*ಸಾಹೇಬ್ರ ದಿನಾ 8ರಿಂದ 10ಲಕ್ಷ ರೂಪಾಯಿ ಇನ್ಕಂ ಐತಿ ಈ ಡಾಕ್ಟರಗ ಪೇಷಂಟ ಗೋಳಿಗೆ ಕಂಡಾಪಟ್ಟೆ ಬಿಲ್ಲ ಮಾಡ್ತಾನ ರೊಕ್ಕಾ ನು ಕಂಡಾಪಟ್ಟೆ ಗಳಿಸಿದಾನ,ನಾ ಅಮಿತ ಶಾರಿಗೇ ಹೇಳಿ ಟಿಕೇಟ್ ಕೊಡಸಿದ್ನಿ ಅಂದರ ನನಗ್ ಖೋಕಾದಾಗ ರೊಕ್ಕಾ ಕೊಡ್ತೆನ್ ಅಂದಾನರಿ ಅದಕ್ಕ ಬಂದೆನ್ ರಿ..
*ಸಾಬಾ ಎಲ್ಲರೂ ಕೂಡಿ ಅವನ ದವಾಖಾನೆ ಮಾರಸೇರಿ ನೋಡೋ ಸಾಬಾ..
*ನಾ ಅಂವ ಅಲ್ಲರಿ ಆ ಮಂದಿ ಬ್ಯಾರೆನ ಐತರಿ..