ಬೆಳಗಾವಿ D.C.C. ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು…
ರಾಜ್ಯದ ಪ್ರತಿಷ್ಟಿತ ಡಿ.ಸಿ.ಸಿ. ಬ್ಯಾಂಕುಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ.
ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು).
ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ (ಶಾಸಕರು), ಅರವಿಂದ ಪಾಟೀಲ (ಮಾಜಿ ಶಾಸಕರು), D.T.ಪಾಟೀಲ, ಶಿವಾನಂದ ಡೋಣಿ ,ಶ್ರೀಕಾಂತ್ ಧವಣ , ಅಪ್ಪಾ ಸಾಹೇಬ ಕುಲಗುಡೆ , ಪಂಚನ ಗೌಡ ದ್ಯಾಮನ ಗೌಡರ , ಅಶೋಕ ಅವ್ವಕ್ಕ ನವ ರ , ರಾಜೇಂದ್ರ ಅಂಕಲಗಿ ,ಲಕ್ಷ್ಮಣ್ ರಾವ್ ಚಿಂಗಳೆ, ನೀಲಕಂಠ ಕಪ್ಪಲ ಗುದ್ದಿ., ಶಂಕರ ಗೌಡಾ ಪಾಟೀಲ, (ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ). ಹೀಗೆ ಹದಿನೇಳು ಜನ ಸದಸ್ಯ ರನ್ನು ಹತ್ತು (ಪಿಕೆ ಪಿ ಎಸ್ ) ಆರು ಇತರೆ ಕ್ಷೆತ್ರ ದಿಂದ,ಚುನಾವಣೆ ಜರುಗಲಿದೆ. ,ಕಳೆದ ಬಾರಿ ಅಧ್ಯಕ್ಷ ಚುನಾವಣೆ ಯಲ್ಲಿ ಹತ್ತಿದ ಬೆಂಕಿ ಇನ್ನೂ ಆರಿಲ್ಲ.
ರಮೇಶ ಕತ್ತಿಯವರನ್ನ ಅಧ್ಯಕ್ಷ ಮಾಡಬೇಕೆಂದು ಕತ್ತಿ ಗುಂಪು ಪಟ್ಟು ಹಿಡಿದಾಗ ಲಕ್ಷ್ಮಣ್ ಸವದಿ ಗುಂಪು ನಿರಾಕರಿಸಿದಾಗ ಅಧ್ಯಕ್ಷ ಪದವಿಗೆ ಚುನಾವಣೆ ಜರುಗಿತ್ತು.
ಜಾರಕಿಹೊಳಿ ಸಾಹುಕಾರ ಆಶೀರ್ವಾದ ದಿಂದ. ಆಯ್ಕೆ ಯಾಗಿದ್ದ ಢವಳೇಶ್ವರ ಡೋಣಿ ಕಪ್ಪಲ್ಗುದ್ದಿ ಅಂಕಲಗಿ , ದ್ಯಾಮಾಗೌಡರ್, ಚಿಂಗಳೇ, ಆರು ಜನ ಒಂದು ಗುಂಪು, ಸವದಿ ಗುಂಪಿಗೆ ಬೆಂಬಲಿಸಲು ಹಾತೊರೆಯುತ್ತಿತ್ತು.
ಸವದಿ ಗುಂಪು ಕತ್ತಿ ಗುಂಪಿನೊಂದಿಗೆ ಸೇರಿ ಅಧ್ಯಕ್ಷ ರಾಗಬೇಕೆಂದು ಹಂಬಲಿಸುತ್ತಿತ್ತು , ಸವದಿಯವ ರ ಗುಂಪು , ಅಧ್ಯಕ್ಷರ ಪಟ್ಟ ತನಗೆ ಬೇಕೆಂದು ಪಟ್ಟು ಹಿಡಿದಾಗ, ಜಾರಕಿಹೋಳಿ ಸಾಹುಕಾರರ ಗುಂಪು , ಕತ್ತಿ ಸಾಹುಕಾರರು ಹೆಗಲ ಮೇಲೆ ಬಂದೂಕು ಇಟ್ಟಿತು, ರಮೇಶ್ ಕತ್ತಿಯವರು ಮಾಮನಿ ಯವರ ಜೊತೆ ಗುಡಿ ಬಂದು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಮತ ದೊಂದಿಗೆ ಡಿಸಿಸಿ ಬ್ಯಾಂಕ ಅಧ್ಯಕ್ಷ ಪಟ್ಟಕ್ಕೆರಿದರು.
ನಂತರ ಕೃಷ್ಣಾ ನದಿಯಲ್ಲಿ ಸಾಕಷ್ಟು ನೀರು ಹರಿಯಿತು ವಿಧಾನ ಸಭಾ ಚುನಾವಣೆ ಯಲ್ಲಿ ಸವದಿಯವರು ಪರಾಭವ ಗೊಂಡರು,ಲೋಕ ಸಭಾ ಚುನಾವಣೆ ಯಲ್ಲಿ ರಮೇಶ್ ಕತ್ತಿ ಯವರಿಗೆ ಟಿಕೆಟ್ ತಪ್ಪಿತು.
ಕತ್ತಿ ಸಾಹುಕಾರರು ಜಾರಕಿಹೋಳಿ ಸಾಹುಕಾರರು ಮೊನ್ನೆ ಬೆಂಗಳೂರಿನ ಕುಮಾರ್ ಕೃಪಾದಲ್ಲಿ, ಸಭೆ ಸೇರಿ ಹಾಲಿ ತಮ್ಮ ಜೊತೆ ಇರುವ ಏಳು ಜನರಿಗೆ ಚುನಾವಣೆಗೆ ತಯಾರಿರುವಂತೆ , ಪರಮಾಣು ನೀಡಿದ್ದಾರೆ ಅಂದಿನ ಸಭೆಗೆ ಅವರ ಗುಂಪಿನಲ್ಲಿದ್ದ ಆನಂದ ಮಾಮನಿಯವರ್ ಅನುಪ ಸ್ಥಿತಿ ಕುತೂಹಲ ಮೂಡಿಸಿದೆ.
ಇತ್ತ ಉಪ ಮುಖ್ಯಮಂತ್ರಿ ಸವದಿಯವರು ತಮ್ಮದೇ ತಂತ್ರ ಗಾರಿಕೆಯಲ್ಲಿ ಮಹಾಂತೇಶ್ ದೊಡ್ಡಗೌಡರ ಜೊತೆ ಹದಿನಾರು ಸ್ಥಾನಕ್ಕೆಅಭ್ಯರ್ಥಿಗಳ ತಲಾಷೆಯಲ್ಲಿದ್ದಾರೆ.
ಉಪ ಮುಖ್ಯಮಂತ್ರಿ ಗಳು ಸಂಸದರು , ಮಾಜಿ ಸಂಸದರು, ಶಾಸಕರು , ಮಾಜಿ ಶಾಸಕರು, ಜಿಲ್ಲೆಯ ಘಟಾನುಘಟಿ ಸಹಕಾರಿಗಳು, ಇರುವ ಡಿಸಿಸಿ ಬ್ಯಾಂಕ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ,ಕುಸ್ತಿಗಾಗಿ ಅಖಾಡ ಸಿದ್ಧಗೊಂಡಿದೆ
ನಿಶಾನಿ ಕುಸ್ತಿಯೋ ?ಮೀಲಾಪಿ ಕೂಸ್ತಿಯೋ?, ಅಗುಷ್ಟ್ 27ರಂದು ಗೊತ್ತಾಗಲಿದೆ,
ನಿಮ್ಮ
ಬಾಪುಗೌಡ ಪಾಟೀಲ್