ರಾಜ್ಯ ಸರ್ಕಾರ ನಿರ್ಧರಿಸಿದ ಪ್ರಕಾರ ಎಲ್ಲ ಸಹಕಾರಿ ಸಂಘಗಳ ಚುನಾವಣೆ ಯನ್ನಾ ರಾಜ್ಯ ಸರ್ಕಾರ ಮುಂದೂಡಿದೆ ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ ಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ ಚುನಾವಣೆ ಕೂಡ ಸರ್ಕಾರ ಮುಂದೂಡಿದೆ
ಜನರ ಮನದಲ್ಲಿ ಇದ್ದ ಕುತೂಹಲಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು ಚುನಾವಣೆ ವಿಚಾರ ಠುಸ್ ಪಟಾಕಿ ಯಂತಾಗಿದೆ..
ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಗಷ್ಟ ತಿಂಗಳಿನಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಬೇಕಿತ್ತು. ಬ್ಯಾಂಕ್ ನ ನಿರ್ದೇಶಕರ ಗದ್ದುಗೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಘಟಾನುಘಟಿಗಳು ತೀವ್ರ ಪೈಪೋಟಿ ನಡೆಸಿದ್ದರು. ಆದ್ರೆ ಜಿಲ್ಲೆಯ ಅಥಣಿ, ಗೋಕಾಕ ತಾಲೂಕು ಸೇರಿ ಹಲವೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತಲಿರುವುದರಿಂದ ಚುನಾವಣಾ ಆಕಾಂಕ್ಷಿಗಳಿಗೆ ಸರ್ಕಾರ ಶಾಕ್ ನೀಡಿದೆ. ಚುನಾವಣೆಯನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ.