ಕಾಥೆ ವಾಡಿ ಕುದರೆಗಳು ಬೇಕಾಗಿವೆ
ಮೊನ್ನೆ 8-10ಜನ ಸ್ನೇಹಿತರು ಮತ್ತು ವಿಚಾರ ವಾದಿಗಳು ನನ್ನ ಹೊಸ ಆಫೀಸ್ ನಲ್ಲಿ ಕುಳಿತಿದ್ದೆವು,ಕೆಲವು ಜನ ಪತ್ರ ಕರ್ತರು ಅದರಲ್ಲಿದ್ದರು.
ನನ್ನ ಸ್ನೇಹಿತನೊಬ್ಬ ಬಾಪು ಗೌಡಾ ನಿನ್ನ ಕಾರಿಗೆನು ಮುಗಳ ಖೋಡ ಮುತ್ಯಾರ ಕೊಟ್ಟ ತೀರ್ಥದ ನೀರ ನಿನ್ನ ಭಾಂವ್ಯಾಗ ಸಿಂಪಡಿಸ್ಸಿಯೇನ ಅಂತಾ ಕೇಳಿದಾ, ನನಗೆ ಆತನ ವ್ಯಂಗ್ಯದ ಮಾತುಗಳು ಬೇಗ ಅರ್ಥ ವಾಗಲಿಲ್ಲ ,
ಕೂಡಲೇ ನನ್ನ ಇನ್ನೊ0ದು ಸೆನ್ಸ್ ಆತನ ಮಾತಿನ ಧಾಟಿಯನ್ನು ಗುರುತಿಸಿತ್ತು, ಆತ ನೇರವಾಗಿ ಪೆಟ್ರೊಲ್ ಡೀಸೆಲ್ ಬೆಲೆ ಬಗ್ಗೆ ಮಾತನಾಡುತ್ತಾ ನೆಂದು ಗ್ರಹಿಸಿ ನಿಮ್ಮ ಮೋದಿ ಸಾಹೇಬರಿಗೆ ನೆನಪಸ್ಲಾ ಅಂದೆ, ನಾ ನೆನಪಸಾಕ ಆಗಲಾರ್ದಕ್ಕ ನಿನಗ ಹೇಳಾತೇನು ಅಂದ.
ಅಂದು ಮೋದಿಜಿ ಅಧಿಕಾರ ಹಿಡಿಯುವ ದಕ್ಕಾಗಿ ಮಾತನಾಡಿದ ಧ್ವನಿ ಸುರಳಿಯನ್ನೂ ಆಲಿಸಿದೆ
ಈ ದೇಶದ ಬಡ ಕುಟುಂಬಗಳ ಮನೆಗಳಿಗೆ ಹದಿನೈದು ಲಕ್ಷ ಹಣ ಹಾಕುತ್ತೇನೆ ಎನ್ನುವ , ಹಾಗೂ ಶ್ರೀಮಂತರ ಹತ್ತಿರ ಇರುವ ಕಾಳಧನವನ್ನು ವಶ ಪಡಿಸಿ ಕೊಳ್ಳುತ್ತೇನೆನ್ನುವ , ಬಡ್ ಜನರಿಗಾಗಿ ದವಸ ಧಾನ್ಯಗಳನ್ನು ನೀಡುವ, ದೇಶದ ನಿರುದ್ಯೋಗಿ ಜನರಿಗಾಗಿ ಉದ್ಯೋಗ ನೀಡುವ, ಹಾಗೂ ಈ ದೇಶದ ಜನರನ್ನು ಬಡತನದ ರೇಖೆಯಿಂದ ಮೇಲಕ್ಕೆತ್ತುವ , ಬೇನಾಮಿ ಆಸ್ತಿ ಪತ್ತೆ ಹಚ್ಚಿ ಬಡ್ ಜನರಿಗೆ ನೀಡುವ ನೂರೆಂಟು ಆಶ್ವಾಸನೆ ಗಳು ಹಾಗೇ ಉಳಿದಿದೆನ್ನುವದು ಇತ್ತಿಚೀನ ದಿನ ಮಾನದಲ್ಲಿ ಈ ದೇಶದ ಜನ ಸಾಮಾನ್ಯರ ತಲೆಯಲ್ಲಿ ಉಳಿದಿದೆ ಎನುವುದು ಮೋದಿಯವರಿಗೇ ಈಗ ಗೊತ್ತಾಗಿದೆ.
ಅಂತಾರಾಷ್ಟ್ರೀಯ ತೈಲು ಮಾರು ಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರು ಭಾರತ ದಲ್ಲಿ ತೈಲದ ಬೆಲೆ ಗಗನಕ್ಕೇರಿದೆ,.
ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಕುತ್ತಿರುವ ಸುಂಕ್ ಗಳಿಂದ, ಬಹುತೇಕ ರಾಜ್ಯ ಗಳು ಬಿಜೆಪಿ ಆಡಳಿತ ದಲ್ಲಿದ್ದರು 35ರೂಪಾಯಿಗೆ ಸಿಗಬೇಕಾದ ಪೆಟ್ರೊಲ್ ಇಂದು 80ರೂಪಾಯಿ ಸನೆ ಬಂದು ನಿಂತಿದೆ ,ಪೆಟ್ರೊಲ್ ಗಾಡಿ ಓಡಿಸುತ್ತಿರುವ ಮಧ್ಯಮ ವರ್ಗದ ಜನ ಕಾ ಥೆ ವಾಡಿ ಕುದುರೆಗಳ ಖರೀದಿಗಾಗಿ ಮೂಗಿ ಬೀಳುವ ದಿನ ದೂರವಿಲ್ಲ. ,,”ಕೂಡಲೇ ಮೋದಿಯವರೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಬಕಾರಿ ಸುಂಕ ಇಳಿಸಲು ಕಠಿಣ ನಿರ್ಧಾರಕೈಕೊಳ್ಳಬೇಕು .
ತಾವು ಚುನಾವಣೆ ಯಲ್ಲಿ ನೀಡಿದ ಭರವಸೆ ಗಳನ್ನು ಹಂತ ಹಂತವಾಗಿ ಇಡೆರಿಸ ಬೇಕೆಂದು “ಅಚ್ಚೆ ದಿನಕ್ಕಾಗಿ” ಕಾಯುತ್ತಿರುವ ಭಾರತೀಯರು..
ನಿಮ್ಮ
ಬಾಪು ಗೌಡ ಪಾಟೀಲ