ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..!
ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ, ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ ಕೊನೆ ದಿನಗಳ ಬಗ್ಗೆ ಕನಿಕರ ಪಟ್ಟಿದ್ದೆ.
ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು.
ದಕ್ಷಿಣ ಭಾರತದ ಯಾವುದೇ ರಾಜ್ಯ ಗಳ ರಾಜಕೀಯ ಸಲಹೆ ಗಾಂಧಿ ಕುಟುಂಬ ಕೇಳುವ ದಿದ್ದರೆ ಅದು ಶಂಕರಾನಂದ ರನ್ನು ಮಾತ್ರ ಆಕುಟುಂಬ ಕೆಳುತಿತ್ತು.
ಗಾಂಧಿ ಕುಟುಂಬ ದೊಂದಿಗೆ ನಿಖಟ್ ಸಂಬಂಧ್ ಹೊಂದಿದ್ದ ಬಿ. ಶಂಕರಾನಂದ ರು. ಮೂವತಕ್ಕು ಹೆಚ್ಚು ವರ್ಷ ಅಧಿಕಾರ ದಲ್ಲಿದ್ದರು ರಾಜ್ಯದಲ್ಲಿ ಒಂದು ಹುಲ್ಲು ಕಡ್ಡಿ ಅಲು ಗಾಡ್ ಬೇಕಾದರೆ ಶಂಕರಾನಂದ ರ ಇಶಾರೆ ಇಲ್ಲದೆ ಅಲ್ಲಾಡುತಿರಲಿಲ್ಲ.
ರಾಜ್ಯದಲ್ಲಿ ಇಂದು ಅನೇಕ ಜನ ರಾಜಕೀಯ ನಾಯಕರನ್ನು ಬೆಳೆಸಿದವರೆ ಶಂಕರಾನಂದರು, ಶಂಕರಾನಂದರು.ಬೆಳಗಾವಿಯ ಕ್ಲಬ್ ರಸ್ತೆ ಯ ಮನೆಯಲ್ಲಿದ್ದಾರೆಂದರೆ ಆ ರಸ್ತೆಯಲ್ಲಿಯಾವ ನಾಯಕರು ಸುಳಿದಾಡುತ್ತಿರಲಿಲ್ಲ.
ಪ್ರಭಾಕರ ಕೋರೆ ,ಪ್ರಕಾಶ್ ಹುಕ್ಕೇರಿ , ವೀರಕುಮಾರ್ ಪಾಟೀಲ, ಕಾಕಾ ಸಾಹೇಬ ಪಾಟೀಲ, ರಮೇಶ್ ಜಾರಕಿಹೊಳಿ, ಎಸ್. ಬಿ . ಸಿ ದ್ನಾಳ,ಇವರ ಗರಡಿಯಲ್ಲಿ ಪಳಗಿದವರು, ಕರ್ನಾಟಕದ ಕಾಂಗ್ರೆಸ ಮುಖ್ಯ ಮಂತ್ರಿ ಯಾರಾಗ ಬೇಕೆಂದರೂ ಶಂಕರಾನಂದ ರು ಗ್ರೀನ್ ಸಿಗ್ನಲ್ ಕೊಟ್ಟಾಗ ಮಾತ್ರ ಮುಖ್ಯ ಮಂತ್ರಿ ಯಾಗುತ್ತಿದ್ದರು.
ಎಂಟು ಬಾರಿ ಲೋಕ ಸಭೆ ಪ್ರವೇಶಿಸಿದ ಶಂಕರಾನಂದರು ಕೊನೆಯ ಚುನಾವಣೆಯಲ್ಲಿ ರತ್ನಮಾಲಾ ಸವಣೂರು ಎಂಬ ಹೆಣ್ಣು ಮಗಳ ವಿರುದ್ಧ ಸೋತು ಹೋದರು, ಇಬ್ಬರು ಗಂಡು ಮಕ್ಕಳನ್ನು ರಾಜಕೀಯಕ್ಕೆ ತರಬೇಕೆಂಬ ಹರ ಸಾಹಸ ಪಟ್ಟರು ರಾಜಕೀಯದಲ್ಲಿ ಶಂಕರಾನಂದರು ಯಾರನ್ನು ಮುಂದು ತಂದಿದ್ದರೋ ಅವರೇ ಶಂಕರಾನಂದರ ಮಕ್ಕಳಿಗೆ ಮುಳುವಾದರು.
ಹತ್ತು ತಲೆ ಮಾರಕ್ಕಾಗುವ ಆಸ್ತಿ ಇದ್ದರೂ ಕೊನೆ ಗಾಲದಲ್ಲಿ K.L.E. ಆಸ್ಪತ್ರೆಯ, ಶೂಶ್ರಕಿ ಕೈಯಿಂದ ಆರೈಕೆ ಪಡೆಯುವ ಪ್ರಸಂಗ ಬಂದಿತ್ತು.
2009 ರಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀರ ಕುಮಾರ್ ಪಾಟೀಲರ ಜೊತೆ K.L.E. ಆಸ್ಪತ್ರೆಗೆ ಹೋಗಿದ್ದೆ ವೀರ ಕುಮಾರ್ ರನ್ನು ನೋಡಿ ಶಂಕರಾನಂದರ ಕಣ್ಣಲ್ಲಿ ಕಣ್ಣೀರು ಪಟ್ ಪಟ್ ನೆ ಉದುರುತ್ತಿದ್ದವು , ವೀರ ಕುಮಾರರ ಸಾಕಷ್ಟು ಧೈರ್ಯ ಹೇಳುತ್ತಿದ್ದರು, ವೀರ ಕುಮಾರ ನನಗೊಂದು ಉಪ್ಪಿಟ್ಟು ತರಸು ಅಂತ ಶಂಕರಾನಂದ ರು ವೀರ ಕುಮಾರರಿಗೆ ಹೇಳಿದರು,ವೀರ ಕುಮಾರರ ಕಣ್ಣು ತೇವಗೊಂಡಿದ್ದವು..