ಶಿವಪ್ಪಾ ಕಾಯೋ ತಂದೆ …..
ಮೂರು ಲೋಕ ಸ್ವಾಮಿ ದೇವಾ.
ಯಾಕೋ ದೇಶದ ಸ್ಥಿತಿ ಮುಂದಿನ ದಿನ ಮಾನದಲ್ಲಿ ಸರಿ ಹೋಗುವಂತೆ ಕಾಣುವದಿಲ್ಲ,ಕರೋನಾ ಈ ದೇಶದ ಜನರ ರಕ್ತ ಹೀರುತ್ತದೆ
ಇಂದು ಭಾರತ ಜಗತ್ತಿನ ಮೂರನೇ ಸ್ಥಾನ ದಲ್ಲಿ ಕರೋ ನಾ ಪೀಡಿತರ ಸಂಖ್ಯೆ ಹೊಂದಿದೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತಿ ದಿನವು ಕರೋನಾ ರೋಗಿಗಳು ದ್ವಿಗುಣ ಗೊಳ್ಳುತ್ತಾ ಹೋಗುತ್ತಿದ್ದಾರೆ
ಒಂದು ಕಡೆ W.H.O. ಕರೋನಾ ರೋಗಕ್ಕೆ ಸಧ್ಯದಲ್ಲಿ ಲಸಿಕೆ ಸಿಗುವ ಸಾಧ್ಯತೆ ಕಡಿಮೆ ಅಂತಾ ಹೇಳುತ್ತದೆ W.H.O. ದಲ್ಲಿರುವ ಸದಸ್ಯರ ಯಾದಿ ನೋಡಿದರೆ ಇವರೆಲ್ಲರೂ” ಮೆಡಿಕಲ್ ಮಾಫಿಯಾ” ದಂತೆ ಕಂಡು ಬರುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ನವರು ಅಧಿಕಾರ ಗ್ರಹಣ ಮಾಡಿದ ಸಮಯ ಸರಿ ಇದ್ದಂತೆ ಕಾಣುವದಿಲ್ಲ ,ಅಧಿಕಾರ ಸ್ವೀಕರಿಸಿದ ತಕ್ಷಣವೇ ಪ್ರವಾಹ ಬಂದು ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಪ್ರಕೃತಿ ಅಟ್ಟಹಾಸ ಮೆರೆಯಿತು ,ಅನೇಕ ಜನ ಮನೆ ಮಠ ದನ್ ಕರುಗಳನ್ನು ಕಳೆದು ಕೊಂಡು ಅನಾಥರದರು.
ಅದೆಲ್ಲವೂ ಸರಿ ಹೋಯಿತು ಅನ್ನುವುದರಲ್ಲಿ ಕರೋನಾ ವಕ್ಕರಿಸಿತು, ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡು ವಂತಾಗಿದೆ , “ಲಾಕ್ ಡೌನ್” ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ.
ಇದೇ ರೀತಿ ಕರೋನಾ ಅಟ್ಟಹಾಸ ಮೆರೆದರೆ ಮುಂದಿನ ತಿಂಗಳು ಸರ್ಕಾರಿ ನೌಕರರು ಪಗಾರಿಗೆ ಪರದಾಡ ಬೇಕಾಗುತ್ತದೆ.
ಖಾಸಗಿ ಆಸ್ಪತ್ರೆಗಳು ಸರ್ಕಾರದ ಯಾವ ಆದೇಶಕ್ಕೂ ಬೆಲೆ ಕೊಡುತ್ತಿಲ್ಲ ಖಜಾನೆ ಯಲ್ಲಿ ಹಣವು ಇಲ್ಲಾ ಕರೋನಾ ನಿಯಂತ್ರಣ ದಲ್ಲು ಇಲ್ಲಾ ಮುಂದೆ ನಮ್ಮ ರಾಜ್ಯದ ಜನರ ಪರಿಸ್ಥಿತಿ.
ಶಿವಪ್ಪಾ ಕಾಯೋ ತಂದೆ
ಮೂರು ಲೋಕ ಸ್ವಾಮಿ ದೇವಾ..
ನಿಮ್ಮ
ಬಾಪು ಗೌಡ ಪಾಟೀಲ್