ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ ಜಳಕಾ ಮಾಡಿ ಒಳಗ ಬನ್ನಿ..
ನನ್ನ ತಂದೆ ದಿ: ಕುಂದರನಾಡ ಪಾಟೀಲರು ನನಗೆ 1983-84 ರಲ್ಲಿ ನನಗೆ ಲೋಹಿಯಾ , ಮಾರ್ಕ್ಸ್ , ಪೇರಿಯಾರ , ಲಂಕೇಶ್ ಪತ್ರಿಕೆ, ಚಂಪಾರ ಸಂಕ್ರ ಮಣ , ಪಾಟೀಲ ಪುಟ್ಟಪ್ಪನವರ ಪ್ರಪಂಚ, ಬಸವ ರಾಜ ಕಟ್ಟಿಮನಿ ಯವರ ಕಾದಂಬರಿ, ಪತ್ರಿಕೆಗಳನ್ನು, ಪುಸ್ತಕಗಳನ್ನು,ಓದಲು ಹಚ್ಚುತ್ತಿದ್ದರು.
ನಾಸ್ತಿಕರಾಗಿದ್ಧ ಅವರು ಒಂದು ದಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ರ ಪುಸ್ತಕವೊಂದನ್ನು ಓದಲು ಕೊಟ್ಟರು,ಅದರಲ್ಲಿ “ಗಣಪತಿ” ಹುಟ್ಟಿನ ಬಗ್ಗೆ ಇತ್ತು, ನನ್ನ ತಂದೆ ಕೂಡ ಮೌಢ್ಯ ವಿರೋಧಿ ಯಾಗಿದ್ದರು.
ಒಮ್ಮೆ ನಮ್ಮ ತಂದೆ ಯವರ ಜೊತೆ ಐದಾರು ಜನ ವೈಚಾರಿಕ ವಿಚಾರ ವುಳ್ಳವರು ಪುಟ ವರ್ತಿಗೆ ಹೋಗಿದ್ದರಂತೆ ಆದಿನ ದಲ್ಲಿ ಪುಟ ವರ್ತಿ ಸಾಯಿಬಾಬಾರು ಬೇಡಿದನ್ನೆಲ್ಲ ಕೊಡುವ ಕಾಮಧೇನು ಆಗಿದ್ದರಂತೆ.
ಎರಡು ಮೂರು ದಿನ ಕಾದರೂ ಸಾಯಿಬಾಬಾ ದರ್ಶನವೇ ಆಗಲಿಲ್ಲ ವಂತೆ, ನಾಲ್ಕನೇ ದಿನ ಸಾಯಿಬಾಬಾ ಭೇಟಿ ಯಾದನಂತೆ,ಇವರು ಮೊದಲೇ ವಿಚಾರ ಮಾಡಿದಂತೆ “ದೇವಾ ನಮಗೆ ನಿಮ್ಮ ಕೈಯಿಂದ ಶೂನ್ಯ ದಲ್ಲಿ ಹುಟ್ಟಿಸಿ ಕುಂಬಳ ಕಾಯಿ ಕೊಡರೆಂದು ಕೇಳಿದರಂತೆ,” ಇವರನ್ನು ದುರಗುಟ್ಟಿ ನೋಡಿ ಸೆಕ್ಯೂರಿಟಿ ಕೈಯಿಂದ ಹೊರ ದಬ್ಬಿಸಿದನಂತೆ.
ಸತೀಶ್ ಜಾರಕಿಹೊಳಿ ಯವರ ಜೊತೆ ನಾನಿದ್ದಾಗ ಅವರ ಸ್ಮಶಾನ ಕಾರ್ಯಕ್ರಮ ದಲ್ಲಿ ನಾನು ಭಾಗಿಯಾಗುತ್ತಿದ್ದೆ, ಅನೇಕ ವೈಚಾರಿಕ ಚಿಂತಕ ರಿಂದ, ಮಠಾಧೀಶರ, ಮಾತಿಗೆ ಪ್ರೇರಣೆ ಗೊಳಗಾಗಿದ್ದೆ, ಬೆಳಿಗ್ಗೆ ನಾ ಷ್ಟಾ ದಿಂದ ಹಿ ಡದು ಸತೀಶ್ ಜಾರಕಿಹೊಳಿ ಸ್ಮಶಾನ ದಲ್ಲಿ ಮಲಗುವ ವರೆಗೂ ಅವರ ಜೊತೆ ಗಿರುತ್ತಿದ್ದೆ.
ನಾಲ್ಕು ವರ್ಷಗಳ ಹಿಂದೆ ಅದೇ ನನ್ನ ಕೊನೆ ಸ್ಮಶಾನ ಕಾರ್ಯಕ್ರಮ ವಾಗಿರಬಹುದು, ಆ ಕಾರ್ಯಕ್ರಮದ ಪತ್ರಿಕಾ ಗೋಷ್ಠಿಯಲ್ಲಿ ಸಾಹುಕಾರರ ಪಕ್ಕದಲ್ಲೇ ನಾನಿದ್ದೆ, ಟಿ ವೀ ಯಲ್ಲಿ ಪ್ರಸಾರ ವಾಗುತ್ತಿದ್ದ ಆ ಪತ್ರಿಕಾ ಗೋಷ್ಠಿಯನ್ನು ನನ್ನ ಹೆಂಡತಿ ಟಿ ವೀ ಯಲ್ಲಿ ನೋಡಿದ್ದಳು,
ನಾನು ಆ ರಾತ್ರಿ ಸ್ಮಶಾನ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋದೆ, ಎಲ್ಲಿ ಹೋಗಿರಿ ಅಂತಾ ಬಾಗಿಲಲ್ಲೇ ತಡೆದು ಹೆಂಡತಿ ಕೇಳಿದಳು, ನಾನು ಏನೇನೋ ಸಬೂಬು ಹೇಳತೊಡಗಿದೆ, ನೀವು ಅಲ್ಲೇ ನಿಲ್ಲರಿ ಒಳಗ ಬರ ಬ್ಯಾ ಡರಿ ಅಂದಳು ಒಳಗೆ ಹೋದವಳೆ ಒಂದು ಬಕೆಟ್ ತಣ್ಣೀರು ತಂದು ಜಳ ಕಾ ಮಾಡಿ ಒಳಗ ಬನ್ನಿಅಂದಳು.ನೀವು ಸ್ಮಶಾನಕ್ಕೆ ಹೋಗಿದ್ದು ನನಗ ಗೊತ್ತೈ ತಿ ನಿಮ್ಮನ ಟಿವ್ಯಾಗ ನೋಡೆನಿ ಅಂದಳು.
ನಡು ರಾತ್ರಿಯಲ್ಲಿ ತಣ್ಣೀರಲ್ಲಿ ಜಳಕ ಮಾಡಿ ಕೊಂಡು ಗೂಡು ಸೇರಿದೆ.
ಸತೀಶ್ ಜಾರಕಿಹೊಳಿ ಯವರ ಮೌಢ್ಯ ವಿರೋಧಿ ಕಾರ್ಯಕ್ರಮ ರಾಜ್ಯದ ತುಂಬೆಲ್ಲಾ ಮಾಡುತ್ತಿದ್ದಾರೆ, ಪುರೋಹಿತ ಶಾಹಿಗಳ ಬಂಡವಾಳವನ್ನು ಬಿಚ್ಚಿಡುತ್ತಿದ್ದಾರೆ, ಈ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ, ಸಮಾಜದ ಮೌಢ್ಯವನ್ನ ತೊಲಗಿಸಲು ಹಗಲಿರುಳು ಶ್ರಮಿಸುತ್ತದ್ದಾರೆ,ಇಂದು ದಿನಾಂಕ ಜುಲೈ 13ರಂದು ತಮ್ಮ ಹೊಸ ವಾಹನವನ್ನು ಸ್ಮಶಾನದಲ್ಲಿಯೇ ಪೂಜಿಸುತ್ತಿದ್ದಾರೆ, ಅವರ ವಿರುದ್ಧ ಇರುವ ದೃಷ್ಟ ಶಕ್ತಿ ಗಳೆಲ್ಲಾ ಸದಾಶಿವ ನಗರ ಸ್ಮಶಾನ ದಲ್ಲಿಯೇ ಇರಲೆಂದು ಹಾರೈಸುತ್ತೇನೆ.
ನಿಮ್ಮ
ಬಾಪು ಗೌಡ ಪಾಟೀಲ್