Home / ಜಿಲ್ಲೆ / ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು………

ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು………

Spread the love

            ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು……..

 

        ಕರೋನಾ ಬಗ್ಗೆ ಇನ್ನೂ ಬರೆಯ ಬಾರದೆಂದು ನಿರ್ಧರಿಸಿದ್ದೆ, ಆದರೆ ಯಾಕೋ ಈ ಜನ ಈಗ ನಾಲ್ಕಾರು ದಿನ್ ದಿಂದ ಜನ ಜಾಗೃತ ರಾಗುತ್ತಿದ್ದರೆ, ನಿನ್ನೆ ರಾಷ್ಟ್ರೀಯ ದಿನ ಪತ್ರಿಕೆಯೊಂದು ತನ್ನ ರಾಗ ಬದಲಿಸಿದೆ ,ಪ್ರತಿದಿನ  ಸಾಯುತ್ತಿರುವವರ ಸಂಖ್ಯೆಯಲ್ಲಿ ಪ್ರತಿಶತ ಇಪ್ಪತೈದು ರಷ್ಟು ಮಾತ್ರ  ಕರೋನಾದಿಂದ  ಸಾಯುತ್ತಿದ್ದರೆಂದು
ವರದಿ ಮಾಡಿದೆ

 

       ನನ್ನ ವರದಿ  ಕರೋನಾ  ರೋಗಕ್ಕೆ ಮನೋ ಧೈರ್ಯ , ಗುಳಿಗೆ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತಲಿದೆ, ಸೋಶಿಯಲ್ ಮೀಡಿಯಾ ದಲ್ಲಿ ರೋಗ ಅಷ್ಟೇನೂ ಭಯಾನಕ ವಲ್ಲ ವೆಂದು ಅನೇಕ ಜನ ಬುದ್ಧಿವಂತ ಡಾಕ್ಟರ ಗಳು ಹೇಳಲು ಶುರು ಮಾಡಿದ್ದಾರೆ.

Power of Humanity, Power of Education

        ಕ ರೋನಾದಿಂದ ಯಾವುದೇ ಆಸ್ಪತ್ರೆ ಗಳಿಗೆ ಹೋಗದೆ ಮನೆಯಲ್ಲಿಯೇ ಗುಣಮುಖ ರಾದವರು ಬಹಿರಂಗ ವಾಗಿ ಜನರು ಹೆದರ ದಂತೆ ಧೈರ್ಯ ತುಂಬುತ್ತಿದ್ದಾರೆ,ಇದೊಂದು ಒಳ್ಳೆಯ ಬೆಳವಣಿಗೆ ,ಇನ್ನೊ0ದು ಕಡೆ ಈ ರೋಗವನ್ನು ಭಯಾನಕ ಗೊಳಿಸಿ ಈ ಜಗತನ್ನು ಲೂಟಿ ಮಾಡುವ ತವಕ ದಲ್ಲಿದ್ದ “ಮೆಡಿಕಲ್ ಮಾಫಿಯಾ” ರಿವರ್ಸ್ ಆಪರೇಷನ್ ದಿಂದ  ಭಯಗೊಂಡಿದೆ,

         ಮುಂಬೈ ನ ಧಾರಾವಿ ದಟ್ಟ ದರಿದ್ರ ಪರಿಸರ ದಲ್ಲಿ , ಅಲ್ಲಿಯ ಜನ ಮನೋಧೈರ್ಯ ದಿಂದ ರೋಗವನ್ನುಕಂಟ್ರೋಲ್ ತಂದಿದ್ದು ಕೆಲವರಿಗೆ ಸಹಿಸಲು ಅಸಾಧ್ಯ ,ವಾಗಿದೆ, ಕೇರಳ ರಾಜ್ಯವು ನಮಗೆ ಮಾದರಿ ಯಾಗಿದೇ

 

          ನೂರು ವರ್ಷದ ಹಿಂದೆ ಒಕ್ಕರಿಸಿದ “ಪ್ಲೇಗ್ ” ಅಂದಿನ  ದಿನಮಾನದಲ್ಲಿ ದೇಶವನ್ನು ನಡುಗಿಸಿತ್ತು,
ಅಂದು ನಮ್ಮ ಮೆಡಿಕಲ್ ಸಾಯನ್ಸ್ ಅಷ್ಟು ಮುಂದುವರಿದಿರಲಿಲ್ಲ
ಇಂದು ದೇಶದಲ್ಲಿ ಲಕ್ಷಾಂತರ ಜನ ವೈದ್ಯರಿದ್ದಾರೆ , ಪ್ರತಿ ಹಳ್ಳಿ ಗಳಲ್ಲೂ ಕೆಮ್ಮು ನೆಗಡಿ, ಜ್ವರಕ್ಕೆ, ಯಾವ್ ಔಷಧಿ ಗುಳಿಗೆ ತೆಗೆದು ಕೊಳ್ಳ ಬೇಕೆನ್ನುವಷ್ಟು ಜನ ಬುದ್ದಿ ವಂತ ರಾಗಿದ್ದಾರೆ,

         ಇನ್ನು ಸ್ವಲ್ಪೇ ದಿನದಲ್ಲಿ ಕ ರೋ ನಾ ನಿಯಂತ್ರಣಕ್ಕೆ ಬರುತ್ತದೆ, ಹಿರಿಯರು ಹೇಳಿದಂತೆ   ” ಮೇಲೇರಿದವ  ಕೆಳಗಿಳಿಯಲೆ ಬೇಕಂತೆ”. ಹಾಗೆ ಈ ರೋಗ ತನ್ನ ಪರಾಕಾಷ್ಠೆ ತಲುಪಿದೆ, ಇನ್ನು ಸ್ವಲ್ಪ ದಿನದಲ್ಲಿ ತನ್ನ ಶಕ್ತಿ ಕಳೆದು ಕೊಳ್ಳುತ್ತದೆ.

 

         ಕರ್ನಾಟಕ ದ ಆರೋಗ್ಯ ಸಚಿವರು ದೇವರ ಮೊರೆ ಹೋಗಿದ್ದಾರೆ, ಖುದ್ದು ಯಡಿಯೂರಪ್ಪ ನವರೂ ,ಸಿದ್ದ ರಾಮಯ್ಯ ನವರ ಕರೋನಾ  ರೋಗಕ್ಕೆ ಲೆಕ್ಕ ಕೂಡ ದಷ್ಟು ನಿಸ್ಸಾಯಕ ರಾಗಿದ್ದಾರೆ,

B Sriramulu, Karnataka Health Minister: Only God Can Save Us From ...

        ಮೊನ್ನೆ ಬೆಂಗಳೂರಿನಲ್ಲಿ ಹಾಸಿಗೆ, ದಿಂಬು, ಬೆಡ್ ಶೀಟ್, ಕಾಟೂ, ಬಾಡಿಗೆಗೆ ಎರಡೂ ನೂರು ಕೋಟಿ ಖರ್ಚೂ ಹಾಕಬೇಕೆಂದುಬಾಡಿಗೆ ಪಡೆದು ಕೊಂಡ ಅಧಿಕಾರಿ ವರ್ಗ , ಯಡಿಯೂರಪ್ಪ ನವರು, ಅದನ್ನು ನಾವೇ ಕೊಂಡು ಕೊಂಡರೆ ಎಷ್ಟು ಖರ್ಚು ಆಗುತ್ತೆ ಎಂದು ಕೇಳಿದಾಗ ಅಧಿಕಾರಿ ವರ್ಗ ತಡ ಬಡಾಯಿಸಿದೆ.
Without PPE, PHE daily wagers, casual labourers are out to provide ...

       ಪೀ.ಪೀ.ಈ ಕಿಟ್ಟು, ಗ್ಲೌಜು, ಸ್ಯಾನಿಟರಿ ಬಾಟಲ್ ಗಳಿಗೆ, ಒಂದಕ್ಕೆ ನಾಲ್ಕು ಪಟ್ಟು ಖರ್ಚು ಹಾಕಿ, ಸತ್ತ ಹೆಣಗಳ ಮೇಲೆ ದುಡ್ಡು ತಿನ್ನು ತ್ತಿರುವ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಧಿಕ್ಕಾರವಿರಲಿ.

 

ನಿಮ್ಮ 

ಬಾಪು ಗೌಡ ಪಾಟೀಲ

  

 

 


Spread the love

About Admin Bapu

Check Also

ಟೈಮ್ ಬಂದ ಹಾಂಗ ಹೋಗಬೇಕು….

Spread the loveಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು …

Leave a Reply

Your email address will not be published. Required fields are marked *