ಇಸ್ರೇಲ್ ಪ್ರವಾಸ ಹೋದದ್ದು…
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರದ ವತಿಯಿಂದ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ದೇಶಕ್ಕೆ ಕರ್ನಾಟಕದ ರೈತರ ಪ್ರತಿನಿಧಿಯಾಗಿ ಎಂಟು ದಿನಗಳ ಇಸ್ರೇಲ್ ಪ್ರವಾಸ ಕೈ ಗೊಂಡಿದ್ದೆ, 50ಜನರ ಟೀಂ ನಲ್ಲಿ ನಾನು ಒಬ್ಬ ನಾಗಿದ್ದೆ ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ಮರಳಿ ಬರುವ ವರೆಗೂ ಸರ್ಕಾರವೇ ನಮ್ಮ ಖರ್ಚು ವೆಚ್ಚ ಗಳನ್ನು ಹಿಡಿದಿತ್ತು.
ಮುಂಬೈ ನಿಂದ ಎಂಟು ತಾಸುಗಳ ದೀರ್ಘ ಪ್ರಯಾಣ ಇಸ್ರೇಲ್ ನ ಬೆನ್ ಗೊರಿಯನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾವು ಇಳಿದಾಗ ನಮ್ಮ ಸ್ವಾಗತಕ್ಕೆ ಕೆಲವು ಇಸ್ರೇಲಿನ ರೈತರು ಹಾಜರಿದ್ದರು.
ಪ್ರತಿ ದಿನವೂ ಸ್ಟಾರ್ ಹೋಟೆಲ್ ಸೌಲಭ್ಯ ,ಭಾರತೀಯ ತಿಂಡಿ, ತಿನಿಸುಗಳ, ಹೋಟೆಲಿಗೆ ಆದ್ಯತೆ ನೀಡಿ ಲಾಗಿತ್ತು , ಪ್ರತಿ ದಿನವೂ ಇಸ್ರೇಲಿನ ಕೃಷಿ ವಿಶ್ವ ವಿದ್ಯಾಲಯದ ಅನುಭವಿ ಮಾರ್ಗ ದರ್ಶಕರು ನಮ್ಮ ಜೊತೆ ಗಿರುತ್ತಿದ್ದರು
ಅಲ್ಲಿಯ ಎಮ್ಮೆಗಳ ಡೈರಿ , ಮಾವಿನ ತಳಿಗಳ ತೋಟ, ಕಾಯಿಪಲ್ಲೆ ಗಳ ತೋಟ, ಅಲ್ಲಿಯ ಹನಿ ನೀರಾವರಿ ಪದ್ಧತಿ, ಅಲ್ಲಿಯ ಶಿಸ್ತು ಬದ್ಧ ಜೀವನ, ಎಂಟು ದಿನದಲ್ಲಿ ಬಹಳಷ್ಟು ಕಲೆತು ಕೊಂಡಿದ್ದೇ ವು
ಒಂದು ದಿನ ಮಾವು ಬೆಳೆ ತೋಟಕ್ಕೆ ಹೋದಾಗ ಎಂಟು ಸಾಲಿನ ಫೂಟಿನಲ್ಲಿ ಮಾವಿನ ಗಿಡ ಗಳನ್ನ ಹಚ್ಚಿದ್ದರು,
ನಾನು ನನ್ನ ತೋಟದಲ್ಲಿ 40 ಫೂಟಿನ ಸಾಲಿಗೆ ಮಾವು ನೆಟ್ಟಿದ್ದೆ, ಅಲ್ಲಿಯ ಕೃಷಿ ಅಧಿಕಾರಿಗಳನ್ನು ನಾನು ಇಷ್ಟು ಚಿಕ್ಕ ಸಾಲಿನಲ್ಲಿ ನೀವು ಮಾವು ನೆಟ್ರೆ ಪಸಲು ಕಡಿಮೆ ಬರೋದಿಲ್ಲ ವೆಂದು ಪ್ರಶ್ನಿಸಿದೆ? ಅವರ್ ಉತ್ತರ ಹೀಗಿತ್ತು ಹೆಚ್ಚು ಗಿಡಗಳನ್ನು ನೆಟ್ಟು ಗಿಡಕ್ಕೆ ಬೇಕಾದ ಪೋಷಕಾಂಶ ನೀಡಿ ಹೆಚ್ಚು ಬೆಳೆ ಬೆಳೆಯುತ್ತೇವೆ ಎಂದು
ಉದಾಹರಣೆ ಕೊಟ್ಟು ತಿಳಿ ಹೇಳಿದ.
ಜೋರ್ಡಾನ್ ನದಿ ಯೊಂದರಿಂದಲೆ ಇಡೀ ಇಸ್ರೇಲ್ ದೇಶ ದೊಡ್ಡ ದೊಡ್ಡ ರಾಷ್ಟ್ರ ಗಳಿಗೆ ಕೃಷಿ ಉತ್ಪನ್ನ ಗಳನ್ನ ರಫ್ತು ಮಾಡುತ್ತದೆಅಲ್ಲಿಯ ಮುಖ್ಯ ಬೆಳೆಗಳೆಂದರೆ ಗೋಧಿ, ಬಾರ್ಲಿ ಹತ್ತಿ , ತಂಬಾಕು,ಅತೀ ಹೆಚ್ಚು ಹಣ್ಣು ಬೆಳೆಯುವ ದೆಂದಾದರೆ, ಜಂಜಾ ರ ಹಣ್ಣು,.
ಇನ್ನೊದು ವಿಚಿತ್ರ ವೆಂದರೆ ಆದೇಶ ಬಹುಪಾಲು ಹನಿ ನೀರಾವರಿ ಗೊಳಿಸಿದ್ದು ಪುಣೆಯ ಜೈನ್ ಡ್ರಿಪ್ ಇರ್ರಿಗೇಶನ್ ಕಂಪನಿಪ್ರತಿದಿನವು ಜೋರ್ಡಾನ್, ಸಿರಿಯಾ, ಜೊತೆ ಯುದ್ಧ್ ಮಾಡಿಯೇ ಬದುಕಬೇಕು ಜಗತ್ತಿನ ಅನೇಕ ರಾಷ್ಟ್ರ ಗಳಿಗೆ ಶಸ್ತ್ರ ಪೂರೈಸುವ ರಾಷ್ಟ್ರ,
ಕೊನೆಯ ದಿನ ರಾಜಧಾನಿ ಜೋರೋಸೋಲಂ ನಲ್ಲಿ ಶಾಪಿಂಗ್ ಮುಗಿಸಿ ನಾವು ಇಸ್ರೇಲಿನ ಕೃಷಿ ಪದ್ಧತಿ ಯಂತೆ ನಾನು ಕೃಷಿಕ ನಗಬೇಕೆನ್ನುವ ಇಚ್ಛೆಯಿಂದ ಭಾರತಕ್ಕೆ ಮರಳಿದೆ,
ಮಾರ್ಕಂಡೇಯ ಎಡದಂಡೆ ಕಾಲುವೆ ಯಿಂದ ಸೌಳು ಜವಳಗಿದ್ದ ನನ್ನ ಜಮೀನಿನಲ್ಲಿ ನೆಟ್ಟಿದ್ದ, ರತ್ನಾಗಿರಿ ಆಪುಸ ಗಿಡಗಳನ್ನು ಕಿತ್ತು ಹಾಕಿದೆ
ನಿಮ್ಮ
ಬಾಪು ಗೌಡ ಪಾಟೀಲ