ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…?
ನರ್ಸರಿಯಲ್ಲಿ ಸಸಿ ಬೇಳಸಿದ್ದನ್ನು,ನೆಡತೋಪುಗಳಲ್ಲಿ ಸಸಿ ನೆಟ್ಟದನ್ನು, ಸೈಜು ವಾರು ಎಣಿಸಿ, ಚೆಕ್ ಮೆಜರ್ ಮೆಂಟ ಮಾಡಬೇಕಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಬಿಜೆಪಿ ರಾಜಕಾರಣಿ ಗಳಲ್ಲಿ ಜಗಳ ಹಚ್ಚಿ ಅದು ಸಾಲದಂತೆ ಈಗ ಸುಪ್ರೀಂ ಕೋರ್ಟ್ ಮೆಟ್ಟಲ್ಲೆರಿದ್ದಾರೆಂದು ಬೆಳಗಾವಿಯ ಡಿವಿಷನ್ ಆಫೀಸ್ ನಲ್ಲಿ ಗುಸು ಗುಸು ಮಾತ ನಾಡಲು ಶುರು ಮಾಡಿದ್ದಾರೆ.
ಎರಡು ವರ್ಷ ಸೇವೆ ಸಲ್ಲಿಸಿ ಬೆಳಗಾವಿ, ನೆಸರಗಿ , ಗುಜನಾಳ,. ಕಾಕತಿ, ವಲಯ ದಲ್ಲಿ, ತನ್ನ ಕೈ ಕೆಳಗಿನ ವಲಯ ಅರಣ್ಯಾಧಿಕಾರಿಗಳ, ಚಕ್ ಮೇಜರ್ಮೆಂಟ್, ಆಫಿಸ್ ನಲ್ಲೇ ಬರೆದ, S M. ಸಂಗೊಳ್ಳಿ ಕಥೆ ಇದು ,ಆದರೆ ಸ್ವಲ್ಪೇ ದಿನಗಳಲ್ಲಿ ನಿವೃತ್ತಿ ಹೊಂದುತ್ತಿದ ಸಂಗೊಳ್ಳಿಗೆ, ಮಲ್ಲಿನಾಥ ಕುಸನಾಳ, A.C.F. ಖೋ ಕೊಟ್ಟು ಸಂಗೊಳ್ಳಿ ಜಾಗೆಗೆ ಬಂದುಬಿಟ್ಟ.
ಅದನ್ನು ನಿರೀಕ್ಷಿಸದ ಸಂಗೊಳ್ಳಿ ತನ್ನ ರಾಜಕೀಯ ಪ್ರಭಾವ ಬೆಳೆಸಿ ಇಲ್ಲೇ ಉಳಿಯಲು ಪ್ರಯತ್ನಿಸಿದ, ಬಿಜೆಪಿಯ ಒಂದು ಬಣ ಸಂಗೊಳ್ಳಿ ಉಳಿಸಲು ಹರ ಸಾಹಸ ಪಟ್ಟಿತು, ಅದರಲ್ಲಿ ಯಶಸ್ವಿ ಯಾಗಲಿಲ್ಲ,K.A.T. ಮೊರೆಹೋದ ಸಂಗೊಳ್ಳಿ ಅಲ್ಲೂ ಯಶಸ್ವಿ ಯಾಗಲಿಲ್ಲ ಈಗ ಹಟಕ್ಕೆ ಬಿದ್ದಿರೋ ಸಂಗೊಳ್ಳಿ ಸುಪ್ರೀಂ ಕೋರ್ಟಿನ ಮೋರೆ ಹೋಗಿದ್ದಾನೆಂದು ಬೆಳಗಾವಿ ವಿಭಾಗದ ಅರಣ್ಯ ಇಲಾಖೆಯಲ್ಲಿ ಮಾತನಾಡುತ್ತಿದ್ದಾರೆ,
ಇಷ್ಟೊಂದು ಪ್ರತಿಷ್ಠೆಗೆ ಬಿದ್ದೀರೋ ಕುಸನಾಳ ಮತ್ತು ಸಂಗೊಳ್ಳಿ, ಈ ಪ್ರತಿಷ್ಠೆಗೆ ಕಾರಣ ಹುಡುಕಲು ಹೊರಟರೆ ಇರುವುದೇ ಬೇರೆ..
ಇನ್ನು ಅರಣ್ಯ ಇಲಾಖೆ ಬಗ್ಗೆ ….
ಘಟಪ್ರಭಾ ವಿಭಾಗ ವಾಗಾಲಿ ,ಬೆಳಗಾವಿ ವಿಭಾಗ ವಾಗಲಿ, ಪತ್ರಿಕೆ ಮಾಹಿತಿ ಹಕ್ಕಿನಲ್ಲಿ, ಮಾಹಿತಿ ಕೇಳಿದರೆ, ವಲಯ ಅರಣ್ಯಾಧಿಕಾರಿಗಳು ಮಾಹಿತಿ ಹಕ್ಕನ್ನೇ ಅರಿದು ಕುಡದಂತೆ ಮಾಹಿತಿ ನೀಡುತ್ತಿದ್ದಾರೆ.
ಒಬ್ಬ ವಲಯ ಅರಣ್ಯಾಧಿಕಾರಿ 32,856 ಮಾಹಿತಿಗೆ, 65,712 ರೂಪಾಯಿ ತುಂಬುವಂತೆ ಮಾಹಿತಿ ಕಳಿಸಿದ್ದಾನೆ, ಇನ್ನೊಬ್ಬ ವಲಯ ಅರಣ್ಯಾಧಿಕಾರಿ 6081ಪುಟ ಇದ್ದು 12162ರೂಪಾಯಿ ಹಣ ತುಂಬುವಂತೆ ಪತ್ರ ಕಳಸಿದ್ದಾನೆ,
ಒಬ್ಬವಲಯ ಅರಣ್ಯಾಧಿಕಾರಿ ಮಾಹಿತಿ ಹಕ್ಕು ತಾನೇ ಬರೆದಂತೆ ಸೆಕ್ಷನ್ 7 ,(9) ಪ್ರಕಾರ ಖುದ್ದಾಗಿ ಬಂದು ವಲಯ ತಪಾಸಿಸ ಬಹುದೆಂದು ಬರೆದಿದ್ದಾನೆ. ಇನ್ನು ಕೆಲವು ವಲಯ ಅರಣ್ಯಾಧಿಕಾರಿ ಗಳು ಮಾಹಿತಿ ಹಕ್ಕಿನ ಪತ್ರಕ್ಕೆ ಉತ್ತರಿ ಸಿಲ್ಲ.
ನಮ್ಮ ಸಾಬ ಈಗಾಗಲೇ ಗುಡ್ಡ ಗುಡ್ಡ ಅಡ್ಡಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾನೆ,ಇವರು ಗಿಡ ನೆಟ್ಟಿದ್ದು ನೇಡತೋಪಿನಲ್ಲೊ, ಕಾಗದದಲ್ಲೋ, ಮುಂದಿನ ದಿನ ಮಾನಗಳಲ್ಲಿ ನೋಡೋಣ.
ನಿಮ್ಮ
ಬಾಪುಗೌಡ ಪಾಟೀಲ