ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ …
1990 ರಿಂದಲು ನಾನು ಅಭಯ ಪಾಟೀಲರನ್ನು ನೋಡುತ್ತಿದ್ದೇನೆ ಅವಿಭಕ್ತ ಕುಟುಂಬ , ರೈಸ್ ಮಿಲ್ ಒಡೆಯ, ಜಮೀನುದಾರ, ಆರ. ಎಸ್. ಎಸ್. ನಂಟು, ಸಮಾಜಕ್ಕೆ ನಾನು ಏನಾದರೂ ಮಾಡಬೇಕು ಅನ್ನುವುದರ ತುಡಿತ, ಅನ್ಯಾಯ ಕ್ಕೊಳಗಾದವರ ಪರ ಹೋರಾಟ, ಹಗಲು ರಾತ್ರಿ ಎನ್ನದೇ ಜನರ ಮಧ್ಯೆ ಕೆಲಸ ಮಾಡುವ ಗುಣ, ಅಭಯ ಪಾಟೀಲ ರನ್ನು ಈ ಎತ್ತರಕ್ಕೆ ಬೆಳೆಸಿದೆ.
94ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜಿ.ಪಿ. ಟಿಕೆಟ್ ಕೈ ತಪ್ಪಿದರೂ ಹಿರೇ ಬಾಗೇವಾಡಿ ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡಿದರು. ಕ್ಷೇತ್ರದಲ್ಲಿ ಯುವಕರನ್ನು ಸಂಘಟಿಸುತ್ತ ಪಕ್ಷ ಬೆಳೆಸಲು ಶ್ರಮಿಸಿದರು , 99 ರಲ್ಲಿ ಬಿ.ಜೆ.ಪಿ. ಪಕ್ಷ ಟಿಕೆಟ್ ನೀಡಿದರೂ ಸ್ವಲ್ಪ ಮತಗಳಿಂದ ಪರಾಭವ ಗೊಂಡರು.ಪರಾಭವ ಗೊಂಡರು ಧೃತಿಗೆಡದೆ ತಮ್ಮ ಸಂಘಟನೆ, ಪಕ್ಷ ಸಂಘಟನೆ, ಮಾಡಿದರು. ತಮ್ಮ ರೈಸ್ ಮಿಲ್ ನಲ್ಲಿ ಕುಳಿತು 2004ರ ಚುನಾವಣೆಯ ರಣತಂತ್ರ ಹೆಣೆಯುತ್ತಿದ್ದರು ಜೈನ್ ಸಮುದಾಯಕ್ಕೆ ಸೇರಿದ ಅಭಯ ಪಾಟೀಲರು ಎಂದು ಜಾತಿ ರಾಜಕಾರಣ ಮಾಡಿದನ್ನು ಯಾರು ನೋಡಿಲ್ಲ.
2004 ರ ವಿಧಾನ ಸಭಾ ಚುನಾವಣೆಗೆ ಪಕ್ಷೇತರ ನಾಗಿ ನಾನು ಸ್ಪರ್ದಿಸಿದ್ದೆ, (ಕಾರಣವನ್ನು ಮುಂದೊಂದು ದಿನ ಹೇಳುತ್ತೇನೆ) ಚುನಾವಣೆ ಎಣಿಕೆ ಕೊನೆಯ ಫಲಿತಾಂಶ ಬಂದಾಗ ಅಭಯ ಪಾಟೀಲರು ಜಯಶಾಲಿ ಯಾಗಿದ್ದರು ಅಲ್ಲಿಯೇ ಇದ್ದ ನನ್ನನ್ನು ಅಭಯ ಪಾಟೀಲರು ಬಿಗಿದಪ್ಪಿ ಬಾಪುಗೌಡ್ರ ನಿಮ್ಮಿಂದ ನಾ ಗೆದ್ದು ಬಂದೆ ಎಂದು ಸಂಭ್ರಮಿಸಿದರು.
ಅಭಯ್ ಪಾಟೀಲರು ನಂತರ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ 2008 ರಲ್ಲಿ ಅತೀ ಹೆಚ್ಚು ಮರಾಠಿಗರಿರುವ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಗೆದ್ದು ದಾಖಲೆ ನಿರ್ಮಿಸಿದ್ದರು. ಅಭಯ್ ಪಾಟೀಲರು ಯಾವುದೇ ಸರಕಾರ ವಿರಲಿ , ತಮ್ಮ ಕ್ಷೇತ್ರದ ಮೂಲಭೂತ ಸೌಕರ್ಯ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಕೊಡುವವರು ,ಶಾಸಕ ರಿದ್ದಾಗಲೂ ನೀರಿನ ಸಮಸ್ಯೆ ಇರಲಿ, ಗಟಾರ ಸಮಸ್ಯೆ ಇರಲಿ, ವಸತಿ ಸಮಸ್ಯೆ ಇರಲಿ, ರೇಷನ ಕಾರ್ಡ್ ಸಮಸ್ಯೆ ಇರಲಿ, ಕೂಡಲೇ ಸ್ಪಂದಿಸುವ ಗುಣದವರು , ಸಾಕಷ್ಟು ಕೆಲಸ ಮಾಡಿದ ಅವರನ್ನು 2013ರ ವಿಧಾನಸಭಾ ಚುನಾವಣೆ ಯಲ್ಲಿ ಜನ ಪರಾಭವ ಗೊಳಿಸಿದರು.
ಪರಾಭವ ಗೊಂಡರು ಮನೆಯಲ್ಲೇ ಕೂಡದ ಅಭಯ ಪಾಟೀಲರು ಕ್ಷೇತ್ರದ ಕಡಿಮೆ ಮತ ಬಿದ್ದ ವಾರ್ಡ್ ಕೆಲಸ ಮಾಡಿ ಸೈ ಎನಿಸಿಕೊಂಡರು.2018ರ ವಿಧಾನ ಸಭಾ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಮತ ಕ್ಷೇತ್ರದಿಂದಲೇ ಜಿಲ್ಲೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆಗೊಂಡರು.
ನಿನ್ನೆ ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ ನಾನು ನನ್ನ ಕಾರಡ್ರೈವ್ ಮಾಡಿಕೊಂಡು ಹೋದಾಗ ಸಿಂಗಾಪುರ ದಲ್ಲಿ ಹೊರಟಂತೆ ಭಾಸವಾಗುತಿತ್ತು.
ನಿಮ್ಮ
ಬಾಪುಗೌಡ ಪಾಟೀಲ