Home / ಜಿಲ್ಲೆ / ಬೆಳಗಾವಿ / Dr  B.R. ಅಂಬೇಡ್ಕರ್ ಅಭಿವೃದ್ಧಿ ನಿಗಮ D.G.M. ಪ್ರಕಾಶ ಹರಗಾಪುರೆ ಯಾವಾಗ ವಕೀಲಕಿ ಕಲತಿ.. ಯಾವಾಗ ನೌಕರಿ ಮಾಡಿದಿ..

Dr  B.R. ಅಂಬೇಡ್ಕರ್ ಅಭಿವೃದ್ಧಿ ನಿಗಮ D.G.M. ಪ್ರಕಾಶ ಹರಗಾಪುರೆ ಯಾವಾಗ ವಕೀಲಕಿ ಕಲತಿ.. ಯಾವಾಗ ನೌಕರಿ ಮಾಡಿದಿ..

Spread the love

Dr  B.R. ಅಂಬೇಡ್ಕರ್ ಅಭಿವೃದ್ಧಿ ನಿಗಮ D.G.M. ಪ್ರಕಾಶ ಹರಗಾಪುರೆ ಯಾವಾಗ ವಕೀಲಕಿ ಕಲತಿ.. ಯಾವಾಗ ನೌಕರಿ ಮಾಡಿದಿ..

         ಅಂಬೇಡ್ಕರರು ಸಂವಿಧಾನಕರ್ತರು ದೀನ ದಲಿತರು, ಬಡ ಜನರಿಗೆ , ಒಳ್ಳೆಯ ಶಿಕ್ಷಣ ನೀಡಬೇಕು, . ಈ ದೇಶದ ಎಲ್ಲ ಜನರಿಗೂ ಶಿಕ್ಷಣ ದೊರೆತಾಗ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಸಿಕ್ಕಂತೆ, ಅಂತಾ ದಿ:Dr.B.R.ಅಂಬೇಡ್ಕರರು ಹೇಳಿ ದ್ದರು. ಅವರ ನಿಧನನಂತರ ಈ ದೇಶದ ಜನ ದಿನವು ಅಂಬೇಡ್ಕರರನ್ನು ಸ್ಮರಿಸುತ್ತಾರೆ, ಅವರ್ ನೆನಪು ಅಜರಾಮರವಾಗಿ ಉಳಿಯಲೂ ಕರ್ನಾಟಕ ಸರ್ಕಾರ ದಿ:  :Dr.B.R.ಅಂಬೇಡ್ಕರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ.

        ಈ ನಿಗಮ ದೀನ ದಲಿತ ರು, ಹಿಂದುಳಿದ ವರ್ಗಗಳಿಗೆ , ಅನೇಕ ಯೋಜನೆಗಳನ್ನು, ರಿಯಾಯತಿಗಳನ್ನೂ ನೀಡುತ್ತದೆ,  ( ಆ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ)ಈ ಒಬ್ಬ ಅಧಿಕಾರಿ ತನ್ನ ಅಹಂಕಾರ, ದರ್ಪ, ಭ್ರಷ್ಟಾಚಾರ, ಮಾಡಿದರು ತನ್ನನ್ನು ಬೆಳಗಾವಿ ಜಿಲ್ಲೆಯಲ್ಲಿ ಯಾರು ಕೇಳುವವರಿಲ್ಲ , ಹೇಳುವವರಿಲ್ಲ, ಎಂದು ತಿಳಿದು ಎಡವಟ್ಟು ಮಾಡಿಕೊಂಡಿದ್ದಾನೆ. ವ್ಯವಸ್ಥಾಪಕನಾಗೀ ಜಿಲ್ಲೆಯಲ್ಲಿ ಮೆರೆಯುತ್ತಿದ್ದ ಈತ ಈಗ ಏಳು ಜಿಲ್ಲೆಯಲ್ಲಿ ಮೆರೆಯುತ್ತಿದ್ದಾನೆ.

 

      ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದವನಾದ ಪ್ರಕಾಶ್ ಹರಗಾಪುರೆ, ಈ ಅಧಿಕಾರಿ,K.A.S.ಪಾಸು ಮಾಡಿದ, ಈತ ಬೆಳಗಾವಿ ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನಾಗಿ ಎರಡು ವರ್ಷ ಪೂರೈಸಿ (ಇದು ಈತನ ಮಾತ್ರ ಇಲಾಖೆ)  ಬೆಳಗಾವಿ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇಲ್ಲಿಗೆ ಕಾನೂನು ಬಾಹಿರವಾಗಿ ವರ್ಗಾವಣೆಗೊಳ್ಳುತ್ತಾನೆ

      ಇಲ್ಲಿವರ್ಗಾವಣೆಗೊಂಡಾಗ ತನ್ನ ಮಾತ್ರ ಇಲಾಖೆ ಅಂಬೇಡ್ಕರ ಅಭಿವೃದ್ಧಿ ನಿಗಮದ ಚಾರ್ಜನ್ನುತೆಗೆದುಕೊಳ್ಳುತ್ತಾನೆ, ಸತತ ಮೂರು ವರೆ ವರ್ಷ ಎರಡು ಇಲಾಖೆ ಗಳನ್ನು ಸಂಭಾಳಿಸುತ್ತಾನೆ ಪ್ರತಿ ವರ್ಷವೂ ನೂರಾರು ಕೋಟಿ ಅನುದಾನ ಪಡೆದು ಅದ್ಯಾರನ್ನು ಉದ್ಧಾರ ಮಾಡಿದ್ದಾನೋ ಭಗವಂತನೆಬಲ್ಲ.

       ಅದ್ಯಾವ ಪುಣ್ಯಾತ್ಮ ಈತನತಲೆ ತುಂಬಿದನೋL.L.B. ಮಾಡುವ ಆಸೆ ಹುಟ್ಟುತ್ತದೆ. (ತಾನು ತಿಂದಿದ್ದನು ಸಮರ್ಥವಾಗಿ ವಾದ ಮಾಡಲು)ಬೆಳಗಾವಿಯ LAW ಕಾಲೇಜ್ ಗೆ ಅಡ್ಮಿಷನ್ ಮಾಡುತ್ತಾನೆ , 9/9/2014 . ಒಂದು ವರ್ಷದ ನಂತರ ಜ್ಞಾನೊದಯವಾಗುತ್ತದೆ,ತನ್ನ ಮಾತ್ರ ಇಲಾಖೆ ಬಿಟ್ಟು ಹಿಂದುಳಿದ ವರ್ಗಗಳ ಇಲಾಖೆ ಇಂದ ಅನುಮತಿ ಪಡೆಯುತ್ತಾನೆ, 31/08/2015 ರ  ಸರ್ಕಾರದ ಈ ಅನುಮತಿ ಪತ್ರದಲ್ಲಿ ಸರ್ಕಾರಿ ಸೇವೆಗೆ ಗೈರಾಗದೇ ಸರ್ಕಾರಿ ಸೇವೆಯ ಅವಧಿಯಲ್ಲಿ, ಸರ್ಕಾರಿ ಸೇವೆ ಮಾಡಬೇಕೆಂದು ಸ್ಪಷ್ಟ ಉಲ್ಲೇಖವಿದೆ

       ಆದರೆ ಈತ ಕಾಲೇಜ್ ಕಲತಿದ್ದು ಮುಂಜಾನೆ ಎಂಟರಿಂದ{8AM} ಒಂದುಮೂವತ್ತರವರೆಗೆ (1.30.PM)ಸತತ ಮೂರು ವರ್ಷವೂ ಪ್ರತಿಶತ 77%/,75%, 78%, ಹಾಜರಾತಿ ಹಾಕಿ, ಈ ಅವಧಿಯಲ್ಲಿ ಮೂರು ವರ್ಷ ಸಂಬಳವನ್ನು ಪಡೆದಿರುತ್ತಾನೆ, (K.C.S.R.ACT) ಪ್ರಕಾರ ಈತ ಕೆಲಸದಿ 0ದಾ ವಜಾ ಆಗಬೇಕು ಆದರೆ ವಿಪರ್ಯಸವೆಂದರೆ ಇದೆ ಅವಧಿಯಲ್ಲಿK.D.P. ಮೀಟಿಂಗ್ಗೂ ಹಾಜರಾಗಿದ್ದಾನೆ, ಜಿಲ್ಲಾ ಪಂಚಾಯತಿ ಜನರಲ್  BODY MEETING  ಹಾಜರಾಗಿದ್ದಾನೆ, ಜಿಲ್ಲಾ ಉಸ್ತುವಾರಿ ಸಚಿವರ review meetingಗು ಹಾಜರಾಗಿದ್ದಾನೆ.

      ಥೇಟ್ ರಾಜಕುಮಾರನ  ನಾನೊಬ್ಬ ಕಳ್ಳ ಸಿನೆಮಾದಂತೆ ಇಂಥ ದೊಡ್ಡ ಜಿಲ್ಲೆಯಲ್ಲಿ ಇಷ್ಟೆಲ್ಲಾ ರಾಜ ಕಾರಾಣಿ ಗಳು , ವಿಭಾಗಅಧಿಕಾರಿ, ಜಿಲ್ಲಾಧಿಕಾರಿ, ವಿರೋಧ್ ಪಕ್ಷದವರ್ ಕಣ್ಣುತಪ್ಪಿಸಿ, ಈಗ ಮತ್ತೆ ಸಧ್ಯ Dr.B.R. ಅಂಬೇಡ್ಕರ ಅಭಿವೃದ್ಧಿ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ವಕ್ಕರಿಸಿದ್ದಾನೆ.

       ಏಳು ಜಿಲ್ಲೆಅಂಬೇಡ್ಕರ ನಿಗಮದ ಕಥೆ  ಆದಿತ್ಯ, ಬಿಸ್ವಾಸ್ ರಿಗೆ  ಗೊತ್ತಾದರೆ ಸಾಕು,ದಿಟ್ಟ , ಪ್ರಾಮಾಣಿಕ, ವಿಭಾಗ ಅಧಿಕಾರಿ ಆದಿತ್ಯಬಿಸ್ವಾಸರು  ಮನಸು ಮಾಡಿದರೆ ಎಲ್ಲವೂ ಸಾಧ್ಯ.. ಪತ್ರಿಕೆ ಎಲ್ಲ ದಾಖಲೆಗಳನ್ನು ನೀಡುತ್ತದೆ

ನಿಮ್ಮ

ಬಾಪುಗೌಡ  ಪಾಟೀಲ್

 

 

 

 

 

 


Spread the love

About Admin Bapu

Check Also

ಚಿಕ್ಕೋಡಿ ಕ್ಷೇತ್ರದಾಗ ಎದರಾಳಿ ಡಿಪಾಜಿಟ ಉಳಿಯುದಿಲ್ಲ…!?

Spread the loveಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು …

Leave a Reply

Your email address will not be published. Required fields are marked *