ನಾನುಬೆಲ್ಲದ ಸಂಜೆ LAW ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ್ ಈ ಮುಳವಾಡಮಠರು ನನ್ನನ್ನು ಏಕ ವಚನ ದಲ್ಲಿ ಕರೆಯುವಷ್ಟು ಆತ್ಮೀಯರಾಗಿದ್ದರು , ಅಲ್ಲಿ ಅವರು ಕೂಡ lecturer ಆಗಿದ್ದರು,ಬೆಲ್ಲದ LAW ಕಾಲೇಜಿನ ಪ್ರಥ ಮ ವರ್ಷದ ಸಿ.ಆರ. ಚುನಾವಣೆಯಲ್ಲಿ ನಾನು ಸಿ.ಆರ್ . ಆಗಿ ಆಯ್ಕೆಆಗಿದ್ದೆ. ಅಂದು LAW ಕಾಲೇಜಿನಲ್ಲಿ ನಮ್ಮದೇ ಒಂದು ಟೀಮ್ ಇತ್ತು.ರಾಜು ಬಾಗೆವಾಡಿ , ಸೋಮಶೇಖರ್ ಬೆಟಗೇರಿ, . R.K. ಪಾಟೀಲ ,ಪ್ರಶಾಂತ್ ಗೌಡರ , ಪ್ರಭುಘಿವಾರಿ, R.P.ಪಾಟೀಲ, M.T. ಪಾಟೀಲ್, ಎಲ್ಲರದು ಕ್ಲಾಸ್ ಮುಗಿದ ನಂತರ ದಿನವು ಹರಟೆ ,ಹೊಡೆಯುತ್ತಿದ್ದೆವು,
ಒಂದನೇ ವರ್ಷದ ಚುನಾವಣೆಯಲ್ಲಿ ನಮ್ಮಗದ್ದಲ ನೋಡಿದ್ದ ಪ್ರಿನ್ಸಿಪಾಲ್ ಬಿರದಾರರು ಎರಡನೇ ವರ್ಷದ ಕಾಲೇಜ್ ಚುನಾವಣೆ ರದ್ದುಮಾಡಿದ್ದರು.ಅಂದು ನಾನು ಮತ್ತು ಬೆಟಗೇರಿ, ಕೋರ್ಟಿಗೆ ಹೋಗಿ ಪ್ರಿನ್ಸಿಪಾಲರು ಚುನಾವಣೆರದ್ದು ಮಾಡಿದ್ದ ಆದೇಶಕ್ಕೆ ತಡೆತಂದಿದ್ದೇವು,ಆವಾಗ ಮುಳವಾಡ ಮಠರು ನನ್ನನ್ನು ಉದ್ದೇಶಿಸಿ ಬಾಪುಗೌಡ ನೀ LAW ಕಂಪ್ಲೀಟ್ ಮಾಡಿಕೋ ಚೊಲೋ ವಕೀಲ ಆಗುತ್ತಿ ಅಂತಾ ಹರಿಸಿದ್ದರು.
ಅಥಣಿ ತಾಲೂಕಿನಲ್ಲಿ ಹುಟ್ಟಿ L.L.B. ಮಾಡಿ ಬೆಳಗಾವಿಯಲ್ಲಿ ಪ್ರಾಕ್ಟೀಸ್ ಪ್ರಾರಂಭ ಮಾಡಿದ್ದ ಮುಳವಾಡಮಠರು ಸ್ವಲ್ಪೇ ದಿನದಲ್ಲಿ ಕಕ್ಷಿದಾರರ ವಿಶ್ವಾಸಕ್ಕೆ ಪಾತ್ರರಾಗಿದ್ದರು.ಅವರು ವಾದ ಮಾಡುವ ರೀತಿಗೆ ಜಡ್ಜ್ ಗಳು ಗಲಿಬಿಲಿ ಗೊಳ್ಳು ತ್ತಿದ್ದರು ,ಮುಳವಾಡ ಮಠರು ವಕಾಲತ್ತು ಹಾಕಿದ್ದಾರೆಂದರೆ ಕೇಸೂ ಗೆದ್ದಂತೆಯೆ ಎಂದು ಅವರ್ ಕಕ್ಷಿದಾರರು ಭಾವಿಸುತ್ತಿದ್ದರು,ರಾಜ್ಯ ಪರಿಷತ್ ಅಧ್ಯಕ್ಷ ರಾಗಿ ಬೆಳಗಾವಿ ಬಾರ್ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು, ಒಂದು ಬಾರಿ ಲೋಕ ಅದಾಲತ್ ಜಡ್ಗೆರಿಗೆ ಕೋರ್ಟ್ ಹಾಲಿ ನಲ್ಲಿಯೇ ನನ್ನನ್ನು ಹೊಗಳಿ ಮಾತ ನಾಡಿದ್ದನ್ನು ನಾನು ಎಂದು ಮರೆಯಲಾರೆ,
ಅವರ ಸಾಮಾಜಿಕ ಕಳಕಳಿಯಂತು ಬೆಳಗಾವಿಯ ಜನತೆ ಎಂದು ಮರೆಯಲಾರರು K.A.T.ನ್ಯಾಯಾಲಯ ಬೆಳಗಾವಿಗೆ ತರುವಲ್ಲಿ ಆಮರಣ ಉಪವಾಸ ಕುಳಿತ್ತಿದ್ದರು,ವಕೀಲರಿಗೆ ಯಾರಾದರೂ ನಿಂದಿಸಿದರೆ ಅವರ್ ಪರವಾಗಿ ಧ್ವನಿ ಎತ್ತೂತೀದ್ದರು, ಅನ್ಯಾಯ ವಾದ ಯಾವುದೇ ಸಮುದಾಯದ ಪರವಾಗಿ ಹೋರಾಟ ಕ್ಕಿಳಿಯತ್ತಿದ್ದರು ,ಬೆಳಗಾವಿ ಕೋರ್ಟಿನಲ್ಲಿ ತಮ್ಮದೇ ಅಧಿಕ ವಕೀಲರ ಶಿಷ್ಯ ಮಂಡಳಿ ಹೊಂದಿದ್ದರು ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ನನ್ನ ಸಲಹೆ ಕೇಳಿದ್ದರು, ಈ ಹೊಲಸು ರಾಜಕೀಯ ಬೇಡ ಅಂತಾ ಸಲಹೆ ಕೊಟ್ಟಿದ್ದೆ.
ಒಂದು ತಿಂಗಳ ಹಿಂದೆ ನಾನು ಬೆಳಗಾವಿ ತಾಲೂಕಿನ ಗುರಾಮಟ್ಟಿ ಹತ್ತಿರ ಹಾಸಿ ಬರುವಾಗ ರಸ್ತೆ ಮೇಲೆ ನಿಂತಿದ್ದ ಮುಳವಾಡ ಮಠರನ್ನು ಇಲ್ಲಿ ಏಕೆ ನಿಂತಿದ್ದೀರಿ ಎಂದು ಕೇಳಿದೆ ಬಾಪು ಗೌಡ ಇಲ್ಲಿ ಒಂದಿಷ್ಟು ಜಮೀನು ತೆಗೆದು ಕೊಂಡಿದ್ದೆನೆಂದು ಹೇಳಿ ತಮ್ಮ ಜಮೀನು ತೋರಿಸಿ ಬೇಡ ಬೇಡ ಎಂದರು ಊಟಾ ಮಾಡಿಸಿ ಕಳಸಿದ್ದರು,ಅಂದು ಅವರ್ ಜೊತೆ ನನ್ನ ಸಹೋದರ ವಕೀಲ ಆರ್ ಕೆ ಪಾಟೀಲ ಕೂಡ ಇದ್ದಾ.
ನಿನ್ನೆನನ್ನ ವಿಡಿಯೋ ಮನಷ್ಯಾ ಆಗಿ ಹುಟ್ಟಿದ ಮ್ಯಾಗ ಮಣ್ಣ ಕೊಡಾಕ ಹೋಗ್ರಿ ಅನ್ನುವ ಸಂಚಿಕೆ ಬಿಡುಗಡೆ ಯಾದ ಕೆಲವೇ ಕ್ಷಣ ಗಳಲ್ಲಿ ಅವರು ನಿಧನರಾದ ಸುದ್ದಿಬಂತು. ಅವರ ವಿದ್ಯಾರ್ಥಿಗಳಾದ ನಾವು ಮಣ್ಣು ಕೊಡಲಿಕ್ಕೆ ಹೋಗದಿದ್ದಕ್ಕೆ ಬೇಸರವಾಗಿದೆ.ವಿಧಿ ಎಷ್ಟು ಕ್ರೂರಿ ಅಲ್ಲವೇ….?
ಅವರ ಕುಟುಂಬ,ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ
ನಿಮ್ಮ
ಬಾಪುಗೌಡ ಪಾಟೀಲ