ಊರಿಗಿ ಸೊಕ್ಕ ಬಂದಾಗ, ದ್ಯಾಮವ್ವನ ಜಾತ್ರಿ ಆಗತೈತಿ ,ಮನಷ್ಯಾಗ ಸೊಕ್ಕ ಬಂದ್ರ ಇಲೇಕ್ಷನಕ್ಕ ನಿಲ್ಲಸಬೆಕಂತ……….
ಇವೆರಡೂ ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ, 1990 ನೆ ಇಸ್ವಿಯಲ್ಲಿ ಇರಬಹುದು ಎಂದು ಬರಗಾಲ ಬರದ ನಮ್ಮ ನಾಡಿಗೆ ಬರಗಾಲಬಂದಿತ್ತು, ಅದೇ ವೇಳೆಯಲ್ಲಿ ನಮ್ಮೂರಿನ ಕೆಲವು ಹಿರಿಯರು 20 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಯನ್ನು ನಡೆಸಲು ಊರಿನ ನಾಗರಿಕರ ಮೀಟಿಂಗ್ ಕರೆದಿದ್ದರು .
ನಾನು ಬಿಸಿ ರಕ್ತದ ತರುಣ ಆಗ ತಾನೇ ಯುವ ವೇದಿಕೆ ಅಂತಾ ಯುವಕ ಸಂಘ ಕಟ್ಟಿದ್ದೆ, ನನ್ನೂರು (ಹುದಲಿ) ಯಲ್ಲಿ ನನ್ನ ಯುವಕ ಸಂಘದ ಪದಾಧಕಾರಿಗಳು ಸದಸ್ಯರು, ಊರಿಗೆ ಬರಗಾಲವಿದೆ ಇಂಥ ಸಂದರ್ಭ ದಲ್ಲಿ ಜಾತ್ರೆ ಮಾಡ್ ಬೇಕೆಂದರೆ ಸಾಕಷ್ಟು ಸಾಲ ಮಾಡಿ ಜಾತ್ರೆ ಮಾಡ್ ಬೇಕಾಗುತ್ತದೆ, ಜಾತ್ರೆ ಆದ ನಂತರ ಮೂರು ವರ್ಷ ಮದುವೆ ಮಾಡಿ ಕೊಳ್ಳಲ್ಲು ಬರುವುದಿಲ್ಲ, ಮನೆ ರಿಪೇರಿ , ಸಂಬಂಧಿಕರಿಗೆ ಎಲ್ಲ ಅರಿವೇ ಅಂಚಡಿ, ಹನ್ನೊಂದು ದಿವಸ ಸಿಹಿ ಊಟಾ, ಹೊಸ ತೇರು, ಹನ್ನೊಂದು ದಿವಸ ,ಪ್ರತಿ ದಿನವೂ ಮನೋರಂಜನೆ, ಇವುಗಳ ವೆಚ್ಚಗಳನ್ನೆಲ್ಲ, ಊರಿನ ಜನ ಸಾಮಾನ್ಯರಿಗೆ ಭರಿಸಲಾಗುವದಿಲ್ಲ , ಈ ಜಾತ್ರೆಗೆ ನಮ್ಮ ಯುವಕ ಸಂಘದವರು ವಿರೋಧ ಮಾಡ್ ಬೇಕೆನ್ನುವ ನಿರ್ಣಯ ತೆಗುದು ಕೊಂಡಿದ್ದೇವು.
ಮರುದಿನ ಆ ಹಿರಿಯಲ್ಲಿಯೆ ಭಿನ್ನಾಭಿಪ್ರಾಯವಿತ್ತು , ಅದರಲ್ಲಿಒಬ್ಬ ಹಿರಿಯರು ಜಾತ್ರೆಗೆ ವಿರೋಧ ಮಾಡಿದರು ,ಆಹಿರಿಯರ ಮಾತಿನ ಧಾಟಿಯಲ್ಲಿಯೇ ನಾನು ಮಾತು ಪ್ರಾರಂಭ ಮಾಡಿದೇ, ಜಾತ್ರೆ ಮಾಡುವ ದಾದರೆ ದ್ಯಾಮವ್ವನ ಗುಡಿಯಲ್ಲಿ 20ವರ್ಷದ ಹುಂಡಿಯ ಲೆಕ್ಕ, ದ್ಯಾಮವ್ವ ನಗೇ ಬಿಟ್ಟ ಆಕಳು ಹೋರಿ ಗಳ ಲೆಕ್ಕ ಪತ್ರ, ದೈವದವರು , ಕಟ್ಟಿದ ದಂಡದ ಲೆಕ್ಕ ಪತ್ರವನ್ನು ಸಾರ್ವಜನಿಕರಿಗೆ ತೋರಿಸಿ ಜಾತ್ರೆ ಪ್ರಾರಂಭಿಸು ವಂತೆ ಆಗ್ರ ಹಿಸಿದೆ,ಕೂಡಿದ ಜನ ರೆಲ್ಲರು ಗೌಡ್ರು ಹೇಳೋದು ಖರೇ ಐತಿ ಅಂತಾ ಒಪ್ಪಿದರು ,
ಅದೆಲ್ಲೋ ಮೂಲೆಯಲ್ಲಿ ಕುಳಿತ್ತಿದ್ದ ದೇವರು ಹೆಳಾಕಿ ಒಬ್ಬಳು ತಕ ಥೈ ಥೈ ಕುಣಿಯುತ್ತ, ಲೆಕ್ಕಾ ಕೇಳಿದವರನ್ನು ಸುಟ್ಟು ಬಿಡ್ತೇನು , ಅಂತಾ ಕೂಗುತ್ತಾ ಕೈಯಲ್ಲಿದ್ದ ಭಂಡಾರ ಎಸೆಯಲು ಸುರು ಮಾಡಿದಳು,ನೇರವಾಗಿ ಬಂದು ನನ್ನ ಹಣೆಗೆ ಭಂಡಾರ ಹಚ್ಚಿ ಜಾತ್ರಿಗಿ ವಿರೋಧ್ ಮಾಡ ಬ್ಯಾಡ ಮಗನ , ದ್ಯಾಮವ್ವ ತೆರ್ ಜಕ್ಕೊಂಡ ಹೋಗ ತಾಳ ಅಂತಾಹೇಳಿದಳು ಯಾಕೋ ನನಗೆ ಮಾತ ನಾಡಲಾಗಲಿಲ್ಲ,ಅದೇನೋ ನಮ್ಮೂರಿನ ದ್ಯಾಮವ್ವನ ತಾಕತ್ತು ಗೊತ್ತಾಗಲಿಲ್ಲ
1991 ರಲ್ಲಿ 11ದಿನಗಳ ಜಾತ್ರೆ , ನಾನು ಕಾಣದಷ್ಟು ವಿಜೃಂಭಣೆ ಯಿಂದ ಜರುಗಿತು , ದೈವಾಚರಿ ಉಡಿ ತುಂಬುವ ಕಾರ್ಯ ಕ್ರಮ, ಅಣ್ಣ ತಮ್ಮಂದಿರ ಉಡಿ ತುಂಬುವ ಕಾರ್ಯ ಕ್ರಮ, ದೇವಿಯ ಹೊನ್ನಾಟ, 20ವರ್ಷಗಳ ಹಿಂದೆ ಊರು ಬಿಟ್ಟು ಹೋದ ಜನ, ನೌಕರಿ ಮಾಡಲೂ ಊರು ಬಿಟ್ಟು ಹೋದ ಜನ, ಪರ ಸ್ಥಳಕ್ಕೆ ಮದವೆ ಮಾಡಿ ಕೊಟ್ಟ ಹೆಣ್ಣು ಮಕ್ಕಳು, ಮನಸ್ತಾಪ, ಮಾಡಿ ಕೊಂಡಿದ್ದ ಕುಟುಂಬಗಳು, ಒಂದಾಗಿ ಜಾತ್ರೆ ಮಾಡಿದನ್ನು ನಾನು ಕಣ್ಣಾರೆ ಕಂಡೆ,
ಊರಿಗೆ ಸಾಕಷ್ಟು ಸಾಲವಾದರು ಯಾರು ತೋರುಗುಡಲಿಲ್ಲ,
ನಮ್ಮೂರಿನಲ್ಲಿ ಉಳಿದಿರುವ ಹಳೆ ತಲಮಾರಿನ ಹಿರಿಯರು ಯಾರಾದರೂ ಮೆರೆಯುತ್ತಿದ್ದರೆ ನಮ್ಮೂರಿನ ದ್ಯಾಮವ್ವ (ಲಕ್ಷ್ಮೀ,).ನಾ, ನಾ, ಅನ್ನೋ ವರಿಗೆ ತೋರಿಸಿದ್ದಾಳೆ,ಇವತ್ತಿಗೂ , ದ್ಯಾಮವ್ವ, ಮತ್ತು ಬಾಷಿ ಬಾನ, ಅವರನ್ನು ನೋಡಿ ಕೊಳ್ಳುತ್ತಾರೆ ಅಂತಾ ಹೇಳುತ್ತಾರೆ.
ನನಗೂ ಸೊಕ್ಕು ಬಂದಾಗ ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದನ್ನು ನಾನು ಇನ್ನು ಮರೆತಿಲ್ಲ..
ನಿಮ್ಮ
ಬಾಪುಗೌಡ ಪಾಟೀಲ್