ಒಂದು ಕಡೆ ಗ್ರಹಣ ಒಂದು ಕಡೆ ನಿಜ ಗುಣಾನಂದ್ ಸ್ವಾಮೀಜಿ……….
ನಿನ್ನೆ ರಾತ್ರಿ ನನ್ನ ಹೆಂಡತಿ ನಾಳೆ 10ಗಂಟೆಗೆ ಗ್ರಹಣ ಚಾಲು ಆಗ ತೈತಿ 10 ಗಂಟೆ ಒಳಗ ನೀವು ಜಳಕಾ ಮಾಡಿ ನಾಷ್ಟಾ ಮಾಡ್ರಿ, ಒಂದು ವರಿ ಮಟಾ ನೀವು ನೀರು ಸಹಿತ ಕುಡಿ ಬೆಡ್ರಿ ಎಂದು ವಾರ್ನಿಂಗ್ ಮಾಡಿದ್ದಳು,ಆಕೆಯ ಮಾತಿಗೆ ನಾ ಹೂ0 ಅ ದಿದ್ದೆ,
ಬೇಳಕಾದೊಡನೆ ಟಿವಿ ಆನ್ ಮಾಡಿದೆ ಎಲ್ಲಾ ಟಿವಿ ಯಲ್ಲೂ ಗ್ರಹಣದ ಬಗ್ಗೆ ಘಣ ಪಂಡಿತರು ಟಿವಿ ವಿಶ್ಲೇಷಕರು ಗ್ರಹಣ ದೋಷದ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು.
ನನ್ನ ಮೊಬೈಲ್ ಆನ್ ಮಾಡಿದೆ , ನಿಜಗುಣಾನಂದ ಸ್ವಾಮೀಜಿ ಎಂದೋ ಮಾತ ನಾಡಿದ ವಿಡಿಯೋ ಧ್ವನಿ ನನ್ನನ್ನೂ ತದೇಕ ಚಿತ್ತದಿಂದ ಕೇಳುವಂತೆ ಮಾಡಿತು, ನಿಜಗುಣಾನಂದ ಸ್ವಾಮೀಜಿ ಅವರು ಗ್ರಹಣದ ಬಗ್ಗೆ ಹೇಳುತ್ತಿದ್ದರು,ಅದರಲ್ಲಿಯ ಕೆಲವೊಂದು ತುಣುಕು ಗಳನ್ನ ಮಾತ್ರ ತಮ್ಮ ಮುಂದೆ ಇಡುತ್ತಿದ್ದೇನೆ,
ಗ್ರಹಣದ ದಿವಸ್ ಮನ್ಯಾಗಿನ್ ನೀರು ಹೊರಗ ಚೆಲ್ಲರಿ, ಗ್ರಹಣ ಕೆಟ್ಟ, ಅದರ ಛಾಯೆ ತುಂಬಿದ ನೀರಿನ ಮ್ಯಾಗ ಬಿದ್ರ ಆದೋಷ ಮನೆ ಮಂದಿಗೆ ಹತ್ತ ತ್ತೈತ್ ಅಂತಾ , ಜ್ಯೋತಿಷ್ಯ ಗೊಳ್ ಹೇಳ್ತಾ ರ , ಆದ್ರ ನಾ ಒಂದು ಮಾತು ಅವರ್ಗ್ ಕೆಳತೇನಿ ಮನ್ಯಾಗಿನ ನೀರು ಹೊರಗ ಚೆಲ್ಲುನು, ಆಗ್ರಹಣದ ದೋಷ ಭಾವೀ ಮ್ಯಾಗ , ಕೆರಿ ಮ್ಯಾಗ, ಹೊಳಿ ಮ್ಯಾಗ, ಡ್ಯಾಂ ಗೋಳ ಮ್ಯಾಗ, ಬೀಳುದಿಲ್ಲ ಎನ್ ಅಂತಾ ಪ್ರಶ್ನಿಸುತ್ತಿದ್ದರು.
ಗ್ರಹಣ ಮುಗಿದ್ ಮ್ಯಾಗ, ಹೊಸಾನೀರಿನಿಂದ ಅಡುಗೆ ಮಾಡ್ರಿ, ಚಹಾ ಮಾಡ್ರಿ, ಅಂತಾ ಜ್ಯೋತಿಷ್ಯ ಗೋಳ ಹೇಳ್ತಾರ , ಆದ್ ಡ್ಯಾಂನೀರ ,ಅದ ಭಾವ್ಯಾಗಿನ ನೀರ, ಆಗೃಹಣದ ಛಾಯೆ ಇವುಗಳ ಮ್ಯಾಲೆ ಬೀಳುದಿಲ, ಏನು ಅಂತ ಮಾತನಾಡುತ್ತಿದ್ದರು, ಸ್ವಾಮೀಜಿ ಅವರ್ ಮಾತಿಗೆ ನಾ ತಲೆ ದುಗೂ ತ್ತಿದ್ದೆ
ಮತ್ತೆ ಟಿವಿ ಆನ ಮಾಡಿದೆ ಟಿವಿಯಲ್ಲಿ ಗ್ರಹಣ ದೋಷಕ್ಕಾಗಿ ಅನೇಕ ಕಡೆ ಹೋಮ ಹವನಗಳನ್ನು ಮಾಡುತ್ತಿದ್ದ ವರದಿ ಗಳು ಬರುತ್ತಿದ್ದವು, ಹೋಮ ಹವನದ ಘಾಟು ದೇಶದ ಮೂಲೆ ಮೂಲೆಗೂ ಪಸರಿಸುತ್ತಿತ್ತು.
ಮತ್ತೊಂದು ಕಡೆ ಮೌಢ್ಯ ವಿರೋಧಿಗಳು , ಗ್ರಹಣದ ಸಮಯದಲ್ಲಿ , ಉಪಹಾರ ಸೇವಿಸುತ್ತಿದ್ದ ವರದಿಗಳು ಟಿವಿ ಚಾನಲ್ ನಲ್ಲಿ ಬರುತ್ತಿ ದ್ದವು
ಒಂದು ಕಡೆ ಜ್ಯೋತಿಷ್ಯರು, ಒಂದುಕಡೆ ನಮ್ಮ ಮನೆಯ ಹೆಣ್ಣು ಮಕ್ಕಳು ಶ್ರದ್ಧೆಯಿಂದಗ್ರಹಣ ಪಾಲಿಸುತ್ತಿರುವುದು , ಒಂದು ಕಡೆ ಮೌಢ್ಯ ವಿರೋಧಿಗಳು, ಇದು ನಮ್ಮ ದೇಶದ ವಾಸ್ತವ್ಯಸ್ಥಿತಿ,
ನಿಮ್ಮ ಬಾಪುಗೌಡ ಪಾಟೀಲ