ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?
ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಎಸ್ .ಬಿ. ಬೊಮ್ಮನಳ್ಳಿ ಮಂಗಳವಾರ ನಿವೃತ್ತಿ ಆಗಲಿದ್ದಾರೆ.ಹೊಸ ಜಿಲ್ಲಾಧಿಕಾರಿ ಯಾರಗಬಹುದೆಂದು,ಪತ್ರಕರ್ತರು, ಪುಡಿ ರಾಜಕಾರಣಿಗಳು, ತಮ್ಮದೇ ಧಾಟಿಯಲ್ಲಿ ಹೆಸರು ತೇಲಿ ಬಿಡುತ್ತಿದ್ದಾರೆ,
ಕೆಲವು ಜನ ಈ ಹಿಂದೆ ಜಿಲ್ಲಾ ಪಂಚಾಯತಿ C.E.O. .ಆಗಿದ್ದ . ದೀಪಾ ಚೋಳನ್, ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ನಿಖರವಾಗಿ ಹೇಳುತ್ತಾರೆ, ಈ ಹಿಂದೆ ನೌಕರಿ ಮಾಡುವಾಗ ಎಲ್ಲಾ ರಾಜಕಾರಣಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋದ ಅನುಭವ ಅವರಿಗಿದೆ ಎಂದು ಮಾತನಾಡುತ್ತಿದ್ದಾರೆ.
ಇನ್ನು ಕೆಲವರು ಹಾಲಿ ಜಿಲ್ಲಾ ಪಂಚಾಯತಿ C .E .O. ರಾಜೇಂದ್ರನ್ ಜಿಲ್ಲಾಧಿಕಾರಿಯಾಗಿ ಬರುತ್ತಾರೆಂದು ಹೆಸರು ತೇಲಿಬಿಡುತ್ತಿದ್ದಾರೆ.
ಇನ್ನು ಕೆಲವರು ಗದಗ ಜಿಲ್ಲಾ ಧಿಕಾರಿ ಯಾಗಿ ಸೇವೆ ಸಲ್ಲಸುತ್ತಿರುವ M.G..ಹಿರೇಮಠ ಅವರು ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ಹೆಸರು ತೇಲಿ ಬಿಡುತ್ತಿದ್ದಾರೆ,ಈ ಹಿರೇಮಠರು ನಾನ್ I.A.S. ಕನ್ಫರ್ಮ್ಡ ಜಿಲ್ಲಾಧಿಕಾರಿ.
ಈ ಹಿಂದೆ ಜಿಲ್ಲಾಧಿಕಾರಿಯಾಗಿ ನಾಲ್ಕೂವರೆ ವರ್ಷ ಜಯರಾಮ ಎಲ್ಲ ಪಕ್ಷ ದವರನ್ನು ಪಕ್ಷಾತೀವಾಗಿ ಸಂಭಾಳಿಸುತ್ತಿದ್ದರು.ಬೆಳಗಾವಿ ಇತಿಹಾಸದಲ್ಲಿ ಹೆಚ್ಚು ದಿನ ಜಿಲ್ಲಾಧಿಕಾರಿ ಯಾಗಿ ಸೇವೆ ಸಲ್ಲಿಸಿದ
ರೆಕಾರ್ಡ್ ಇವರ್ ಹೆಸರಿನಲ್ಲಿದೆ.
ನಮ್ಮ ಜಿಲ್ಲೆಯ ರಾಜಕಾರಣಿಗಳು ಇಷ್ಟ ಪಡುವುದು ಇಂಥ ಅಧಿಕಾರಿಗಳನ್ನೇ ಜಾತಿವಾರು ಲೆಕ್ಕಾಚಾರ ಹಾಕುವ ರಾಜ ಕಾರಣಿ ಗಳು ಮತ್ತೊಬ್ಬ ಲಿಂಗಾಯತ NON I.A.S.ಅಧಿಕಾರಿಯನ್ನೆ ಜಿಲ್ಲಾಧಿಕಾರಿಯನ್ನಾಗಿರುತ್ತಾರೆನ್ನುವುದು ಜಿಲ್ಲಾಧಿಕಾರಿ ಪಡಸಾಲೆ ಯಲ್ಲಿ ಚರ್ಚಿತವಾಗುತ್ತಿದೆ.
ಒಂದು ವೇಳೆ ಈ ವಿಷಯದಲ್ಲಿ ವಿಜಯೇಂದ್ರ ಕೈ ಆಡಿಸಿದರೆ ಯಡಿಯೂರು ಸಿದ್ಧಲಿಂಗೇಶ್ವರನೇ ಹೆಸರು ಒಡೆಯ ಬೇಕು..