ಮುಖ್ಯಮಂತ್ರಿ ಯೊಂದಿಗೆ ಕಳೆದ ಆ ರಾತ್ರಿ…
ಅದು 1995-19996 ರಲ್ಲೀ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಸಮಾಜವಾದಿ , ನಾಡು ಕಂಡ ಅತ್ಯುತ್ತಮ ಮುಖ್ಯಮಂತ್ರಿ ದಿ: ಜೆ. ಎಚ್. ಪಟೇಲರ ಜೊತೆರಾತ್ರಿ ಕಳೆದದ್ದು, ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಹಿರೇ ಬಾಗೇವಾಡಿ ಅಂದಿನ ಶಾಸಕರಾಗಿದ್ದ ಎಸ್. ಸಿ. ಮಾಳಗಿಯವರು ನನಗೆ ಫೋನ್ ಮಾಡಿ ಮನೆಗೆ ಬರಲು ಹೇಳಿದರು . ಮನೆಗೆ ಹೋದೊಡನೆ ಕಾರು ಹತ್ತು ಅಂತಂದರು ,ಕಾರಿನಲ್ಲಿ ಕುಳಿತೆ ಯಾಕಂದ್ರೆ ಆದಿನ ಮಾನದಲ್ಲಿ ಮಾಳಗಿಯವರು ನನ್ನನ್ನು ಬಿಟ್ಟು ಒಂದು ದಿನವು ಇರುತ್ತಿರಲಿಲ್ಲ.
ಯಾವುದೇ ರಾಜಕೀಯ ನಿರ್ಣಯವಿರಲಿ ,ಮತಕ್ಷೇತ್ರದ ಸಮಸ್ಯೆಗಳಿರಲಿ, ಅಧಿಕಾರಿಗಳ ವರ್ಗಾವಣೆ ಯಿರಲಿ, ಯಾವುದೇ ಸಮಸ್ಯೆ ಇದ್ದರೂ ನನ್ನ ಜೊತೆ ಹಂಚಿ ಕೊಳ್ಳುತ್ತಿದ್ದರು.
ಮಾಳಗಿಯವರಿಗೆ ಯಾರು ಏನು ಹೇಳಬೇಕೆಂದರು ನನ್ನ ಜೊತೆ ಚರ್ಚಿಸುತ್ತಿದ್ದರು , ನಂತರ ಮಾಳಗಿ ಯವರಿಗೆ ನಾನು ಸಮಜೂತಿ ನೀಡುತ್ತಿದೆ. ಅರ್ಧ ತಾಸಿನ ನಂತರ ಭೂತರಾ ಮಟ್ಟಿಯ ಮಾಳಗಿಯವರ ಫಾರ್ಮ್ ಹೌಸ್ ಗೇಟಿನ ಮುಂದೆ ಕಾರು ನಿಂತಿತು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಾಳಗಿಯವರನ್ನು ಯಾರ್ಯಾರನ್ನು ಫಾರ್ಮ್ ಹೌಸ್ ಒಳಗಡೆ ಬಿಡುವುದು ಎಂದು ಕೇಳಿದರು ಮಾಳಗಿಯವರು ಜಿಲ್ಲೆಯ ಜನತಾದಳದ ಶಾಸಕರು, ಮತ್ತು ಬಾಪುಗೌಡ ಪಾಟೀಲ ಹೆಸರನ್ನು ಬರೆದುಕೊಟ್ಟರು.
ಬಾಪು ಇಂದು ಜೆ.ಎಚ್. ಪಟೇಲರು ನನ್ನ ಫಾರ್ಮ ಹೌಸಿಗೆ ಊಟಕ್ಕೆ ಬರುತ್ತಿದ್ದಾರೆಅಂತ ಹೇಳಿದರು,
ಉಮೇಶ್ ಕತ್ತಿ, ಎ.ಬಿ. ಪಾಟೀಲ್, ದಿವಂಗತ ಬಿ.ಬಿ .ಹಿರೇರೆಡ್ಡಿ, ದಿವಂಗತ ಚಂದ್ರಶೇಖರ್ ಮಾಮನಿ ,ಒಬ್ಬೊಬ್ಬರಾಗಿ ಬರತೊಡಗಿದರು .ಸರಿಯಾಗಿ ಒಂಬತ್ತುವರೆಗೆ ಜೆ.ಎಚ್ .ಪಟೇಲರು ಬಂದರು, ಅಂದಿನ ರಾತ್ರಿ ಅಲ್ಲಿಎಲ್ಲವೂ ಇತ್ತು ಜೆ.ಎಚ್. ಪಟೇಲರ ಹಾಸ್ಯಪ್ರಜ್ಞೆಯನ್ನು ಸ್ವಲ್ಪ ಹೊತ್ತು ನೋಡಿದೆ.
ನಂತರ ನನ್ನವಿರುದ್ಧ, ಹೊಟ್ಟೆಕಿಚ್ಚು ಪಡುವವರು, ಚಾಡಿ ಹೇಳುವವರು, ಒಂದು ಸಂಘವೇ ಅಂದಿನಿಂದ ಹುಟ್ಟಿಕೊಂಡಿತು . ನಂತರದ ಬೆಳವಣಿಗೆಯನ್ನು ಮುಂದಿನ ದಿನಮಾನದಲ್ಲಿ ಹೇಳುತ್ತೇನೆ.
ನಿಮ್ಮ
ಬಾಪುಗೌಡ ಪಾಟೀಲ್