ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು
96 -97 ನೇ ಸಾಲಿನಲ್ಲಿ ಮಾಳಗಿ ಅವರಿಗೆ ನನ್ನ ವಿರುದ್ಧ ಚಾಡಿ ಹೇಳುವರ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು.ನನ್ನನ್ನು ಭೂ ನ್ಯಾಯ ಮಂಡಳಿ ಸದಸ್ಯತ್ವದಿಂದ ತೆಗೆಬೇಕೆಂದು ಮಾಳಗಿ ಯವರಿಗೆ ಕೆಲವು “ಪರಮ್ಮ” ಗಳು ಕಿವಿ ತುಂಬಿದರು.ಸುದ್ದಿ ಗೊತ್ತಾದೊಡನೆ ನಾನು ರಾಜೀನಾಮೆ ಕೊಟ್ಟೆ.
ನಾರಿ ಮೇಸ್ತ್ರಿ ತಂದೆ ಫಾಲ್ಸ್ನಲ್ಲಿ ನೌಕರಿ ಮಾಡುತ್ತಿದ್ದರು , ನಾರಿ ಮೇಸ್ತ್ರಿ ತಾಯಿ ನಮ್ಮೂರಿನ ನಾಯಕ ಮನೆತನದವಳು, ನೌಕರಿ {RETIERD} ಆದ ಮೇಲೆ ಹುದಲಿಗೆ ಬಂದು ನೆಲೆಸಿತ್ತು ಆಕುಟುಂಬ.
ನಾರಿ ಮೇಸ್ತ್ರಿ ನನಗೆ ಪರಿಚಯವಾಗಿದ್ದ,ನಾರಿ ಮೇಸ್ತ್ರಿ ಮ ತ್ತು ಸತೀಶ್ ಸಾಹುಕಾರರು {CLASS MATES} ಒಂದು ದಿನ ಸತೀಶ್ ಸಾಹುಕಾರರು ನನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಹೇಳಿದ.
ನಾಲ್ಕಾರು ದಿನ ವಿಚಾರ ಮಾಡಿದೆ, ಹಿರೇಬಾಗೆವಾಡಿ ಕ್ಷೇತ್ರದಲ್ಲಿ ನನ್ನನ್ನ ನಂಬಿದ ಜನ ಅವರ ಆಸರೆಗೆ ರಾಜಕಾರಣಿಯೊಬ್ಬರ ಅಗತ್ಯವೂ ನನಗಿತ್ತು.ನಾಳೆ ಗೋಕಾಕಕ್ಕೆ ಹೋಗೋಣವೆಂದು ನಾರಿ ಮೇಸ್ತ್ರಿಗೆ ಹೇಳಿದೆ.
ಹಿಲ್ಲ ಗಾರ್ಡನ್ನಲ್ಲಿ{HILL GARDEN} ನಾಲ್ಕಾರು ಜನರ ಜೊತೆ ಸಮಸ್ಯೆಗಳನ್ನು ಆಲಿಸುತ್ತಾ ಸಾಹುಕಾರರು ಕುಳಿತಿದ್ದರು.ಎಂದು ಮುಖಾಮುಖಿಯಾಗದ ನಾನು ಸಾಹುಕಾರರು ಅಂದು ಮುಖಾಮುಖಿಯಾದೇವು.
ನಾನು ಬಾಪುಗೌಡ ಪಾಟೀಲ ಅಂತ ಪರಿಚಯಿಸಿಕೊಂಡೆ, ಬಾಪುಗೌಡ್ರೆ ನಿಮ್ಮ ಬಗ್ಗೆ ನನಗೆಲ್ಲಾ ಗೊತ್ತು ಅಂತ ನನ್ನನ್ನದಿಟ್ಟಿಸಿ ನೋಡಿದರು. ಅವರು ಜನರೊಂದಿಗೆ ಹೆಚ್ಚೇನೂಮಾತನಾಡುತಿರಲಿಲ್ಲ, ನಾನು ಹೆಚ್ಚೇನೂ ಮಾತನಾಡಲಿಲ್ಲ,ಚಹಾ ಸೇವಿಸಿ ಹೊರಡಲು ಅಣಿಯಾದೆ.
ಗೌಡ್ರು ನಾ ನಿಮ್ಮಜೊತೆ ಇರುತ್ತೇನೆ ಏನು ಕೆಲಸ ಇದ್ರೆ ಹೇಳಿ ಅಂತ ಅಂದ್ರು ನಾನು ತಲೆಯಾಡಿಸಿದೆ.
ನಿಮ್ಮ
ಬಾಪು ಗೌಡ ಪಾಟೀಲ್