ಬ್ಯಾಕ್ ಟು ಪೆವಿಲಿಯನ್ ಬಿ .ಕೆ .ಹರಿಪ್ರಸಾದ್,
ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿಯ ಹೆಸರೊಂದನ್ನು ಕರ್ನಾಟಕವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಸೂಚಿಸಿದೆ. ಅವರೇ ಬಿ .ಕೆ .ಹರಿಪ್ರಸಾದ್,
12 ವರ್ಷ ಗಳ ಕಾಲ ರಾಜ್ಯ ಸಭಾ ಸದಸ್ಯರಾಗಿದ್ದ ,ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕರ್ನಾಟಕದ ಹಿಂದುಳಿದ , (ಈ ಡಿಗ) ಸಮಾಜದ ನಾಯಕನನ್ನು ಮರಳಿ ಬೆಂಗಳೂರಿಗೆ ಕಳಿಸಿದ್ದರಿಂದ ಬೆಂಗಳೂರಿನ ರಾಜಕೀಯ ಪಡಸಾಲೆಯಲ್ಲಿ ಈ ವಿಷಯವು ಚರ್ಚೆಗೆ ಗ್ರಾಸವಾಗಿದೆ .
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪಕ್ಷಕ್ಕಾಗಿ ಸಂಪನ್ಮೂಲ ಕ್ರೂಢಿ ಕರಿಸುವ ಮಹತ್ವದ ಜವಾಬ್ದಾರಿಯುತ ಸ್ಥಾನ ದಲ್ಲಿದ್ದ ಬಿ ಕೆ ಹರಿಪ್ರಸಾದ್ ರನ್ನು ಬೆಂಗಳೂರಿಗೆ ಕಳಿಸಿದ್ದರಿಂದ “ಸಿದ್ದರಾಮಯ್ಯ ಅಂಡ್ ಟೀಮ್” ದಿಗಿಲು ಗೊಂಡಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಒಬ್ಬರೇ ಹಿಂದುಳಿದ ನಾಯಕರೆಂದು ಈ ವರೆಗೂ ಬಿಂಬಿತ ವಾಗುತ್ತಿತು
.ಈಗ ಧಿಡೀರನೆ ಹರಿಪ್ರಸಾದ್ ರನ್ನು ತವರು ಮನೆಗೆ ಕಳಸಿದ್ದರಿಂದ ಸಿದ್ದರಾಮಯ್ಯ ಟೀಂ ಹರಿಪ್ರಸಾದ್ ರನ್ನು ಒಪ್ಪಿಕೊಳ್ಳುತ್ತಾರೋ? ಇಲ್ಲವೋ?ಕಾದು ನೋಡಬೇಕಿದೆ..