Home / ಜಿಲ್ಲೆ / “ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ ,ನನ್ನ ಒಂದು ಕಣ್ಣು ಹೋಗಲಿ…”

“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ ,ನನ್ನ ಒಂದು ಕಣ್ಣು ಹೋಗಲಿ…”

Spread the love

“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ”

       “ನನ್ನ ಒಂದು ಕಣ್ಣು ಹೋಗಲಿ…”

         ಕತ್ತಿ ಸಹೋದರರು ಮತ್ತು ಕೋರೆ ಸಾಹುಕಾರ ಜಗಳ ಧೀರ್ಘಕ್ಕೆ ಹೋದದ್ದು ಕಳೆದ ಸಾರಿಯ  D.C.C.ಬ್ಯಾಂಕ ಚುನಾವಣೆಯ ಅಧ್ಯಕ್ಷರ ವಿಷಯದಲ್ಲಿ ಅಂದು ಹತ್ತಿದ ಆಬೆಂಕಿ ಇನ್ನೂ ಆರಿಲ್ಲ,ಮತ್ತು ಆರುವಂತೆಯು ಕಾಣುವದಿಲ್ಲ.

. ಇವರ ನ್ಯಾಯ ಬಗೆ ಹರಿಸಲು ಬಿಜೆಪಿ ಹಿರಿಯ ನಾಯಕರು, ಮುಖ್ಯ ಮಂತ್ರಿ ಯಡಿಯೂಪ್ಪನವರು , ಮಠಾಧೀಶರು, ಇವರನ್ನು ಒಂದು ಗುಡಿಸಲು ನಡೆಸಿದ ಪ್ರಯತ್ನಗಳು ವಿಫಲ ಗೊಂಡಿವೆ. ಇವರಿಬ್ಬರ ನ್ಯಾಯ ಬಗೆ ಹರಿಸಲು ವಿಫಲ ಗೊಂಡ್ ನಾಯಕರು ಇವರಿಬ್ಬರೂ ಮಾತು ಕೇಳುವ ಶಕ್ತಿಯೊಂದನ್ನು ಹುಡುಕುತ್ತಿದ್ದರು ಆ ಶಕ್ತಿ ಸಿಕ್ಕಿತು.

 

ಪರಮೇಶ್ವರ್ ನ  ಸನ್ನಿಧಿಯಲ್ಲಿ ಚರ್ಚೆ ಆರಂಭವಾಯಿತು, ಕೋರೆ ಸಾಹುಕಾರರು ಕತ್ತಿ ಸಾಹುಕಾರಗಳಿಗೆ ಮಾಡಿದ ಉಪಕಾರಗಳನ್ನೂ ಹೇಳಿದರೂ. ಕತ್ತಿ ಸಾಹುಕಾರರು ಕೋರೆ  ಸಾಹುಕಾರಗಳಿಗೆ ಮಾಡ್ಡಿದ ಉಪಕಾರಗಳನ್ನ ಹೇಳಿದರು. ಶಾಂತ ಚಿತ್ತವಾಗೀ ಆಲಿಸಿದ ಪರಮೇಶ್ವರ್ ಇಬ್ಬರಿಗೂ ವರ ನೀಡುತ್ತೇನೆ ಎಂದು ಹೇಳಿದರು.

  

ಕತ್ತಿ ಸಾಹುಕಾರರು ಕಳೆದಸಾರಿ ಎಂಪಿ ಟಿಕೆಟ ತಪ್ಪಿಸುವಲ್ಲಿ ಕೋರೆ ಸಾಹುಕಾರರ ಕೈವಾಡವಿದೆ,  ಮಂತ್ರಿ  ಸ್ಥಾನ ತಪ್ಪಿಸುವಲ್ಲಿ ಕೋರೆ ಸಾಹುಕಾರರ ಕೈವಾಡವಿದೆ, ಒಟ್ಟಾರೆ ಕೋರೆ ಸಾಹುಕಾರ ಮನಿ ಹಿಡದು ಕುಂಡರಬೇಕಂತ ಕತ್ತಿ ಸಾಹುಕಾರರು ಪ್ಲಾನ್ ಹಾಕಿದ್ದರು.

ಪರಮೇಶ್ವರ್ ಹತ್ತಿರ ಕತ್ತಿ ಸಾಹುಕಾರರು ಹಾಗೂ ಕೋರೆ ಸಾಹುಕಾರ  ಬೇಡಿಕೆ ಇಟ್ಟರು,ಕೊರೆಯವರ್ ಹಠವೇನೆಂದರೆ ಕತ್ತಿ ಯವರ್ ಕಿಂತ ನನಗೆ ಎರಡು ಪಟ್ಟುಹೆಚ್ಚು ಆಶೀರ್ವಾದ ನನಗೆ ಬೇಕು,ಕತ್ತಿ ಯವರೂ ಕೂಡ ಕೋರೆಯವರ ಕಿಂತಾ ಎರಡು ಪಟ್ಟು ಹೆಚ್ಚು ಆಶೀರ್ವಾದ ಬೇಕು ಎಂದು ಬೇಡಿಕೆ ಇಟ್ಟರು.

ಇವರ ಬೇಡಿಕೆ ಕೇಳಿ ಪರಮೇಶ್ವರ್ ನಿಗೇ ದಿಕ್ಕು ತೋಚದಂತಾಯಿತು,
ಇಬ್ಬರು ಪಟ್ಟುಸಡಿಲಿಸಲಿಲ್ಲ ಪರಮೇಶ್ವರ ವಿಚಾರ ಮಾಡಿ ಚೀಟಿ ಹಾಕುವ ಪ್ರಸ್ತಾಪ ವಿಟ್ಟ , ಇಬ್ಬರು ಒಪ್ಪಿದರು .

ಚೀಟಿ ಹಾಕಿದರು ಮೊದಲನೇ ಹೆಸರು ಕತ್ತಿ ಸಾಹುಕಾರರ ಹೆಸರಲ್ಲಿ ಚೀಟಿಬಂತು, ಹೇಗಾದರೂ ಮಾಡಿ ಕೊರಯವರನ್ನು ಮನೆಯಲ್ಲಿ ಕೂರಿಸುವ ಪ್ಲಾನ್ ಮಾಡಿದ್ದ ಕತ್ತಿ ಸಾಹುಕಾರರು ನನ್ನ ಒಂದು ಕಣ್ಣು ಹೋಗಲಿ ಎಂದು ಪರಮೇಶ್ವರನಲ್ಲಿ ಬೇಡಿ ಕೊಂಡರು,

ಎರಡು ಪಟ್ಟು ಆಶೀರ್ವಾದ ಕೇಳಿದ್ದ ಕೋರೆ ಅವರು ಎರಡು ಕಣ್ಣನು ಕಳೆದು ಕೊಂಡರು.

ಆಗ ಆಕಾಶವಾಣಿಯಲ್ಲಿ ತೇಲಿಬಂದ ಒಂದು ಮನುಷ್ಯ ಆಕೃತಿ ನಾನು ಈರಣ್ಣ ಕಡಾಡಿ ರಾಜ್ಯ ಸಭಾ ಸದಸ್ಯ ಎಂದು ಹೇಳಿತು..


Spread the love

About Admin Bapu

Check Also

ಚಿಕ್ಕೋಡಿ ಲೋಕ್ ಸಭಾ ಕ್ಷೇತ್ರ ನಮ್ಮ ಸಾಬ ತಂದ ವರದಿ ಖರೆ ಆತು…!

Spread the loveಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು …

Leave a Reply

Your email address will not be published. Required fields are marked *